ದಾವಣಗೆರೆ ಆ.28
ಸೆ.19 ರಂದು ದೇಶದಲ್ಲಿ ಪ್ರಪ್ರಥಮವಾಗಿ ಮೆಗಾ ಇ-
ಲೋಕ ಅದಾಲತ್ ಮಾಡುವ ದೃಷ್ಟಿಯಿಂದ ಕಾರ್ಯ
ಪ್ರಾರಂಭ ಮಾಡಲಾಗಿದೆ ಎಂದ ರಾಜ್ಯ ಕಾನೂನು ಸೇವಾ
ಪ್ರಾಧಿಕಾರದ ಅಧ್ಯಕ್ಷರು ಹಾಗೂ ರಾಜ್ಯ ಉಚ್ಚ
ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಅರವಿಂದ
ಕುಮಾರ್ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ
ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಮೆಗಾ ಇ-ಲೋಕ ಅದಾಲತ್ ಉದ್ದೇಶ
ಸರ್ವರಿಗೂ ನ್ಯಾಯ ಒದಗಿಸುವುದಾಗಿದೆ. ಜಾತಿ, ಧರ್ಮ, ಆರ್ಥಿಕ
ಸ್ಥಿತಿ ಹಾಗೂ ಯಾವುದೇ ಮತ ಪಂಥ ಬೇಧವಿಲ್ಲದೆ ಎಲ್ಲರಿಗೂ
ಸಮಾನ ಅವಕಾಶ ನೀಡುವುದಾಗಿದೆ ಎಂದರು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ
ಇತ್ಯರ್ಥದ ಉದ್ದೇಶದಿಂದ ಮೆಗಾ ಇ-ಲೋಕ ಅದಾಲತ್
ಆರಂಭವಾಗಿದ್ದು, ಸೆ.19 ರವರೆಗೆ ಈ ಅದಾಲತ್ ಮುಖಾಂತರ
ಕಕ್ಷಿದಾರರು ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ
ಪ್ರಕರಣಗಳನ್ನು ರಾಜೀ ಮಾಡಿಕೊಳ್ಳಬಹುದು ಎಂದು
ತಿಳಿಸಿದರು.
ಎರಡು ಪಕ್ಷದ ಕಕ್ಷಿಗಾರರು ಹಾಗೂ
ನ್ಯಾಯಾವಾದಿಗಳು ಹಾಗೂ ನ್ಯಾಯಾಧೀಶರು ಈ ಅದಾಲತ್‍ನಲ್ಲಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕಷ ಚರ್ಚಿಸಿ ರಾಜೀ
ಮಾಡುವ ಮುಖಾಂತರ ಪಕ್ಷಗಾರರಿಗೆ ಶೀಘ್ರ ಹಾಗೂ
ಪಾರದರ್ಶಕ ನ್ಯಾಯದಾನವನ್ನು ಮೆಗಾ ಇ-ಲೋಕ ಅದಾಲತ್
ಮುಖಾಂತರ ನೀಡಲಾಗುವುದು ಎಂದರು.
ಮೆಗಾ ಇ-ಲೋಕ ಅದಾಲತ್‍ನಲ್ಲಿ ಮೋಟಾರ್ ವಾಹನ ಅಪಘಾತ
ಪರಿಹಾರದ ಪ್ರಕರಣಗಳು, ವೈವಾಹಿಕ ಅಥವಾ ಜೀವನಾಂಶ
ಪ್ರಕರಣಗಳು, ಕುಟುಂಬ ವಿವಾದಗಳು ಕಾನೂನಿನನ್ವಯ
ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ
ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳು, ರಾಜಿ
ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು
ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ವಿಡಿಯೋ ಕಾನ್ಪ್‍ರೇನ್ಸ್ ಮೂಲಕ ಪಕ್ಷಗಾರರನ್ನು
ಸಂಪರ್ಕಿಸಿ ಹಾಗೂ ಕರೆಸಿ ಅವರು ರಾಜೀಯಾಗುವಂತಿದ್ದರೆ
ಅವರ ಮಧ್ಯೆ ಮಾತನಾಡಿ ರಾಜಿ ಸಂಧಾನದಿಂದ ತೀರ್ಪು
ಪ್ರಕಟಿಸಬಹುದಾಗಿದೆ. ಪಕ್ಷಗಾರರು ಯಾವುದೇ
ಭಯಭೀತಿ ಇಲ್ಲದೆ ನಿರ್ಭಿತಿಯಿಂದ ತಾವು ರಾಜೀ
ಮಾಡಿಕೊಳ್ಳುವ ಎಲ್ಲ ಪ್ರಕರಣಗಳನ್ನು ಅವರು ಸ್ವತಃ
ನ್ಯಾಯಾಲಕ್ಕೆ ಅಥವಾ ವಕೀಲರ ಮೂಲಕ ಹಾಜರಾಗಿ
ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲಿ ಎಂಬ
ಸದುದ್ದೇಶದಿಂದ ಮೆಗಾ ಇ-ಲೋಕ ಅದಾಲತ್ ಮಾಡಲಾಗಿದೆ
ಎಂದರು.
ಮೆಗಾ ಇ-ಲೋಕ ಅದಾಲತ್‍ಗಾಗಿ 2.5 ತಿಂಗಳು ಚರ್ಚೆ ಮಾಡಿ
ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ನಾವು ಈ ಹಿಂದೆ 4
ಸಭೆಗಳನ್ನು ಹಮ್ಮಿಕೊಂಡಿದ್ದೇವು. ಎಲ್ಲರಿಗೂ ಪರಿಹಾರ
ನ್ಯಾಯ ಒದಗಿಸಲು ಅವಕಾಶ ಇದೆ. ಹಾಗಾಗಿ ಮಾಧ್ಯಮ
ಮೂಲಕ ಈ ವಿಷಯವನ್ನು ಪ್ರಚುರ ಪಡಿಸಬೇಕೆಂದು
ಮನವಿ ಮಾಡಿದರು.
ಕಾನ್ಫರೆನ್ಸ್ ಬಳಿಕ ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರಾದ ಕೆ.ಬಿ.ಗೀತಾ ಮಾತನಾಡಿ, ಮೆಗಾ ಇ-ಲೋಕ
ಅದಾಲತ್ ಮಾಡುವ ಸದುದ್ದೇಶದಿಂದ ಸುದ್ದಿಗೋಷ್ಠಿ
ಕರೆಯಲಾಗಿದೆ. ಪಕ್ಷಗಾರರು ರಾಜೀ ಮಾಡಿಕೊಳ್ಳಬೇಕೆಂಬ
ಮನಸ್ಸು ಮಾಡಿದ ಪ್ರಕರಣಗಳಲ್ಲಿ ನಾವು ರಾಜೀ ಸಂದಾನದ
ಮೂಲಕ ಸಮಸ್ಯೆ ಪ್ರಕರಣ ಬಗೆ ಹರಿಸುವುದು ಇದರ
ಮೂಲ ಉದ್ದೇಶವಾಗಿದೆ ಎಂದರು.
ಈಗಾಗÀಲೇ ಅತೀ ಹೆಚ್ಚು ಪ್ರಕರಣಗಳ ಬಾಕಿ ಇವೆ.
ಅವಶ್ಯಕತೆ ಇರುವ ಪ್ರಕರಣಗಳನ್ನು ನಾವು
ನ್ಯಾಯಾಧೀಶರು ಹೆಚ್ಚು ಸಮಯ ಕೊಡಲು
ಸಾಧ್ಯವಾಗುತ್ತದೆ. ಅಷ್ಟಲ್ಲದೇ ಕಕ್ಷಿದಾರರಿಗೂ ಸಹ
ಪಕ್ಷಗಾರರು ಇಬ್ಬರು ರಾಜೀ ಸಂಧಾನದ ಮೂಲಕ
ತೀರ್ಮಾನ ಮಾಡಿಕೊಂಡಾಗ ಒಂದು ಸಮಾಧಾನ ಸಂತೃಪ್ತಿ
ಸಿಗುತ್ತದೆ. ಇದರಿಂದ ಪರಸ್ಪರ ವೈಮನಸು
ಕಡಿಮೆಯಾಗುತ್ತದೆ. ಈ ಎಲ್ಲಾ ಮೂಲ ಉದ್ದೇಶದಿಂದ 2
ತಿಂಗಳಿಗೊಮ್ಮೆ ಲೋಕ ಅದಾಲತ್ ಮಾಡುತ್ತಿದ್ದೇವು.
ಕೋವಿಡ್‍ನಿಂದ 5 ತಿಂಗಳಿಂದ ಜನತಾ ಕಾರ್ಯಲಯದಿಂದ
ಯಾವುದೇ ಕಾರ್ಯ ಕಲಾಪಗಳು ನಡೆಯದೆ
ಸ್ಥಗಿತಗೊಂಡಿದ್ದವು. ಆದ್ದರಿಂದ ಜನರಿಗೆ ಅನುಕೂಲ ಹಾಗೂ
ಪಕ್ಷಗಾರರಿಗೆ ಅನಾನುಕೂಲವಾಗಬಾರದು ಎಂಬ
ಉದ್ದೇಶದಿಂದ ಮೆಗಾ ಇ-ಲೋಕ ಅದಾಲತ್ ಮಾಡುತ್ತಿದ್ದೇವೆ
ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಸದಸ್ಯ ಕಾರ್ಯದರ್ಶಿ ಸಾಬಪ್ಪ, ರಾಜ್ಯ ಕಾನೂನು ಸೇವಾ
ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್ ಕುಮಾರ್, ಮುಖ್ಯ
ಆಡಳಿತಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.