ದಾವಣಗೆರೆ ಆ.29
ಕೆಲ ದಿನಗಳಿಂದ ರೈತರ ಮನೆ ಬಾಗಿಲಿಗೆ ಅನಾಮಧೇಯ
ಮೂಲಗಳಿಂದ ಬೀಜಗಳ ಪೊಟ್ಟಣಗಳು ಸಾಗಾಣಿಕೆಯಾಗುತ್ತಿರುವ
ಆತಂಕಕಾರಿ ವಿಷಯವು ದೇಶದಲ್ಲಿ ಕಂಡು ಬರುತ್ತಿದ್ದು, ಇಂತಹ
ಬಿತ್ತನೆ ಬೀಜಗಳನ್ನು ಯಾರು ಕಳುಹಿಸುತ್ತಿದ್ದಾರೆ, ಎಲ್ಲಿಂದ
ಬರುತ್ತಿವೆ ಎಂಬ ಮಾಹಿತಿ ಇರುವುದಿಲ್ಲ. ಇದನ್ನು ಸೀಡ್ ಟೆರರಿಸಂ (ಬೀಜ
ಭಯೋತ್ಪಾದನೆ), ಕೃಷಿ ಉತ್ಪನ್ನಗಳ ಕಳ್ಳ ಸಾಗಾಣಿಕೆ (ಬ್ರಷಿಂಗ್
ಸ್ಕ್ಯಾಮ್) ಎಂಬ ಹೆಸರುಗಳಿಂದ ಕರೆಯಲಾಗುತ್ತಿದೆ.
ಈ ಬೀಜಗಳು ಹೊರಗಿನ ಆಕ್ರಮಣಕಾರಿ ಜಾತಿಗಳಾಗಿರಬಹುದು
ಅಥವಾ ರೋಗಕಾರಕಗಳಾಗಿರಬಹುದು. ಈ ಬೀಜಗಳ ಬಳಕೆಯಿಂದ
ಕೃಷಿ ಪರಿಸರ ವ್ಯವಸ್ಥೆಗೆ, ಜೀವ ವೈವಿಧ್ಯತೆಗೆ ಹಾಗೂ ರಾಷ್ಟ್ರ
ಭದ್ರತೆಗೆ ಗಂಭೀರ ಅಪಾಯವಾಗಬಹುದು ಎಂದು ಶಂಕಿಸಲಾಗಿದೆ.
ಆದ್ದರಿಂದ ರೈತರು ಹಾಗೂ ಸಾರ್ವಜನಿಕರು ಈ ಬಗ್ಗೆ ಬಹಳಷ್ಟು
ಎಚ್ಚರಿಕೆ ವಹಿಸಲು ಹಾಗೂ ಯಾವುದಾದರೂ ಅನಾಮಧೇಯ
ಮೂಲಗಳಿಂದ ಪಾರ್ಸಲ್‍ಗಳು ಬಂದಲ್ಲಿ ಅವುಗಳನ್ನು ತೆರೆಯದೇ
ಸಮೀಪದ ರೈತ ಸಂಪರ್ಕ ಕೇಂದ್ರಗಳು, ಸಹಾಯಕ ಕೃಷಿ
ನಿರ್ದೇಶಕರ ಕಚೇರಿಗೆ ಹಾಗೂ ಸಮೀಪದ ಪೊಲೀಸ್ ಠಾಣೆಗೆ ವಿಷಯ
ತಿಳಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರ ಶ್ರೀನಿವಾಸ್ ಚಿಂತಾಲ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.