ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆ 31ರಂದು ಇಂದು ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು.ಹಿರೇಕಲ್ಮಠ…
ಹೊನ್ನಾಳಿಯಲ್ಲಿ ಸತತ ಮೂವತ್ತೇಳು ವರ್ಷಗಳಿಂದ ಪ್ರಥಮ ದರ್ಜೆ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸಿ ಇಂದು ವಯೋನಿವೃತ್ತರಾದ ನ್ಯಾಮತಿಯ ಪ್ರಜಾವಾಣಿ ವರದಿಗಾರರೂ ಆದ ಶ್ರೀಯುತ ಡಿ.ಎಂ.ಹಾಲಾರಾಧ್ಯರವರನ್ನು ಕಾಲೇಜಿನ ಆಡಳಿತ ಮಂಡಳಿಯಿಂದ ಆತ್ಮೀಯವಾಗಿ ಬೀಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು,ಸಿಬ್ಬಂದಿ ಹಾಗೂ ಪತ್ರಕರ್ತರಾದ ಉದಯವಾಣಿಯ ವಿಜಯಾನಂದಸ್ವಾಮಿ,ಕನ್ನಡಪ್ರಭ ಪತ್ರಿಕೆಯ ಜಿ.ಹೆಚ್.ರಾಜು,ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಎಂ.ಪಿ.ಎಂ.ಷಣ್ಮುಖಯ್ಯ,ಎ.ಬಿಸಿ ನ್ಯೂಸ್ ಸಂಪಾದಕರಾದ ಅರವಿಂದ್ ಎಸ್,ಉದಯಕರ್ನಾಟಕ ಪೆಪರ್ ಉಪ ಸಂಪಾದಕರಾದ ಅರಣ್ ಮಾಸಡಿ , ಪತ್ರಕರ್ತರುಗಳಾದ ಶಕಿಲ್ ಅಹಮದ್ ರವರು ಅವರಿಗೆ ಹಾರೈಸಿದ್ದಾರೆ ಹಾಗೂ ಇನ್ನು
ಮೊದಲಾದವರು ಸಹ ಹಾಜರಾಗಿದ್ದರು.ಶ್ರೀಯುತರ ವಿಶ್ರಾಂತ ಜೀವನವು ಸುಖಮಯವಾಗಿರಲೆಂದು ಈ ಮೂಲಕ ಎಲ್ಲರೂ ಹಾರೈಸಿದರು.