ದಾವಣಗೆರೆ ಸೆ.01
ಭಾರತದ ಮಾಜಿರಾಷ್ಟ್ರಪತಿ, ಭಾರತರತ್ನ, ಮುತ್ಸದ್ಧಿ
ರಾಜಕಾರಣಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ದಾವಣಗೆರೆ
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತೀವ್ರ
ಸಂತಾಪ ವ್ಯಕ್ತಪಡಿಸಿದ್ದಾರೆ.ದೇಶದ ಅತ್ಯುನ್ನತ ಸ್ಥಾನದಲ್ಲಿದ್ದು,

ಅತ್ಯಂತ ಪ್ರಭಾವಶಾಲಿ ರಾಜಕಾರಣಿಯಾಗಿದ್ದರೂ ಯಾವುದೇ
ಹಮ್ಮು ಬಿಮ್ಮುಗಳಿಲ್ಲದ ಸರಳ ವ್ಯಕ್ತಿತ್ವದ ಮೂಲಕ ಎಲ್ಲರ
ಗಮನ ಸೆಳೆದ ವಿಶಿಷ್ಟ ವ್ಯಕ್ತಿ.
ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಕ್ಲಾರ್ಕ್‍ಆಗಿದ್ದ ಮುಖರ್ಜಿ ಅವರು
ಇತಿಹಾಸ, ರಾಜಕೀಯ ವಿಜ್ಞಾನ ಮತ್ತು ಕಾನೂನು ವಿಷಯಗಳಲ್ಲಿ
ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿದ್ದವರು.
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ,
ಪತ್ರಕರ್ತರಾಗಿಯೂಕಾರ್ಯ ನಿರ್ವಹಿಸಿದ್ದರು.ಅವರ ವಿದ್ವತ್,
ರಾಜಕೀಯವಿಚಾರಗಳು, ಆರ್ಥಿಕ ಯೋಜನೆಗಳು, ದೇಶಾಭಿಮಾನ,
ಸ್ವಾಭಿಮಾನದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದರು ಎಂದು
ಪ್ರೋ. ಹಲಸೆ ಹೇಳಿದರು..
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಒತ್ತಾಸೆಯಿಂದ ರಾಜ್ಯಸಭೆ
ಪ್ರವೇಶಿಸಿದರು. ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ
ಪ್ರಣಬ್‍ಅವರು ಹಣಕಾಸು ಸಚಿವರಾಗಿ ಖ್ಯಾತಿ ಗಳಿಸಿದರೂ ರಕ್ಷಣೆ,
ವಿದೇಶಾಂಗ, ವಾಣಿಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಕೆಲಸಕ್ಕೆ
ಎಂದೂ ರಜೆ ಹಾಕದಿದ್ದ ಅವರು ದಿನವೂ 18 ಗಂಟೆ ಕೆಲಸ
ಮಾಡುತ್ತಿದ್ದರು. ದಿನಚರಿ ಬರೆಯುವ ಹವ್ಯಾಸವನ್ನೂ
ರೂಢಿಸಿಕೊಂಡಿದ್ದ ಅವರು ಶಾಲಾ ಮಕ್ಕಳಿಗೆ ಭಾರತದ ರಾಜಕೀಯ
ಮತ್ತು ಇತಿಹಾಸದ ಪಾಠವನ್ನೂ ಮಾಡಿದ್ದರು. ಇದು ಎಲ್ಲರಿಗೂ
ಮಾದರಿಯಾಗಿದೆ.ಅವರ ನಿಧನದಿಂದ ದೇಶವು ಅತ್ಯಂತ ಮುತ್ಸದ್ಧಿ,
ಪ್ರಬುದ್ಧ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು
ಸ್ಮರಿಸಿದರು.
ರಾಜಕೀಯವಾಗಿ ಪ್ರಮುಖ ಖಾತೆಗಳ ಸಚಿವರಾಗಿಕಾರ್ಯ
ನಿರ್ವಹಿಸಿದ್ದ ಅವರು, ಹಲವು ಏಳುಬೀಳುಗಳನ್ನು, ನೋವು,
ಸಂಕಷ್ಟಗಳನ್ನು ಎದುರಿಸಿ, ಅಸಮಾಧಾನಗಳಿಗೂ
ತುತ್ತಾಗಿದ್ದರು.ಅವುಗಳನ್ನು ಸಮರ್ಪಕವಾಗಿ, ತಾಳ್ಮೆಯಿಂದ
ಎದುರಿಸಿ ತಮ್ಮ ವಿಚಾರ, ಮೌಲ್ಯಗಳ ಮೂಲಕ ಬದ್ಧತೆ ಮೆರೆದಿದ್ದರು.
2019ರಲ್ಲಿ ಭಾರತರತ್ನಗೌರವಕ್ಕೂ ಪಾತ್ರರಾಗಿದ್ದರು.ಅವರ
ಸಾಧನೆ, ಶ್ರಮಎಲ್ಲರಿಗೂ ಪ್ರೇರಣೆಯಾಗಿದೆ.ಯುವಜನರು,
ವಿದ್ಯಾರ್ಥಿಗಳು ಅವರಜೀವನ ಮೌಲ್ಯ, ಸಾಧನೆ, ತಾಳ್ಮೆಯ
ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *