ದಾವಣಗೆರೆ ಸೆ.02
ಜಿಲ್ಲೆಯಲ್ಲಿ ಸೆ.1 ರಂದು 6.0 ಮಿ.ಮೀ. ಸರಾಸರಿ ಮಳೆಯಾಗಿದ್ದು,
ತಾಲ್ಲೂಕುವಾರು ಮಳೆ ಮತ್ತು ಹಾನಿ ವಿವರ ಈ ಕೆಳಕಂಡಂತಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 3.0 ವಾಡಿಕೆಗೆ 10.0 ಮಿ.ಮೀ ವಾಸ್ತವ
ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 6.0 ವಾಡಿಕೆಗೆ 4.0 ಮಿ.ಮೀ
ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 3.0 ವಾಡಿಕೆಗೆ 3.0 ಮಿ.ಮೀ
ವಾಸ್ತವ ಮಳೆಯಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 2.0 ವಾಡಿಕೆಗೆ 1.0
ಮಿ.ಮೀ ವಾಸ್ತವ ಮಳೆಯಾಗಿದೆ. ಜಗಳೂರು ತಾಲ್ಲೂಕಿನಲ್ಲಿ 1.0
ವಾಡಿಕೆಗೆ 6.0 ಮಿ.ಮೀ ವಾಸ್ತವ ಮಳೆಯಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ 2.0
ವಾಡಿಕೆಗೆ 3.0 ಮಿ.ಮೀ ವಾಸ್ತವ ಮಳೆಯಾಗಿದೆ. ಈಲ್ಲೆಯಲ್ಲಿ ಸರಾಸರಿ 3.0
ವಾಡಿಕೆಗೆ 6.0 ಮಿ.ಮೀ ವಾಸ್ತವ ಮಳೆಯಾಗಿದೆ.
ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದಲ್ಲಿ 30 ಎಕರೆ ಮೆಕ್ಕೆ
ಜೋಳದ ಬೆಳೆ ಹಾನಿಯಾಗಿದ್ದು ರೂ. 1.60 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ. ನ್ಯಾಮತಿ ತಾಲ್ಲೂಕಿನಲ್ಲಿ 1 ಪಕ್ಕಾ ಮನೆ ಮತ್ತು 1
ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು ರೂ. 25 ಸಾವಿರದಂತೆ ಒಟ್ಟು
ರೂ. 50 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ
ತಾಲ್ಲೂಕಿನಲ್ಲಿ 2 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು ರೂ. 40 ಸಾವಿರ
ಅಂದಾಜು ನಷ್ಟ ಸಂಭವಿಸಿರುತ್ತದೆ.
ಜಿಲ್ಲೆಯಲ್ಲಿ ಒಟ್ಟಾರೆ ರೂ. 2.50 ಲಕ್ಷ ಅಂದಾಜು ನÀಷ್ಟ
ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿಯನ್ವಯ
ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು
ಪ್ರಕಟಣೆ ತಿಳಿಸಿದೆ.