ದಾವಣಗೆರೆ ಸೆ.2
    ಜಿಲ್ಲೆಯಲ್ಲಿನ ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ
ಪಿಂಚಣಿದಾರರರು ಆಗಸ್ಟ್ ಮಾಹೆಯಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ
ಮಾತ್ರ ಪಿಂಚಣಿಯನ್ನು ಪಡೆಯಬಹುದಾಗಿದೆ.

    ಸರ್ಕಾರದ ಆದೇಶದನ್ವಯ 5 ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ
ಪಿಂಚಣಿ ಸೌಲಭ್ಯ ಲಭ್ಯವಿದ್ದು, ಎಸ್‍ಬಿಐ ಬ್ಯಾಂಕ್‍ನಲ್ಲಿ ಪಡೆಯಬಹುದು.
ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದವರು
ಕೆನರಾ ಬ್ಯಾಂಕ್‍ನಿಂದ ಪಡೆಯಬಹುದು.
     ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ
ಖಾತೆ ಹೊಂದಿದವರು ಬ್ಯಾಂಕ್ ಆಫ್ ಬರೋಡದಲ್ಲಿ ಪಡೆಯಬಹುದಾಗಿದೆ.
ಜೊತೆಗೆ ಕಾರ್ಪೊರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಮತ್ತು ಆಂಧ್ರ ಬ್ಯಾಂಕ್‍ಗಳಲ್ಲಿ ಪಿಂಚಣಿ ಪಡೆಯುತ್ತಿರುವವರು
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಾತ್ರ ಪಿಂಚಣಿ ಸೌಲಭ್ಯ
ಪಡೆಯಬಹುದು.
    ಮೇಲ್ಕಂಡ ಬ್ಯಾಂಕ್‍ಗಳಲ್ಲಿ ಹೊರತುಪಡಿಸಿ ಉಳಿದ ಬ್ಯಾಂಕ್‍ಗಳಲ್ಲಿ
ಪಿಂಚಣಿಯನ್ನು ಪಡೆಯುತ್ತಿರುವ ಪಿಂಚಣಿದಾರರು ಕೂಡಲೇ
ತಮ್ಮ ಪಿಂಚಣಿಯನ್ನು ಮೇಲ್ಕಂಡ ಬ್ಯಾಂಕ್‍ಗಳಲ್ಲಿ
ವರ್ಗಾಯಿಸತಕ್ಕದ್ದು. ಆಗಸ್ಟ್-20 ರಿಂದ ಮೇಲ್ಕಂಡ ಬ್ಯಾಂಕ್‍ಗಳಲ್ಲಿ
ಮಾತ್ರ ಪಿಂಚಣಿಯನ್ನು ಪಾವತಿಸಲಾಗುವುದು ಎಂದು ಜಿಲ್ಲಾ ಖಜಾನೆ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *