ದಾವಣಗೆರೆ ಸೆ.2

ಕೋವಿಡ್-19 ಸಂದರ್ಭದಲ್ಲಿ ಸಾಮಾನ್ಯವಾಗಿ ಕೆಮ್ಮು, ಜ್ವರ, ಮತ್ತು ಇತರೆ ರೋಗಗಳಿಂದ ಬಳಲುತ್ತಿರುವವರು ಈ ಸಂಜಿವಿನಿ ಆಪ್ ಬಳಸಿ ವೈದ್ಯರೊಂದಿಗೆ ಸಂದರ್ಶಿಸಿ ಆರ್ಯೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಕೋವಿಡ್-19 ತಡೆಗಟ್ಟುವ ಸಲುವಾಗಿ ಭಾರತ ಸರ್ಕಾರವು ಸಾರ್ವಜನಿಕರಿಗೆ ಮನೆಯಲ್ಲಿಯೆ ಇದ್ದು ಸುರಕ್ಷಿತವಾಗಿ ಚಿಕಿತ್ಸೆ ಪಡೆಯುವಂತೆ ಕೇಂದ್ರ ಆರ್ಯೋಗ್ಯ ಮಂತ್ರಾಲಯವು ರಾಷ್ಟ್ರೀಯ ಟೆಲಿ ಸಮಾಲೋಚನ ಸೇವೆ ಎಂಬ ಹೆಸರಿನಲ್ಲಿ ಈ ಆ್ಯಪ್ ಸಿದ್ದ ಪಡಿಸಲಾಗಿದೆ.

ಆಸ್ವತ್ರೆಗೆ ತೆರಳಲು ಸಾಧ್ಯವಾಗದಿದ್ದವರು ಮೊಬೈಲ್ ಮೂಲಕ ವೈದ್ಯರು ತಮಗೆ ಚಿಕಿತ್ಸೆಯನ್ನು ನೀಡುವ ಅವಕಾಶವನ್ನು ಈ ಸಂಜೀವಿನಿ ಆಪ್ ಮೂಲಕ ವಿಡೀಯೊ ಕಾಲ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು.

ಈ ಸಂಜೀವಿನಿ ಆಪ್ ಬಳಸುವ ವಿಧಾನ ಟೆಲಿ ಸಮಾಲೋಚನೆ ಸೇವೆ ಪಡೆಯಲು ಮೊಬೈಲ್‍ನಲ್ಲಿ ಪ್ಲೆ ಸ್ಟೋರ್, ಅಥವಾ ಕಂಪ್ಯೂಟರ್ ಗೂಗಲ್‍ನಲ್ಲಿ ಈ ಸಂಜೀವಿನಿ ಓ.ಪಿ.ಡಿ ಎಂದು ನಮೂದಿಸಬೇಕು ಆಗ ನಿಮಗೊಂದು ಕೇಂದ್ರ ಸಚಿವಾಲಯದ ಮುಖಪುಟ ತರೆದುಕೊಳ್ಳುತ್ತದೆ.

ನಂತರ ಅದನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು, ನಂತರರ ಇದರಲ್ಲಿ ಪೇಶೆಂಟ್ ರಿಜಿಸ್ಟ್ರೇಷನ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ ನಿಮ್ಮಗೊಂದು ಓಟಿಪಿ ಸಂಖ್ಯೆ ಬರಲಿದೆ ಆ ಓಟಿಪಿ ಸಂಖ್ಯೆಯನ್ನು ನಮೂದಿಸಿದರೆ ರಿಜೀಸ್ಟ್ರೇಷನ್ ಅಪ್ಲಿಕೇಶನ್ ತರೆದುಕೊಳ್ಳುತ್ತದೆ ಇದರಲ್ಲಿ ರೋಗಿಯ ಹೆಸರು ಲಿಂಗ, ವಯಸ್ಸು, ಮೊಬೈಲ್‍ನಂಬರ್ ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು ನಂತರ ನಿಮ್ಮಗೊಂದು ಟೋಕನ್ ನಂಬರ್ ಬರಲಿದೆ ಈ ಟೋಕನ್ ನಂಬರ್ ನೀಡಿ ವೈದ್ಯರನ್ನು ವಿಡೀಯೊ ಕಾಲ ಮೂಲಕ ಸಂಪರ್ಕಿಸಬಹುದಾಗಿದೆ.

ಈ ಸೇವೆಯು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *