ಶಿವಮೊಗ್ಗ: ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘವಾದ
ಕಲಾವಿದರು ಒಕ್ಕೂಟ'ವುಕೋವಿಡ್ 19′ ವಿಷಯವಾಗಿ ರಾಜ್ಯಮಟ್ಟದ
ನಾಟಕ ರಚನಾ ಸ್ಪರ್ಧೆಯನ್ನು ಏರ್ಪಡಿಸಿದೆ.
ಲಾಕ್ ಡೌನ್ ನಂತರದ ಕಾಲದ ಸಾವು, ನೋವು, ಸಂಘರ್ಷ,
ಸಾಮರಸ್ಯ, ಪ್ರೀತಿ, ಪ್ರೇಮ, ಕಾಮ, ವಲಸೆ, ಆರ್ಥಿಕತೆ, ಭ್ರಷ್ಟಾಚಾರ,
ರಾಜಕೀಯ ಇತ್ಯಾದಿ ವಿಷಯಗಳನ್ನೊಳಗೊಂಡ ಕೃತಿ
ಇದಾಗಿರಬೇಕು. 5ರಿಂದ 8 ಸಾವಿರ ಪದಗಳ ಮಿತಿಯಲ್ಲಿರಬೇಕು.
ನಾಟಕದ ಪ್ರದರ್ಶನ ಅವಧಿಯು 1ರಿಂದ 1.30 ಗಂಟೆಗೆ
ಹೊಂದುವಂತಿರಬೇಕು. ಸ್ವತಂತ್ರ್ಯ ಕೃತಿ ಆಗಿರಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಞಚಿಟಚಿviಜಚಿಡಿusmg@gmಚಿiಟ.ಛಿom
ವಿಳಾಸಕ್ಕೆ ಮೇಲ್ ಮಾಡುವ ಮೂಲಕ ಅಥವಾ ದೂರವಾಣಿ
9449201919, 9844518866, 9448138183 ಸಂಪರ್ಕಿಸಿ ನೊಂದಾಯಿಸಬೇಕು.
ನಂತರ ಅವರಿಗೆ ಸಂಪೂರ್ಣ ನಿಯಮಾವಳಿಗಳ ಮಾಹಿತಿ
ನೀಡಲಾಗುವುದು.
ಲೇಖಕರು ನಾಟಕದ ಮೂರು ಪ್ರತಿಗಳನ್ನು 2020ರ ಅಕ್ಟೋಬರ್
30ರ ಒಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸಬೇಕೆಂದು ಒಕ್ಕೂಟದ
ಪ್ರಧಾನ ಕಾರ್ಯದರ್ಶಿ ಲವ ಜಿ.ಆರ್. ಅವರು ಕೋರಿದ್ದಾರೆ.
ವಿಳಾಸ- ಕೊಟ್ರಪ್ಪ ಜಿ. ಹಿರೇಮಾಗಡಿ, ಅಧ್ಯಕ್ಷರು, ಕಲಾವಿದರು
ಒಕ್ಕೂಟ, `ಕೊಹಿಮಾ, 2ನೇ ಮುಖ್ಯರಸ್ತೆ, 6ನೇ ತಿರುವು, ಅಶೋಕ
ನಗರ, ಶಿವಮೊಗ್ಗ – 577205.

Leave a Reply

Your email address will not be published. Required fields are marked *