ದಾವಣಗೆರೆ ಸೆ.04
       ಕರ್ನಾಟಕ ಸರ್ಕಾರದ ನಿಯಮಾನುಸಾರ ಕರ್ನಾಟಕ ಯಕ್ಷಗಾನ
ಅಕಾಡೆಮಿಯು  ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ವಾರ್ಷಿಕ ಗೌರವ
ಪ್ರಶಸ್ತಿಗೆ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಪುಸ್ತಕ ಪ್ರಶಸ್ತಿಗೆ 4
ವಿಭಾಗಗಳಲ್ಲಿ  ಆಯ್ಕೆಮಾಡಲಾಗಿರುತ್ತದೆ.
 ಪ್ರಶಸ್ತಿ ಪ್ರಧಾನ ಸಮಾರಂಭವು 2020ರ ಅಕ್ಟೋಬರ್‍ನಲ್ಲಿ
ನಡೆಯಲ್ಲಿದ್ದು, ಕೋವಿಡ್-19ರ ಸಾಮಾಜಿಕ  ಅಂತರವನ್ನು
ಕಾಯ್ದುಕೊಂಡು ಮಾಸ್ಕ್ ಧರಿಸಿ ಕಡಿಮೆ ಜನರೊಂದಿಗೆ ಈ ಕೆಳಕಂಡ 4

ವಿಭಾಗಗಳಲ್ಲಿ 19 ಜನ ಪ್ರಶಸ್ತಿ ಪುರಸ್ಕøತರಿಗೆ ಕೊಲ್ಲೂರು
ಮೂಕಾಂಬಿಕ ದೇವಸ್ಥಾನದ ಹಾಲ್, ಕರ್ನಾಟಕ ತುಳು ಸಾಹಿತ್ಯ
ಅಕಾಡೆಮಿಯ ಚಾವಡಿ, ಗುಬ್ಬಿ ವೀರಣ್ಣ ರಂಗಮಂದಿರ ತುಮಕೂರು,
ಪುರಭವನ , ಕುಮುಟ, ಉತ್ತರರ ಕನ್ನಡ ಉಲ್ಲಿ ನಡೆಯಲಿದೆ .
ಪ್ರಶಸ್ತಿ ಪುರಸ್ಕøತರ ವಿವರ ಈ ಕೆಳಕಂಡಂತಿದೆ.
ಪಾರ್ತಿಸುಬ್ಬ ಪ್ರಶಸ್ತಿ: ಪಾರ್ತಿಸುಬ್ಬ ಪ್ರಶಸಿಗೆ ಅಂಬಾತನಯ ಮುದ್ರಾಡಿ
ಅವರನ್ನು ಆಯ್ಕೆ ಮಾಡಲಾಗಿರುತ್ತದೆ.
 ಗೌರವ ಪ್ರಶಸ್ತಿ:  ಚಂದ್ರಶೇಖರ್ ದಾಮ್ಲೆ,ಡಾ. ಆನಂದರಾಮ
ಉಪಾಧ್ಯ, ರಾಮಕೃಷ್ಣ ಗುಂದಿ, ಕೆ.ಸಿ ನಾರಾಯಣ ಹಾಗೂ ಚಂದ್ರು
ಕಾಳೇನಹಳ್ಳಿ ಇವರನ್ನು ಆಯ್ಕೆ ಮಾಡಲಾಗಿರುತ್ತದೆ.
ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ: ನೆಲ್ಲೂರು ಜನಾರ್ರ್ದನ ಆಚಾರ್ಯ,
ಉಬರಡ್ಕ ಉಮೇಶ್ ಶೆಟ್ಟಿ, ನಿಡ್ಲೆ, ಕುರಿಯ ಗಣಪತಿ ಶಾಸ್ತ್ರಿ, ಆರ್ಗೋಡು
ಮೋಹನದಾಸ್ ಶೆಣೈ, ಮಹಮ್ಮದ್ ಗೌಸ್, ರಾಮಚಂದ್ರ ಹೆಗಡೆ, ಎಂ.ಎನ್
ಹೆಗಡೆ, ಹಾರಾಡಿ ಸರ್ವೋತ್ತಮ ಗಾಣಿಗ, ಮುಖವೀಣೆ ರಾಜಣ್ಣ, ಎ.ಜಿ ಅಶ್ವಥ
ನಾರಾಯಣ.ಇವರನ್ನು ಆಯ್ಕೆ ಮಾಡಲಾಗಿದೆ.
ಪುಸ್ತಕ ಬಹುಮಾನ: ಹೊಸ್ತೋಟ ಮಂಜುನಾಥ್ ಭಾಗವತ್,
ಕೃಷ್ಣಪ್ರಕಾಶ್ ಉಳಿತ್ತಾಯ, ಡಾ. ಚಿಕ್ಕಣ್ಣ ಯಣ್ಣೆಕಟ್ಟೆ
ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ
ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಹೆಚ್ ಶಿವರುದ್ರಪ್ಪ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *