ದಾವಣಗೆರೆ ಸೆ.04
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಸ್ಪರ್ಧಾತ್ಮಕ ಪರೀಕ್ಷಾ
ಕೇಂದ್ರ, ಮುಕ್ತಗಂಗೋತ್ರಿ ಮೈಸೂರು ವತಿಯಿಂದ ಸೆ.05
ರಂದು ಬೆಳಿಗ್ಗೆ 11 ಗಂಟೆಗೆ ಕುಲಪತಿಗಳ ಸಭಾಂಗಣ ಇಲ್ಲಿ ಬ್ಯಾಂಕಿಂಗ್
ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಆನ್‍ಲೈನ್ ತರಬೇತಿ
ಶಿಬಿರವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮವನ್ನು ಮೈಸೂರು ಮತ್ತು ಕೊಡಗು
ಕ್ಷೇತ್ರದ ಲೋಕಸಭಾ ಸದಸ್ಯರಾದ ಪ್ರತಾಪಸಿಂಹ ಉದ್ಘಾಟಿಸುವರು.
ಕುಲಪತಿಗಳಾದ ವಿದ್ಯಾಶಂಕರ್ .ಎಸ್. ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಮೈಸೂರು ಮಡಿಕೇರಿ ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ
ಸಕ್ಷಮ ಪ್ರಾಧಿಕಾರದ ಎ.ದೇವರಾಜು, ದಾವಣಗೆರೆ ಸ್ಮಾರ್ಟ್ ಸಿಟಿಯ ಎಂ.ಡಿ.
ಮತ್ತು ಸಿಇಒ ಆಶಾದ್ ಆರ್ ಷರೀಪ್, ಕುಲಸಚಿವರಾದ ಪ್ರೊ.ಲಿಂಗರಾಜ ಗಾಂಧಿ
ಪಾಲ್ಗೊಳ್ಳುವರು.
ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ
ಸತ್ಯನಾರಾಯಣಗೌಡ ದೂ.ಸಂ: 0821-2515944 ನ್ನು
ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.