ದಾವಣಗೆರೆ ಸೆ.04
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ
ಇವರು ಸೆ.4 ಹಾಗೂ 5 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಸೆ.4
ರಂದು ಸಂಜೆ 5 ಗಂಟೆಗೆ ದಾವಣಗೆರೆಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ
ವಾಸ್ತವ್ಯ ಮಾಡುವರು.
ಸೆ.5 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12ರವರೆಗೆ ಸರ್ಕಾರಿ
ನೌಕರರ ಭವನ, ರಿಂಗ್ ರಸ್ತೆ ದಾವಣಗೆರೆ ಇಲ್ಲಿ ದಾವಣಗೆರೆ ಜಿಲ್ಲಾಡಳಿತ
ಹಾಗೂ ದಾವಣಗೆರೆ ಜಿಲ್ಲಾ ಶಿಕ್ಷಕರ ಸಂಘದಿಂದ ಏರ್ಪಡಿಸಿರುವ ಶಿಕ್ಷಕರ
ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ
ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಜಿಲ್ಲಾಧಿಕಾರಿಗಳ
ಕಚೇರಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಹಾಗೂ
ಸಾರ್ವಜನಿಕರನ್ನು ಭೇಟಿ ಮಾಡುವರು ನಂತರ ಮಧ್ಯಾಹ್ನ 2.30ಕ್ಕೆ
ದಾವಣಗೆರೆಯಿಂದ ಹೊರಟು ಸಂಜೆ 5 ಗಂಟೆಗೆ ಹುಬ್ಬಳ್ಳಿ ಪ್ರವಾಸಿ ಮಂದಿರ
ತಲುಪುವರು ಎಂದು ಪ್ರಕಟಣೆ ತಿಳಿಸಿದೆ.