ದಾವಣಗೆರೆ ಸೆ.04
2020-21ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗೆ
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಶಿಕ್ಷಣ
ಕಲ್ಯಾಣ ನಿಧಿಯ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಉತ್ತಮ
ಶಿಕ್ಷಕ ಪ್ರಶಸ್ತಿಗೆ 23 ಶಿಕ್ಷಕರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಪುರಸ್ಕøತ ಶಿಕ್ಷಕರಿಗೆ ಸೆ.5 ರಂದು ಬೆಳಿಗ್ಗೆ 10.30ಕ್ಕೆ
ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಮುದಾಯ
ಭವನದಲ್ಲಿ ನಡೆಯುವ ಶಿಕ್ಷಕ ದಿನಾಚರಣೆಯ
ಕಾರ್ಯಕ್ರಮದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು,
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ/ಹಿರಿಯ ಶಾಲಾ
ವಿಭಾಗದಿಂದ 16 ಮತ್ತು ಪ್ರೌಢಶಾಲಾ ವಿಭಾಗದಿಂದ 07 ಶಿಕ್ಷಕರಿಗೆ
ಪ್ರಶಸ್ತಿ ನೀಡಲಾಗುವುದು.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಚನ್ನಗಿರಿ ತಾಲ್ಲೂಕಿನ ಉಪ್ಪಾರಹಟ್ಟಿ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಬಿ.ಭಾಗ್ಯ, ದಾವಣಗೆರೆ
ದಕಿಣ ವಲಯದ ಜಂಪೇನಹಳ್ಳಿ ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ
ಎಚ್.ರೇವಣಸಿದ್ದಪ್ಪ, ದಾವಣಗೆರೆ ಉತ್ತರ ವಲಯದ ಅರಸಾಪುರದ
ಸ.ಕಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಮೆಣಸಿನಕಾಯಿ ಮಹಾರುದ್ರಪ್ಪ,
ಹರಿಹರ ತಾಲ್ಲೂಕಿನ ಬನ್ನಿಕೊಡದ ಕರ್ನಾಟಕ ಪಬ್ಲಿಕ್ ಶಾಲೆಯ ವಿಜ್ಞಾನ
ವಿಷಯದ ಸಹ ಶಿಕ್ಷಕಿ ಬಿ.ಸಿ.ಮೀನಾಕ್ಷಿ, ಹೊನ್ನಾಳಿ/ನ್ಯಾಮತಿ ತಾಲ್ಲೂಕಿನ
ಸೋಮನಮಲ್ಲಾಪುರದ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕ ಸುರೇಶ್
ಜೆ.ಎಚ್.ಗಜ್ಜರಿ, ಸವಳಂಗದ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕ
ಕೆ.ಪ್ರಭು, ಕೆಂಗಟ್ಟೆ ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕಿ ಜಿ.ಅನ್ನಪೂರ್ಣ,
ಜಗಳೂರು ತಲ್ಲೂಕಿನ ಬಂಗಾರಕ್ಕನಗುಡ್ಡದ ಸ.ಹಿ.ಪ್ರಾ ಶಾಲೆಯ
ಸಹ ಶಿಕ್ಷಕ (ನಲಿ ಕಲಿ) ನಾಗರಾಜ ಇವರು ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಚನ್ನಗಿರಿ ತಾಲ್ಲೂಕಿನ ಕಬ್ಬಳದ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಎಚ್.ಎಂ.ಮಂಗಳ,
ಹಿರೇಕೋಗಲೂರಿನ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಟಿ.ಪರಂಜ್ಯೋತಿ,
ದಾವಣಗೆರೆ ದಕ್ಷಿಣ ವಲಯದ ಹೊಸಬೆಳವನೂರಿನ ಕುವೆಂಪು
ಶತಮಾನೋತ್ಸವ ಹಿ.ಪ್ರಾ ಶಾಲೆಯ ಸಹ ಶಿಕ್ಷಕ ಎಂ.ಗದಿಗೆಪ್ಪ,
ದಾವಣಗೆರೆ ಉತ್ತರ ವಲಯದ ಬಿ.ಕಲಪನಹಳ್ಳಿಯ ಸ.ಹಿ.ಪ್ರಾ
ಶಾಲೆಯ ಮುಖ್ಯ ಶಿಕ್ಷಕ ಕೆ.ಸಿ.ಮಲ್ಲೇಶಪ್ಪ, ಹರಿಹರ ತಾಲ್ಲೂಕಿನ
ಚಿಕ್ಕಬಿದರಿಯ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕ ಕೆ.ಆರ್.ಸತ್ಯನಾರಾಯಣ,
ಹೊನ್ನಾಳಿ/ನ್ಯಾಮತಿ ತಾಲ್ಲೂಕಿನ ಕೋಣನತಲೆ ಗ್ರಾಮದ ಸ.ಹಿ.ಪ್ರಾ
ಶಾಲೆಯ ಸಹ ಶಿಕ್ಷಕಿ ಎಸ್.ಷಹಜಾನ್, ಒಡೆಯರಹತ್ತೂರಿನ ಸ.ಹಿ.ಪ್ರಾ
ಶಾಲೆಯ ಸಹ ಶಿಕ್ಷಕ ಎಂ.ಆರ್.ಸಿದ್ದೇಶ್ವರ, ಜಗಳೂರು ತಾಲ್ಲೂಕಿನ
ಮರೇನಹಳ್ಳಿಯ ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಟಿ.ಅಂಜನಪ್ಪ
ಇವರು ಆಯ್ಕೆ ಹೊಂದಿದ್ದಾರೆ.
ಪ್ರೌಢಶಾಲಾ ವಿಭಾಗ: ಹರಿಹರ ತಾಲ್ಲೂಕಿನ ಬೂದಿಹಾಳ್‍ನ ಪಿ ಮತ್ತು ಬಿ
ಬಸವನಗೌಡ ಪ್ರೌಢಶಾಲೆಯ ವೃತ್ತಿ ಶಿಕ್ಷಕ ಬಿ.ಎಸ್.ಪದ್ದಪ್ಪ,
ದಾವಣಗೆರೆ ದಕ್ಷಿಣ ವಲಯದ ದಾವಣಗೆರೆಯ ರಾಜನಹಳ್ಳಿ ಸೀತಮ್ಮ
ಬಾಲಕಿಯರ ಪ.ಪೂ ಕಾಲೇಜು (ಪ್ರೌ.ಶಾ.ವಿ) ಸಹ ಶಿಕ್ಷಕ
ಎಲ್.ಗಂಗಾಧರ, ದಾವಣಗೆರೆ ಉತ್ತರ ವಲಯದ ಕಕ್ಕರಗೊಳ್ಳದ
ಸ.ಪ.ಪೂ ಕಾಲೇಜು (ಪ್ರೌ.ಶಾ.ವಿ) ಸಹ ಶಿಕ್ಷಕಿ ಎನ್.ಪ್ರೇಮಾ, ಚನ್ನಗಿರಿ
ತಾಲ್ಲೂಕಿನ ಕಂಚುಗಾರನಹಳ್ಳಿಯ ಸ.ಪ್ರೌ ಶಾಲೆಯ ಚಿತ್ರಕಲಾ
ಶಿಕ್ಷಕ ಅಶೋಕ, ಹೊನ್ನಾಳಿ/ನ್ಯಾಮತಿ ತಾಲ್ಲೂಕಿನ
ಟಿ.ಗೋಪಗೊಂಡನಹಳ್ಳಿಯ ಸ.ಪ್ರೌ ಶಾಲೆಯ ಸಹ ಶಿಕ್ಷಕ ಈರಪ್ಪ
ಬಬಲೇಶ್ವರ, ಚಟ್ನಹಳ್ಳಿಯ ಸ.ಪ್ರೌ ಶಾಲೆಯ ಸಹ ಶಿಕ್ಷಕಿ ಎನ್.ಬೇಡ
ದಾಕ್ಷಾಯಿಣಿ, ಜಗಳೂರು ತಾಲ್ಲೂಕಿನ ಹೊಸಕೆರೆಯ ಸ.ಪ.ಪೂ
ಕಾಲೇಜು (ಪ್ರೌ.ಶಾ.ವಿ) ದೈಹಿಕ ಶಿಕ್ಷಕ ಬಿ.ಎಸ್.ಶಿವಕುಮಾರ್ ಇವರು
ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸನ್ಮಾನ ಸಮಾರಂಭಕ್ಕೆ ಸರ್ಕಾರದ ಆದೇಶದಂತೆ ಕೋವಿಡ್-19
ಹಿನ್ನೆಲೆಯಲ್ಲಿ ಪ್ರಶಸ್ತಿ ಪುರಸ್ಕøತ ಶಿಕ್ಷಕರು ಮಾತ್ರ
ಭಾಗವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ
ಸಿ.ಆರ್.ಪರಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.