ದಾವಣಗೆರೆ ಸೆ.05
ಜಿಲ್ಲೆಯಲ್ಲಿ ಸೆ.07 ರಿಂದ 19 ರವರೆಗೆ 08 ಪರೀಕ್ಷಾ ಕೇಂದ್ರದಲ್ಲಿ
ದ್ವೀತಿಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿವೆ. ಈ
ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷಾ
ಅವಧಿಯಲ್ಲಿ 200 ಮೀ ಪರಿಧಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ
ಪ್ರವೇಶಕ್ಕೆ ನಿಷೇಧಿತ ಪ್ರವೇಶವೆಂದು ಘೋಷಿಸಲು ಮತ್ತು
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್, ಸೈಬರ್ ಕೆಫೆ
ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚಿಸಲು ಆದೇಶಿಸಲಾಗಿದೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಪರೀಕ್ಷಾ
ಕೇಂದ್ರಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲು ಮತ್ತು
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್, ಸೈಬರ್ ಕೆಫೆ
ಮತ್ತು ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚಚಿಸಲು ಜಿಲ್ಲಾ ಪೊಲೀಸ್
ಅಧೀಕ್ಷಕರು ಕ್ರಮ  ಕೈಗೊಳ್ಳಬೇಕು.
ಮುಖ್ಯ ಅಧೀಕ್ಷಕರ ವಿವರ: ಪರೀಕ್ಷಾ ಕೇಂದ್ರಗಳ ಮುಖ್ಯ
ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಲು ಎಂಟು ಜನರ ಅಧಿಕಾರಿಗಳ
ನೇಮಕ ಮಾಡಲಾಗಿದೆ.
ದಾವಣಗೆರೆಯ ಡಿಆರ್‍ಎ ವಿಜ್ಞಾನ ಪದವಿ ಪೂರ್ವ ಕಾಲೇಜು ಮುಖ್ಯ
ಅಧೀಕ್ಷಕರಾಗಿ ಎಸ್.ಆರ್.ಗೋಪಾಲಕೃಷ್ಣ ನಾಯ್ಕ್, ಮೋತಿ ವೀರಪ್ಪ
ಸ.ಪ.ಪೂ ಕಾಲೇಜಿಗೆ ಕುಮಾರಸ್ವಾಮಿ, ರಾ.ಸಿ.ಬಾ ಸ.ಪ.ಪೂ ಕಾಲೇಜಿಗೆ
ಎನ್.ರಾಜು, ಸ.ಪ.ಪೂ (ಮಾಪು) ಕಾಲೇಜಿಗೆ ಎಸ್.ಸುರೇಶ್, ಹರಿಹರದ
ಧರಾಮ ಸ.ಪ.ಪೂ ಕಾಲೇಜಿಗೆ ಭೀಮಕುಮಾರ, ಜಗಳೂರಿನ
ಸ.ಪ.ಪೂ ಕಾಲೇಜಿಗೆ ಸಿ.ಪಿ.ಜಗದೀಶ್, ಚನ್ನಗಿರಿ ಸ.ಪ.ಪೂ ಕಾಲೇಜಿಗೆ
ಎಚ್.ವಿಜಯೇಂದ್ರಪ್ಪ, ಹೊನ್ನಾಳಿ ಸ.ಪ.ಪೂ ಕಾಲೇಜಿಗೆ ವೇದಮೂರ್ತಿ
ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಂತೇಶ
ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *