ದಾವಣಗೆರೆ ಸೆ.05
    ಶಿಕ್ಷಣ ಹಾಗೂ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ
ಮುಖ್ಯವಾಗಿದ್ದು, ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ
ಶಿಕ್ಷಕರ ಮೇಲಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಬಿ.ಎ.ಬಸವರಾಜ ಹೇಳಿದರು.
   ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಸಾರ್ವಜನಿಕ
ಶಿಕ್ಷಣ ಇಲಾಖೆ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ
ಹಾಗೂ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಅತ್ಯುತ್ತಮ
ಶಿಕ್ಷಕ ಪ್ರಶಸ್ತಿ ಪುರಸ್ಕøತರಿಗೆ ಹಮ್ಮಿಕೊಂಡಿದ್ದ ಸನ್ಮಾನ
ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

   ದೇಶವು ಮುಂದುವರೆಯಲು ಮತ್ತು ಪ್ರಗತಿಯತ್ತ
ಸಾಗಲು ಶಿಕ್ಷಕರೇ ಕಾರಣರು. ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯ ಹಾಗೂ
ಅರಿವುಗಳನ್ನು ಬೆಳೆಸುವ ಶಕ್ತಿ ಶಿಕ್ಷಕರಲ್ಲಿದೆ. ಶಿಕ್ಷಕರು
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ
ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಆ ಮೂಲಕ ತಮ್ಮ
ಕಾರ್ಯವನ್ನು ಬಹಳಷ್ಟು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದರು.
   ಹಿಂದೆ ಗುರು, ಮುಂದೆ ಗುರಿ ಇರಬೇಕು. ಆಗ ಮಾತ್ರ ಜೀವನದಲ್ಲಿ
ಏನಾದರೂ ಸಾಧನೆ ಮಾಡಲು ಸಾಧ್ಯ. ಒಬ್ಬ ವ್ಯಕ್ತಿಯ ಜೀವನದಲ್ಲಿ
ತಂದೆ, ತಾಯಿ ಹಾಗೂ ಗುರುಗಳು ಬಹಳ ಮುಖ್ಯವಾಗಿದ್ದಾರೆ.
ವ್ಯಕ್ತಿತ್ವ ರೂಪಿಸುವಲ್ಲಿ ಗುರುವಿನ ಪಾತ್ರ ಹೆಚ್ಚಾಗಿದೆ ಎಂದ ಅವರು,
ಮಗುವಿಗೆ ಮೊದಲ ಪಾಠಶಾಲೆ ಮನೆ ಹಾಗೂ ಮೊದಲ ಗುರು ಹೆತ್ತ
ತಾಯಿ ಆಗಿದ್ದಾರೆ ಎಂದು ತಿಳಿಸಿದರು.
   ರಾಧಾಕೃಷ್ಣನ್ ಅವರನ್ನು ಸ್ಮರಿಸಲು ಈ ದಿನ ವಿಶೇಷವಾಗಿದೆ. ಒಬ್ಬ
ಶಿಕ್ಷಕರಾಗಿ, ಶಿಕ್ಷಣ ತಜ್ಞರಾಗಿ ಅವರ ಕೊಡುಗೆ ಅಪಾರವಾಗಿದ್ದು, ಶಿಕ್ಷಣ
ಕ್ಷೇತ್ರವನ್ನು ಬಹಳ ಎತ್ತರ ಸ್ಥಾನಕ್ಕೆ ತೆಗೆದುಕೊಂಡು
ಹೋಗಿದ್ದಾರೆ. ಜೊತೆಗೆ ಹಲವಾರು ಹುದ್ದೆ ಅಲಂಕರಿಸುವ ಮೂಲಕ
ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ
ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
    ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ,  ಒಂದು ಕಲ್ಲು
ಗರ್ಭಗುಡಿಯೊಳಗೆ ಹೋಗಿ ದೇವರಾಗಬೇಕಾದರೆ ಅದಕ್ಕೆ ಶಿಲ್ಪಿ
ದೇವರ ರೂಪ ಕೊಡುತ್ತಾನೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಶಿಕ್ಷಕರಾದ
ನೀವು ಅವರನ್ನು ತಿದ್ದಿ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು
ಒಳ್ಳೆಯ ಮಾರ್ಗದರ್ಶನವೆಂಬ ರೂಪ ನೀಡಬೇಕು ಎಂದರು.
ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ: ಶಿಕ್ಷಕರು ಜಿಲ್ಲೆಯ
ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಮೈಸೂರಿನಂತೆ ದಾವಣಗೆರೆ
ಜಿಲ್ಲೆಯೂ ಸಹ ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿಯಾಗಬೇಕು.
ಪ್ರತಿÀಯೊಬ್ಬರು ಉನ್ನತ ವ್ಯಾಸಂಗ ಮಾಡಬೇಕು. ಈ ನಿಟ್ಟಿನಲ್ಲಿ
ಶಿಕ್ಷಕರು ಶ್ರದ್ಧಾ ಭಕ್ತಿಯಿಂದ ಬೋಧನೆಯನ್ನು
ಹೆಚ್ಚಿಸಿಕೊಂಡು ತಮ್ಮ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ
ನೀಡಿದರು.
   ಸರ್ವಪಲ್ಲಿ ರಾಧಕೃಷ್ಣನ್‍ನವರು ಸಾಮಾನ್ಯ ಶಿಕ್ಷಕರಾಗಿ ದೇಶದ
ಅತ್ಯುನತ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರು. ಅವರಂತೆ ಅಬ್ದುಲ್
ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರಿಯವರು ಸಾಮಾನ್ಯ ಕುಂಟುಬದಲ್ಲಿ
ಬೆಳೆದು ದೇಶಕ್ಕೆ ಹೆಸರು ತಂದಕೊಟ್ಟರು. ಅದೇ ರೀತಿ  ರೈಲ್ವೇ
ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯ ವ್ಯಕ್ತಿ ಇಂದು ದೇಶದ
ಪ್ರಧಾನಿಯಾಗಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ. ಈ
ಸಾಧಕರು ಈ ಹುದ್ದೆಯನ್ನು ಅಲಂಕರಿಸಲು ಅವರಿಗೆ ಶಿಕ್ಷಣ ನೀಡಿ
ಒಳ್ಳೆಯ ಮಾರ್ಗ ತೊರಿಸಿದ ಗುರುಗಳೇ ಕಾರಣ ಎಂದು
ಶಿಕ್ಷಕರನ್ನು ಪ್ರಶಂಸಿಸಿದÀರು.
  ಮಾಯಕೊಂಡ ಶಾಸಕ ಪ್ರೋ.ಲಿಂಗಣ್ಣ ಮಾತನಾಡಿ, ಶಿಕ್ಷಕ ವೃತ್ತಿ
ಎಂಬುದು ಬಹಳ ಶ್ರೇಷ್ಠವಾದ ವೃತ್ತಿ. ನಾನು ಕೂಡ ಒಬ್ಬ ಶಿಕ್ಷಕ.
ಸಮಾಜವು ಇಂದು ಬದಲಾವಣೆ ಆಗಬೇಕಾದರೆ ಶಿಕ್ಷಕನ ಪಾತ್ರ ಅತಿ
ಮುಖ್ಯವಾಗಿದೆ. ಯಾವುದೇ ಬೇಧವಿಲ್ಲದೆ, ರಾಜಕೀಯ ಒತ್ತಡಕ್ಕೆ
ಮಣಿಯದೆ ಎಲ್ಲ ವಿದ್ಯಾರ್ಥಿಗಳನ್ನು ತಿದ್ದುವ ಕೆಲಸ ಶಿಕ್ಷಕರು
ಮಾಡಬೇಕು ಎಂದರು.
   ಕೋವಿಡ್ ಇರುವ ಕಾರಣ ನಾವು ಇಂದು ಸರಳವಾಗಿ ಶಿಕ್ಷಕರ
ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದ ಅವರು, ಸಮಾಜ

ಬದಲಿಸುವ ಶಕ್ತಿ ಹೊಂದಿರುವ ಶಿಕ್ಷಣದ ಮಹತ್ವದ ಕುರಿತು
ಪ್ರಸ್ತುತ ಎಲ್ಲರಿಗೂ ತಿಳಿಸುವ ಅವಶ್ಯಕತೆ ಒದಗಿದೆ ಎಂದರು.
   ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ನಾನು ಕೂಡ ಒಬ್ಬ
ಶಿಕ್ಷಕ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆಯಿದೆ. ವಿದ್ಯಾರ್ಥಿಗಳ
ಜೀವನ ರೂಪಿಸುವಂತಹ ಹಾಗೂ ವ್ಯಕ್ತಿತ್ವ ಬೆಳೆಸುವಂತಹ ವೃತ್ತಿ
ಮಾಡಿರುವುದು ಖುಷಿಯ ಸಂಗತಿಯಾಗಿದೆ ಎಂದರು.        
    ಶಿಕ್ಷಕ ವೃತ್ತಿ ಪವಿತ್ರ ವೃತ್ತಿ. ಈ ವೃತ್ತಿಗೆ ಸರಿಸಾಟಿ ಇನ್ನೊಂದಿಲ್ಲ.
ಎಲ್ಲರಿಗೂ ಶಿಕ್ಷಕ ವೃತ್ತಿಯ ಸೇವೆ ಮಾಡುವ ಅವಕಾಶ
ಒದಗುವುದಿಲ್ಲ. ಸಮಾಜ ಬಹಳಷ್ಟು ಬದಲಾವಣೆ ಹೊಂದುತ್ತಿದ್ದು,
ವೇಗವಾಗಿ ಸಾಗುತ್ತಿದೆ. ಈ ಸಂದರ್ಭದಲ್ಲಿ ಅದಕ್ಕೆ ತಕ್ಕಂತೆ ನಮ್ಮನ್ನು
ನಾವು ಬದಲಾಯಿಸಿಕೊಂಡು ಹೊಸ ಹೊಸ ಜ್ಞಾನ ಸಂಪಾದನೆ ಮಾಡುವ
ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ಹಂಚುವ ಕೆಲಸ ಮಾಡಬೇಕು
ಎಂದರು. 
   ಸಮಾರಂಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಡಾ.ಸರ್ವಪಲ್ಲಿ
ರಾಧಾಕೃಷ್ಣನ್ ಭಾವಚಿತ್ರ ಅನಾವರಣಗೊಳಿಸಿದರು. ಜಿಲ್ಲಾಮಟ್ಟದ
ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ 23 ಶಿಕ್ಷಕರಿಗೆ
ಸನ್ಮಾನಿಸಲಾಯಿತು.
    ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ
ಗಂಗಾಧರನಾಯ್ಕ್, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಮಮತಾ
ಮಲ್ಲೇಶಪ್ಪ, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಹೆಚ್ಚುವರಿ ಪೊಲೀಸ್
ಅಧೀಕ್ಷಕ ರಾಜೀವ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್
ಮುದಜ್ಜಿ, ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಗಿರೀಶ್ ಮತ್ತಿತರರು
ಹಾಜರಿದ್ದರು.

Leave a Reply

Your email address will not be published. Required fields are marked *