ದಾವಣಗೆರೆ ಸೆ.07
2020-21 ನೇ ಸಾಲಿನ ಡಿಪ್ಲೋಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಆನ್
ಲೈನ್ ಮುಖಾಂತರ 2ನೇ ಮುಂದುವರೆದ ಸುತ್ತಿನಲ್ಲಿ ಅರ್ಹ
ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ
ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೆ.35 ರಷ್ಟು
ಅಂಕಗಳನ್ನು ಪಡೆದಿರತಕ್ಕದ್ದು, ಅರ್ಜಿಯನ್ನು ಸಮೀಪದ
ಯಾವುದೇ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಅಥವಾ ವೆಬ್ಸೈಟ್
ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ hಣಣಠಿ://ಜಣeಣeಛಿh.ಞಚಿಡಿಟಿಚಿಣಚಿಞಚಿ.gov.iಟಿ/ಞಚಿಡಿಣeಛಿhಟಿiಛಿಚಿಟ &ಚಿmಠಿ;
ತಿತಿತಿ.ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ/ಞeಚಿ ಮುಖಾಂತರ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಸೆ.07 ರಿಂದ ಪಡೆದು ಸೆ.16 ಸಂಜೆ 5 ಗಂಟೆಯೊಳಗೆ
ಸಲ್ಲಿಸಬೇಕು. ಎರಡನೇ ಮುಂದುವರೆದ ಸುತ್ತಿನ ಪ್ರವೇಶ
ಪ್ರಕ್ರಿಯೆಗೆ ಸಂಬಂಧಿಸಿದ ಪ್ರತ್ಯೇಕವಾದ ವೇಳಾಪಟ್ಟಿಯನ್ನು
ಮುಂದಿನ ದಿನಗಳಲ್ಲಿ ಇಲಾಖೆಯಿಂದ ಪ್ರಕಟಿಸಲಾಗುವುದೆಂದು
ಡಿ.ಆರ್.ಆರ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.