ದಾವಣಗೆರೆ ಸೆ.07
ರಾಜ್ಯದಾದ್ಯಂತ ಕಾನೂನು ಸೇವಾ ಪ್ರಾಧಿಕಾರವು ಸೆ.19 ರಂದು ಇ-
ಲೋಕ್ ಅದಾಲತ್ ಆಯೋಜಿಸಿದ್ದು, ಜಿಲ್ಲೆಯಲ್ಲಿಯು ಇ-ಲೋಕ್ ಅದಾಲತ್
ಮೂಲಕ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು
ಶೀಘ್ರ ಇತ್ಯರ್ಥದ ಉದ್ದೇಶದಿಂದ ಮೆಗಾ ಇ-ಲೋಕ್ ಅದಾಲತ್
ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರಾದ ಕೆ.ಬಿ.ಗೀತಾ ಹೇಳಿದರು.
ಸೋಮವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಆಯೋಜಿಸಿದ್ದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅದಾಲತ್ ಮುಖಾಂತರ
ಕಕ್ಷಿದಾರರು ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ
ಪ್ರಕರಣಗಳನ್ನು ರಾಜೀ ಮಾಡಿಕೊಳ್ಳಬಹುದು.
ನ್ಯಾಯಾಲಯದಲ್ಲಿನ ತೀರ್ಪಿಗೆ ಇರುವ ಮಹತ್ವವೇ ಇ-ಲೋಕ
ಅದಾಲತ್‍ನ ತೀರ್ಪಿಗೂ ಇದ್ದು, ಸಾರ್ವಜನಿಕರು ಇ-ಲೋಕ ಅದಾಲತ್‍ನ
ಸದುಪಯೋಗ ಪಡೆದುಕೊಳ್ಳಬೇಕೆಂದÀು ತಿಳಿಸಿದರು.
ಪಕ್ಷಗಾರರು ರಾಜಿ ಅಥವಾ ಸಂಧಾನದ ಮೂಲಕ ತಮ್ಮ
ಪ್ರಕರಣಗಳನ್ನು ಶೀಘ್ರವಾಗಿ ಹಾಗೂ ಸುಲಭವಾಗಿ ಯಾವುದೇ
ಶುಲ್ಕವಿಲ್ಲದೇ ಇತ್ಯರ್ಥ ಮಾಡಿಕೊಳ್ಳಬಹುದು. ಹಾಗೂ ಈ ಲೋಕ
ಅದಾಲತ್ ನಿಂದ ಪಕ್ಷಗಾರರಲ್ಲಿರುವ ವೈಮನಸ್ಸು ಕಡಿಮೆಯಾಗಿ
ಸೌಹಾರ್ದತೆ ಹೆಚ್ಚಾಗಲಿದೆ ಎಂದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪಕ್ಷಗಾರರನ್ನು ಸಂಪರ್ಕಿಸಿ ಹಾಗೂ
ಕರೆಸಿ ಅವರು ರಾಜಿಯಾಗುವಂತಿದ್ದರೆ ಅವರ ಮಧ್ಯೆ ಮಾತನಾಡಿ ರಾಜಿ
ಸಂಧಾನದಿಂದ ತೀರ್ಪು ಪ್ರಕಟಿಸಲಾಗುವುದು ಎಂದರು.
ಈ ಬಾರಿ ಇ-ಲೋಕ್ ಅದಾಲತ್‍ನಲ್ಲಿ ಚೆಕ್ ಬೌನ್ಸ್ ಪ್ರಕರಣಗಳು, ವಾಹನ
ಅಪಘಾತ ಪರಿಹಾರದ ಪ್ರಕರಣಗಳು, ವಿಚ್ಚೇದನ ಹೊರತು ಪಡಿಸಿದ
ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು, ಕುಟುಂಬ ವಿವಾದಗಳು,
ಬಾಡಿಗೆದಾರ ಹಾಗೂ ಮಾಲೀಕರ ನಡುವಿನ ಪ್ರಕರಣಗಳು, ಹಣ
ವಾಪಾಸಾತಿ ಪ್ರಕರಣಗಳು ಹಾಗೂ ಕಾನೂನಿನನ್ವಯ ರಾಜಿ
ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಗ್ರಾಹಕರ ವಿವಾದಗಳಿಗೆ
ಸಂಬಂಧಿಸಿದ ಪ್ರಕರಣಗಳು, ರಾಜಿ ಆಗಬಹುದಾದ ಎಲ್ಲಾ ತರಹದ
ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಪಕ್ಷಗಾರರು ಸ್ವ ಇಚ್ಛೆಯಿಂದ ರಾಜಿಗೆ ಒಪ್ಪಿಕೊಂಡರೆ ಮಾತ್ರ ಇ-
ಲೋಕ್ ಅದಾಲತ್ ನಲ್ಲಿ ಪ್ರಕರಣಗಳು ತೀರ್ಮಾನವಾಗವವು,

ಪಕ್ಷಗಾರರು ಒಪ್ಪದಿದ್ದಲ್ಲಿ ಅಂತಹ ಪ್ರಕರಣಗಳನ್ನು
ನ್ಯಾಯಾಲಯದಲ್ಲಿ ಕಾನೂನು ಬದ್ದವಾಗಿ ತೀರ್ಮಾನಿಸಲಾಗುವುದು
ಎಂದರು.
ಇ-ಲೋಕ್ ಅದಾಲತ್‍ನಲ್ಲಿ ಪಕ್ಷಗಾರರು ನ್ಯಾಯಾಲಯಕ್ಕೆ ಬರದೇ
ತಮ್ಮ ಮನೆಯಿಂದ ಅಥವಾ ವಕೀಲರ ಕಚೇರಿಯ ಮೂಲಕ
ಪ್ರಕರಣಗಳನ್ನು ವೀಡಿಯೋ ಕಾನ್ಪರೆನ್ಸಿಂಗ್ ಮೂಲಕ ಇತ್ಯರ್ಥ
ಮಾಡಿಕೊಳ್ಳಬಹುದು ಎಂದರು.
ಎರಡು ಪಕ್ಷದ ಕಕ್ಷಿಗಾರರು ಹಾಗೂ ನ್ಯಾಯಾವಾದಿಗಳು ಹಾಗೂ
ನ್ಯಾಯಾಧೀಶರು ಈ ಅದಾಲತ್‍ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಕೂಲಂಕಷ ಚರ್ಚಿಸಿ ರಾಜೀ ಮಾಡುವ ಮುಖಾಂತರ ಪಕ್ಷಗಾರರಿಗೆ
ಶೀಘ್ರ ಹಾಗೂ ಪಾರದರ್ಶಕ ನ್ಯಾಯದಾನವನ್ನು ಇ-ಲೋಕ ಅದಾಲತ್
ಮುಖಾಂತರ ನೀಡಲಾಗುವುದು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ
ಮಾತನಾಡಿ, ಇ-ಲೋಕ್ ಅದಾಲತ್ ಕುರಿತು ಹೆಚ್ಚಿನ ಮಾಹಿತಿಗಾಗಿ
ಜಟsಚಿಜಚಿvಚಿಟಿgeಡಿe@gmಚಿiಟ.ಛಿom ಅಥವಾ ದೂರವಾಣಿ ಸಂಖ್ಯೆ-9449624370
ಸಂರ್ಪಕಿಸಬಹುದು ಎಂದರು.
ನ್ಯಾಯಾಲದಲ್ಲಿ ಕಕ್ಷಿದಾರರು ಸಾಕ್ಷಿಗಳನ್ನು ಒದಗಿಸಲು
ತೊಂದರೆಯಾಗುತ್ತಿರುವುದರಿಂದ ಹಳೇ ಕೋರ್ಟ್ ಬಳಿಯಿರುವ
ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಾಲ್ಕು ರಿಮೋಟ್
ಕೊಠಡಿಗಳನ್ನು ತೆರೆಯಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ
ಎಲ್.ಎಚ್.ಅರುಣ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ಶ್ರೀಧರ್, ಆಡಳಿತ
ಶಿರಸ್ತೆದಾರ್ ಮಾರುತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *