ದಾವಣಗೆರೆ ಸೆ.08
2020-21ನೇ ಸಾಲಿನಲ್ಲಿ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧ, ಪಾರ್ಸಿ, ಸಿಖ್
ಅಲ್ಪಸಂಖ್ಯಾತರ ಜನಾಂಗಕ್ಕೆ ಸೇರಿದ ಜಿಲ್ಲೆಯ 5 ನಿರುದ್ಯೋಗಿ
ಕಾನೂನು ಪದವೀದರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ
ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಠಡಿ
ಸಂಖ್ಯೆ: 44 ಎರಡನೇ ಮಹಡಿ, ಜಿಲ್ಲಾಡಳಿತ ಭವನ, ಕರೂರು, ರಸ್ತೆ,
ದಾವಣಗೆರೆ. ಇಲ್ಲಿ ಕಚೇರಿಯ ವೇಳೆಯಲ್ಲಿ ಅರ್ಜಿಗಳನ್ನು
ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಅವಶ್ಯಕ
ದಾಖಲೆಗಳೊಂದಿಗೆ ಸೆ.21 ರೊಳಗೆ ಈ ಕಚೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿ
ಸಲ್ಲಿಸಲು ಸೆ.21 ಕೊನೆಯ ದಿನವಾಗಿದ್ದು, ನಂತರ ಬರುವ
ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ನಿಬಂಧನೆಗಳು: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕಾನೂನು
ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷಗಳ
ಅವಧಿಯೊಳಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು
ಅರ್ಹರಾಗಿರುತ್ತಾರೆ. ತರಬೇತಿಗೆ ಜಿಲ್ಲೆಯ ಅಲ್ಪಸಂಖ್ಯಾತರ 05
ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಯು ಮತೀಯ ಅಲ್ಪಸಂಖ್ಯಾತರ ಸಮುದಾಯ ಮುಸ್ಲಿಂ,
ಕ್ರಿಶ್ಚಿಯನ್, ಜೈನ್, ಬುದ್ಧ, ಪಾರ್ಸಿ, ಸಿಖ್ ಜನಾಂಗಕ್ಕೆ
ಸೇರಿದವರಾಗಿರಬೇಕು.
ಪ್ರಸ್ತಕ ಸಾಲಿನ ಜಾತಿ, ಆದಾಯ ಪ್ರಮಾಣ ಪತ್ರವನ್ನು ಸಂಬಂಧಿಸಿದ
ತಹಶೀಲ್ದಾರರಿಂದ ಪಡೆದು ದೃಡೀಕೃತ ಜೆರಾಕ್ಸ್ ಪ್ರತಿಯನ್ನು
ಲಗತ್ತಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ
ಆದಾಯ ರೂ. 3.50 ಲಕ್ಷ ಮೀರಿರಬಾರದು ಅಭ್ಯರ್ಥಿಗಳ ಗರಿಷ್ಠ
ವಯೊಮಿತಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 30 ವರ್ಷಗಳನ್ನು
ಮೀರಿರಬಾರದು ಹಾಗೂ ಜನ್ಮ ದಿನಾಂಕ ದೃಢೀಕರಣ ಪತ್ರ
ಲಗತ್ತಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ನಿರುದ್ಯೋಗಿಗಳಾಗಿರಬೇಕು. ಮತ್ತು ಯಾವುದೇ ಇಲಾಖೆಯಲ್ಲಿ
ತರಬೇತಿ, ಭತ್ಯೆ ಪಡೆಯುತ್ತಿರಬಾರದು.
ತರಬೇತಿಯು 4 ವರ್ಷಗಳ ಅವಧಿಯದಾಗಿದ್ದು, ಮಾಸಿಕ
ದಿನಚರಿಯನ್ನಾದರಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 5000
ಶಿಷ್ಯವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು
ತರಭೇತಿ ಮದ್ಯದಲ್ಲಿ ಗೈರು ಹಾಜರಾದಲ್ಲಿ ಪಡೆಯಲಾದ
ಶಿಷ್ಯವೇತನವನ್ನು ಶೇ.10 ರಷ್ಟು ಬಡ್ಡಿಯೊಂದಿಗೆ
ಹಿಂದುರುಗಿಸಬೇಕಾಗುವುದು.
ಅಭ್ಯರ್ಥಿಗಳು ತಮ್ಮ ಹೆಸರನ್ನು ಜಿಲ್ಲೆಯ ಹಾಗೂ ರಾಜ್ಯದ
ಬಾರ್‍ಕೌನ್ಸಿಲ್‍ನಲ್ಲಿ ನೊಂದಾಯಿಸಿರಬೇಕು. ಆಯ್ಕೆಯಾದ
ಅಭ್ಯರ್ಥಿಗಳನ್ನು ಜಿಲ್ಲಾ ಸರ್ಕಾರಿ ವಕೀಲರು ಅಥವಾ 20 ವರ್ಷಗಳ
ಅನುಭವವುಳ್ಳ ಯಾವುದೇ ವಕೀಲರ ಅಧೀನದಲ್ಲಿ ತರಬೇತಿಗೆ
ನಿಯೋಜಿಸಲಾಗುವುದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ
ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.