ಇಂದು (9 ಸೆ. 2020) ರಂದು ಸಾಗರ ತಾಲೂಕಿನ ಹಂದಿಗೋಡು, ಮಾಲ್ವೆ, ಕೊಳಿಸಾಲು, ಕಲ್ಕೊಪ್ಪ ಗ್ರಾಮಗಳಲ್ಲಿನ ಬಡಜನರಿಗೆ ಚರಕ ಸಂಘದ ಮಹಿಳೆಯರು ಕೈಮಗ್ಗದ ಉಡುಪುಗಳನ್ನು ಉಚಿತವಾಗಿ ವಿತರಿಸಿದರು.
ಚರಕದ ಪರಿಸ್ಥಿತಿಯನ್ನು ವಿವರಿಸಿ, ತಮ್ಮ ದಾಸ್ತಾನಿನಲ್ಲಿರುವ ಸ್ವಲ್ಪಮಟ್ಟಿಗಿನ ಉತ್ಪಾದನ ವ್ಯತ್ಯಯವಿರುವ ಉಡುಪುಗಳನ್ನು ಬಡವರಿಗೆ ಹಂಚಲು ನಿರ್ಧರಿಸಿದ್ದೇವೆ, ತಾವು ಚರಕ ಸಂಘದ ಹೋರಾಟದಲ್ಲಿ ಭಾಗಿಯಾಗಬೇಕೆಂದು ಆಹ್ವಾನಿಸಿದರು.
ಚರಕವನ್ನು ಸೇರಿದಂತೆ ಇಂದು ಬಹಳಷ್ಟು ಗ್ರಾಮೀಣ ಕೈಗಾರಿಕೆಗಳು ಇಂದು ಸಂಕಷ್ಟದಲ್ಲುವೇ, ಜನರು ಮಾತ್ರಾ ಅವರ ಉತ್ಪನ್ನವನ್ನು ಕೊಂಡು ಉಳಿಸಬಲ್ಲರು. ಇನ್ನೊಂದೆಡೆ ಸರ್ಕಾರಿ ಆಡಳಿತಶಾಹಿಗೆ ಹಿಡಿದಿರುವ ಗ್ರಹಣವನ್ನು ನಾವು ಬಿಡಿಸಬೇಕಿದೆ ಎಂದರು ಚರಕ ಸಂಘದ ನಿರ್ದೇಶಕ ಮಂಡಳಿಯ ಸದಸ್ಯರಾದ ಮಹಾಲಕ್ಷ್ಮಿ.
ಚರಕ ಸಂಘದ ಮಂಜುಳ, ಲಕ್ಷ್ಮಿ, ಗಿರಿಜ, ಸತ್ಯಮ್ಮ, ಪಾರ್ವತಿ, ಲಲಿತಮ್ಮ, ಶಾಂತ ಸತ್ಯಾಗ್ರಹವನ್ನು ಮುನ್ನಡೆಸಿದರು.