ದಾವಣಗೆರೆ ಸೆ.10
ಗುರುವಾರ ಜಿಲ್ಲಾಡಳಿತ ಭವನದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯ ಕೋವಿಡ್ ಪರಿಸ್ಥಿತಿ ಬೆಳೆಹಾನಿ ರಸಗೊಬ್ಬರ ಕುರಿತಾಗಿ ಮಾಹಿತಿ ನೀಡಿದರು

ಕೋರೊನಾ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದೆವೆ ಮುಖ್ಯಮಂತ್ರಿಯವರು ಕೇಳಿದ ಜಿಲ್ಲೆಯ ಸಾವಿನ ಪ್ರಮಾಣ ಕುರಿತ ಪ್ರಶ್ನೆಗೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗ್ಗೊಳಲಾಗುತ್ತದೆ ಹಿಂದಿನ ತಿಂಗಳಿಗಿಂತ ಸಾವಿನ ಪ್ರಮಾಣ ಕಡಿಮೆಯಾಗಿದೆ ಈ ಹಿನ್ನೆಲೆಯಲ್ಲಿ ರೋಗಲಕ್ಷಣ ಕಂಡುಬರುವ ವ್ಯಕ್ತಿಗಳನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಲಾಗುವುದು ತ್ವರಿತವಾಗಿ ಚಿಕಿತ್ಸೆ ನೀಡುವುದು.

ಹೆಚ್ಚು ಹೆಚ್ಚು ಪರೀಕ್ಷೆ ಮಾಡುವುದು ಈ ಪರೀಕ್ಷೆಗಳನ್ನು ಗುರುತಿಸಲಾದ ಪ್ರಾಥಮಿಕ ಸಂಪರ್ಕ ದುರ್ಬಲವರ್ಗ,ಕುಮಾರ್‍ಬಿಟಿ, ಬಿಪಿಶುಗರ್, ಹಾಗೂ ಡೆತ್ ಪ್ಯಾಕೆಟ್ ಜಾಸ್ತಿಇರುವ ಕಡೆ ಹೆಚ್ಚು ಪರೀಕ್ಷೆಗೆ ಒಳಪಡಿಸಿ ಅವರಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಸಾವಿನ ಪ್ರಮಾಣ ಕಡಿಮೆಮಾಡಲು ಶ್ರಮಿಸಲಾಗುತ್ತದೆ ಎಂದರು.

ಹಾಗೂ ಎಲ್ಲಾ ಕಡೆ ಆಕ್ಸಿಜನ್ ವ್ಯವಸ್ಥೆ ಸರಿಯಾಗಿ ಮಾಡಲಾಗಿದ್ದು ಸಾಕಷ್ಟು ವೆಂಟಿಲೇಟರ್‍ಗಳು ಇವೆ ಈ ಪೈಕಿ 31 ವೆಂಟಿಲೇಟ್‍ರ್‍ಗಳು ಕಾರ್ಯ ನಿರ್ವಹಿಸುತ್ತಿದ್ದು ಇನ್ನುಳಿದ 39 ವೆಂಟಿಲೇಟರ್‍ಗಳಿಗೆ ತಜ್ಞವೈದ್ಯರು ಹಾಗೂ ಸಿಬ್ಬಂದಿಗಳನ್ನು ನೀಡಲು ಕೋರಿದರು.

ಇದರೊಂದಿಗೆ ಪ್ರತಿನಿತ್ಯ 2500 ಟೆಸ್ಟ್‍ಗಳನ್ನು ಮಾಡಲು ಗುರಿಇಟ್ಟುಕೊಂಡಿದ್ದು 31 ಮೊಬೈಲ್ ಟೀಮ್‍ಗಳ ಮೂಲಕ ಟೆಸ್ಟ್ ಮಾಡಿಸಲಾಗುತ್ತದೆ ಎಂದರು.

ರಾಜ್ಯ ಸರ್ಕಾರದ ಬೆಳೆ ವಿಮೆ, ಕ್ಷೌರಿಕ, ಮಡಿವಾಳರು, ಆಟೋ, ಟ್ಯಾಕ್ಸಿ ಬಚಾಲಕರು ಇವರಿಗೆ ಪರಿಹಾರದ ಮೊತ್ತ ಸಂದಾಯವಾಗಿದೆ ಇದರಲ್ಲಿ ಯಾವುದೇ ಲೋಪದೋಷವಾಗಿಲ್ಲ ಎಂದರು.

ಮಳೆಯಿಂದಾಗಿರುವ ಬೆಳೆಹಾನಿ ಪ್ರಮಾಣ ಕುರಿತಂತೆ ಮಾಹಿತಿ ನೀಡಿ ಎಸ್‍ಡಿಆರ್‍ಎಫ್, ಹಾಗೂ ಎನ್‍ಡಿಆರ್‍ಎಫ್, ಮಾನದಂಡಗಳಂತೆ 5 ಲಕ್ಷ ಹಾಗೂ 3 ಲಕ್ಷ ಮತ್ತು 1 ಲಕ್ಷಗಳಂತೆ ಸರ್ಕಾರದ ಆದೇಶದಂತೆ ವಿತರಿಸಲು ಕ್ರಮ ಕೈಗ್ಗೊಳಲಾಗಿದೆ ಇತ್ತಿಚ್ಚಿಗೇ ಸುರಿದ ಭಾರಿ ಮಳೆಯಿಂದ ಸುಮಾರು 6.87 ಕೋಟಿ ಹಾನಿಯಾಗಿದ್ದು ರಸ್ತೆ, ಸೇತುವೆ, ಪಾಠಶಾಲೆ, ಟ್ರಾನ್ಸ್‍ಫರ್ ವಿದ್ವುತ್ ಕಂಬಗಳು ಹಾಳಾಗಿದ್ದು 31 ಸಪ್ಲೆ ಲೈನ್‍ಗಳು ಹಾಳಾಗಿದೆ ಅದರೊಂದಿಗೆ 145 ಹೆಕ್ಟೆರ್ ಬೆಳೆ ಹಾನಿಯಾಗಿದೆ ಮೊನ್ನೆ ಮಂಗಳವಾರ ಸುರಿದ 51 ಮಿಲಿಮೀಟರ್ ಮಳೆಯಿಂದ ಸಾಕಷ್ಟು ಹಾನಿಯಾಗಿದೆ ಮಾಯಕೊಂಡ ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದು ಈ ಎಲ್ಲಾಬ ವರದಿಯನ್ನು ಶುಕ್ರವಾರದ ಸಂಜೆಯೊಳಗೆ ಒಟ್ಟಾರೆ ಹಾನಿನ ಪ್ರಮಾಣದ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಪೊಲೀಸ್ ಇಲಾಖೆಯವರು ಇಲ್ಲಿಯವರೆಗೆ ಮಾಸ್ಕ ಹಾಕದವರಿಂz ರೂ 25 ಲಕ್ಷ ದಂಡ ವಸೂಲಿ ಮಾಡಿದ್ದಾರೆ ಹಾಗೂ ಸಾರ್ವಜನಿಕರು ಕಡ್ಡಾಯ ಮಾಸ್ಕ್ ಧರಿಸಲು ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಅವರು ವಾರಕ್ಕೊಮ್ಮೆ ದಾವಣಗೆರೆಗೆ ಬಂದು ಜಿಲ್ಲೆಯ ಪರಿಸ್ಥಿತಿ ಅವಲೋಕಿಸುತ್ತಾರೆ ಜನಸಾಮಾನ್ಯರು ಅಹವಾಲುಗಳನ್ನು ಸಚಿವರು ಸ್ವೀಕರಿಸಿ ಪರಿಹಾರ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ವಿಡಿಯೋ ಸಂವಾದದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಸಿಇಓ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ನೋಡಲ್ ಅಧಿಕಾರಿ ಪ್ರಮೋದ್ ನಾಯ್ಕ್ ಡಿಎಚ್‍ಓ ರಾಘವೇಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *