ದಾವಣಗೆರೆ ಸೆ.10
ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು
ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದ ಎಂ ಕಾರಜೋಳ
ಇವರು ಸೆ.12 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಸೆ.11 ರಂದು
ಬೆಂಗಳೂರಿನಿಂದ ಹೊರಟು ರಾತ್ರಿ 9 ಗಂಟೆಗೆ ದಾವಣಗೆರೆ ಆಗಮಿಸಿ
ವಾಸ್ತವ್ಯ ಮಾಡುವರು.
ಸೆ.12 ರಂದು ಬೆಳಿಗ್ಗೆ 9.30ಕ್ಕೆ ದಾವಣಗೆರೆಯಿಂದ ಹೊರಟು ಹೊನ್ನಾಳಿ
ತಲುಪಿ, 10.30ಕ್ಕೆ ಹೊನ್ನಾಳಿಯ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ
ನಡೆಯುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ
2.30ಕ್ಕೆ ಹೊನ್ನಾಳಿಯಿಂದ ಹೊರಟು ದಾವಣಗೆರೆ ತಲುಪಿ, ಜಿಲ್ಲಾ
ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ
ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.