ದಾವಣಗೆರೆ ಸೆ.11
 ಜನ ಆರೋಗ್ಯ ಸಂಸ್ಥೆ ಎಪಿಡಿಮಿಯಾಲಜಿ ವಿಭಾಗ ನಿಮಾನ್ಸ್ ಬೆಂಗಳೂರು
ಇವರಿಂದ ಅನುಷ್ಠನಾಗೊಳ್ಳುತಿರುವ ಹಾಗೂ ರಾಜ್ಯ ಸರ್ಕಾರದ
ಅನುದಾನಿತ ಯೋಜನೆಯಾದ ಯುವ ಜನರ ಮಾನಸಿಕ
ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು
ಅನುಷ್ಠಾನ ಯೋಜನೆಯಡಿಯಲ್ಲಿ ಯುವ ಪರಿರ್ವತಕರ
ತರಬೇತಿಯನ್ನು ನೀಡಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು
ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಸೆ.24 ರಂದು ಕೊನೆಯ ದಿನವಾಗಿದೆ.
   ಅರ್ಹತಾ ಮಾನದಂಡಗಳು: ಸಮುದಾಯದಲ್ಲಿ ಕೆಲಸ
ಮಾಡಿರುವವರನ್ನು ಅಪೇಕ್ಷಿಸಲಾಗಿದೆ, ಯಾವುದೇ ಪದವಿ ಹಾಗೂ
ಮೇಲ್ಪಟ್ಟು ಮತ್ತು 21 ರಿಂದ 35 ವರ್ಷದ ಒಳಗಿರಬೇಕು ಕನ್ನಡ
ಭಾಷೆಯನ್ನ ಸ್ಪಷ್ಟವಾಗಿ ಮಾತನಾಡಬೇಕು, ಅಂತವ್ರ್ಯಕ್ತೀಯ
ಸಂವಹನದ ಜೊತೆಗೆ ಸಂವಾದ ಕೌಶಲ್ಯವನ್ನು ಮತ್ತು ಕರ್ನಾಟಕ
ರಾಜ್ಯದ 30 ಜಿಲ್ಲೆಗಳಲ್ಲಿ ಪ್ರಯಾಣಿಸುವುದು ಅವಶ್ಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಕರು, ಯುವ ಸಬಲೀಕರಣ
ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಕ್ರೀಡಾಂಗಣ ದಾವಣಗೆರೆ, ದೂರವಾಣಿ
ಸಂಖ್ಯೆ : 08192222059/ 9008353793 / 9964496242 ಗೆ ಸಂಪರ್ಕಿಸಬಹುದು
ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ

ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *