ದಾವಣಗೆರೆ ಸೆ.11
ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ ಜಗತ್ತಿನಲ್ಲಿ
ಸಮಸ್ಯೆಗಳಿಲ್ಲದವರು ಯಾರು ಇಲ್ಲ ಪ್ರತಿಯೊಬ್ಬರಿಗೂ ಕೂಡ
ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ. ಆದ್ದರಿಂದ ಆತ್ಮಹತ್ಯೆಗೆ
ಶರಣಾಗದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಮೊದಲು
ಪ್ರಯತ್ನಿಸಬೇಕು, ನಿಮ್ಮ ನಿಮ್ಮ ಆಪ್ತರೊಂದಿಗೆ ಅಥವಾ
ಹಿರಿಯರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಅವರ ಸಲಹೆ
- ಸೂಚನೆಗಳನ್ನು ಪಡೆದು ನಡೆದುಕೊಂಡಲ್ಲಿ
ಆತ್ಮಹತ್ಯೆಯಂತಹ ನಕಾರಾತ್ಮಕ ಯೋಚನೆಯಿಂದ ದೂರ ಬರಲು
ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು
ಜಿಲ್ಲಾಧಿಕಾರಿಗಳ ಕಛೇರಿಯ ತುಂಗಭದ್ರ ಸಭಾಂಗಣದಲ್ಲಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದಾವಣಗೆರೆ ಹಾಗೂ ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ
ಕಾರ್ಯಕ್ರಮ ದಾವಣಗೆರೆ ಮತ್ತು ಮನೋವೈದ್ಯಕೀಯ ವಿಭಾಗ
ಚಿಗಟೇರಿ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಜಿಲ್ಲೆಯ ವೈದ್ಯಾಧಿಕಾರಿಗಳಿಗೆ
ವಿಶ್ವ ಆತ್ಮಹತ್ಯೆ ತಡೆ ದಿನ ಕುರಿತು ಕಾರ್ಯಗಾರವನ್ನು ಪೋಸ್ಟರ್
ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು
ಉದ್ಘಾಟಿಸಿದರು
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜೆ.ಜೆ.ಎಂ ವೈದ್ಯಕೀಯ
ಕಾಲೇಜಿನ ಹಿರಿಯ ಪ್ರಾಧ್ಯಾಪಕರು ಮತ್ತು ಮನೋವೈದ್ಯರಾದÀ
ಡಾ. ಸುದರ್ಶನ್ ಸಿ. ವೈ. ಮಾತನಾಡಿ, ಆತ್ಮಹತ್ಯೆ ಎಂದರೆ ವ್ಯಕ್ತಿಯು
ತನ್ನನ್ನು ತಾನೇ ಉದ್ದೇಶಪೂರ್ವಕವಾಗಿ ಹತ್ಯೆ
ಮಾಡಿಕೊಳ್ಳುವುದಾಗಿದೆ. ಹಾಗೂ ಆತ್ಮಹತ್ಯೆಯು ಖಿನ್ನತೆ ಎಂಬ
ಮಾನಸಿಕ ಖಾಯಿಲೆಯ ಲಕ್ಷಣವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ
ವ್ಯಕ್ತಿಗೆ 25 ಬಾರಿ ಆತ್ಮಹತ್ಯೆ ಆಲೋಚನೆ ಬರುತ್ತದೆ.
ಪ್ರಸ್ತುತವಾಗಿ ಇದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ, ವಿಶ್ವ
ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 40 ಸೆಕೆಂಡಿಗೆ ಒಂದು
ಆತ್ಮಹತ್ಯೆ ಜರುಗುತ್ತಿದೆ. ಭಾರತ ದೇಶದಲ್ಲಿ ಪ್ರತಿ ವರ್ಷ 90 ಸಾವಿರ
ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತು ಆತ್ಮಹತ್ಯೆಗೆ
ಶರಣಾಗುತ್ತಿರುವವರ ವಯಸ್ಸು 15 ರಿಂದ 29 ವರ್ಷದ
ವಯೋಮಾನದವರಾಗಿದ್ದಾರೆ. ಹಾಗೂ ಜೊತೆಗೆ ಈ ರೀತಿಯಾದ
ಆತ್ಮಹತ್ಯೆ ಪ್ರವೃತ್ತಿಯು ದಾರಿಯನ್ನು ಹಿಡಿಯುವುದಕ್ಕೆ ನಾನಾ
ರೀತಿಯ ಕಾರಣಗಳಿವೆ. ಮಾನಸಿಕ ಖಾಯಿಲೆಗಳಿಂದ,
ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳಿಂದ, ನಕಾರಾತ್ಮಕ
ಆಲೋಚನೆಗಳು, ಹಠಾತ್ ನಿರ್ಧಾರದಿಂದ, ಮಾದಕ &ಚಿmಠಿ; ಮದ್ಯ ವ್ಯಸನ
ಸೇವನೆಯಿಂದ, ಸಾಮಾಜಿಕ ಸಮಸ್ಯೆಗಳು ಅಥವಾ ಕೌಟುಂಬಿಕದಲ್ಲಿನ
ಒತ್ತಡಕಾರಕಾಂಶಗಳು, ಇನ್ನಿತರ ಹಲವಾರು ಕಾರಣಗಳಿಂದ
ಪ್ರೇರಿತರಾಗುತ್ತಾರೆ. ಮತ್ತು ಕೋವಿಡ್-19 ಸಮಯದಲ್ಲಿಯೂ
ಕೂಡ ಆತ್ಮಹತ್ಯೆಗೆ ಒಳಾಗಾಗುತ್ತಿದ್ದಾರೆ.
ಇದರಿಂದ ಹೊರಬರುವವುದು ನಕಾರಾತ್ಮಕ ಅಲೋಚನೆಗಳು
ಬಂದರೆ ಆಪ್ತರೊಡನೆ ಸಮಸ್ಯೆಗಳನ್ನು ಹಂಚಿಕೊಳ್ಳುವುದು,
ಅಥವಾ ಕುಟುಂಬದೊಡನೆ ಬೆರೆಯುವುದು, ದೈನಂದಿನವಾಗಿ ಧ್ಯಾನ,
ಪ್ರಾಣಯಾಮ, ವ್ಯಾಯಾಮಗಳ ಅಭ್ಯಾಸ, ಹಾಗೂ
ಮನೋರಂಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಥವಾ
ಗುಣಮಟ್ಟದ ಔಷಧಿ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯಿಂದ
ಆತ್ಮಹತ್ಯೆಯನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಅಪಾರ ಜಿಲ್ಲಾಧಿಕಾರಿಗಳಾದ ಪೂಜಾರ್ ವೀರಮಲ್ಲಪ್ಪ,
ಮನೋವೈದ್ಯರಾದ ಡಾ. ಗಂಗಂ ಸಿದ್ದಾರೆಡ್ಡಿ, ತಾಲ್ಲೂಕು
ಆರೋಗ್ಯಾಧಿಕಾರಿಗಳಾದ ಡಾ. ದೇವರಾಜ್, ಮನಶಾಸ್ತ್ರಜ್ಞರಾದ ಎಸ್.
ವಿಜಯಕುಮಾರ್, ಸೋಷಿಯಲ್ ವರ್ಕರ್ ಸಂತೋಷ್ಕುಮಾರ್, ನರ್ಸಿಂಗ್
ಆಫೀಸರ್ ಗಿರೀಶ್ ನಾಯ್ಕ್ ಎಸ್.ವೈ. ಇತರರು ಇದ್ದರು.