ದಾವಣಗೆರೆ ಸೆ.12
ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ
ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದು
ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು
ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದ
ಎಂ.ಕಾರಜೋಳ ಹೇಳಿದರು.
ನ್ಯಾಮತಿಯಲ್ಲಿ ಶನಿವಾರ ಹೊನ್ನಾಳಿ-ನ್ಯಾಮತಿ ಅವಳಿ
ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ
ಹಾಗೂ ವಿವಿಧ ಸರ್ಕಾರಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ
ಅವರು, ಖಾಸಗಿ ಶಾಲೆಯ ಸುಮಾರು 34 ಸಾವಿರ ಮಕ್ಕಳು
ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ. ಇದು
ಹೆಮ್ಮೆಯ ವಿಷಯ ಎಂದರು.
ಇಂದಿನ ದಿನಗಳಲ್ಲಿ ಪೋಷಕರು, ವಿದ್ಯಾರ್ಥಿಗಳು ಸರ್ಕಾರಿ
ಶಾಲೆಗಳತ್ತ ಮುಖ ಮಾಡಲು ಮುಖ್ಯ ಕಾರಣ ಶಿಕ್ಷಣ
ವ್ಯವಸ್ಥೆಯಲ್ಲಿನ ಸುಧಾರಣೆಯಾಗಿದೆ ಎಂದ ಅವರು, ಸರ್ಕಾರಿ
ಶಿಕ್ಷಣ ಸಂಸ್ಥೆಗಳನ್ನು ಸಾರ್ವಜನಿಕರು ಬೆಂಬಲಿಸಬೇಕು
ಎಂದರು.
ಕರೋನಾ ಭಯದಲ್ಲಿ ಕೂಡ ನಮ್ಮ ಕರ್ನಾಟಕ ವಸತಿ
ಶಿಕ್ಷಣ ಪಿಯುಸಿ ಮಕ್ಕಳು ಶೇ. 86 ರಷ್ಟು ಉತ್ತೀರ್ಣರಾಗಿದ್ದಾರೆ.
ರಾಜ್ಯದಲ್ಲಿ ಪಿಯುಸಿ ಸರಾಸರಿ ಶೇ.61 ರಷ್ಟಿದ್ದರೆ, ವಸತಿ ಶಿಕ್ಷಣ
ಇಲಾಖೆ ಶೇ. 86 ರಷ್ಟು ಇದ್ದು, ಸರಾಸರಿ ಶೇ. 25 ರಷ್ಟು
ಹೆಚ್ಚಾಗಿದೆ. ಅದೇ ರೀತಿ ಎಸ್‍ಎಸ್‍ಎಲ್‍ಸಿ ಮಕ್ಕಳು ಶೇ. 95 ರಷ್ಡು
ಮಕ್ಕಳು ಉತ್ತೀರ್ಣರಾಗಿದ್ದಾರೆ. ರಾಜ್ಯದ ಸರಾಸರಿ 79 ರಷ್ಟು
ಇದ್ದರೆ, ವಸತಿ ಶಿಕ್ಷಣ ಇಲಾಖೆ ಶೇ. 91 ರಷ್ಟಿದೆ ಎಂದು ತಿಳಿಸಿದರು.
ಹೊನ್ನಾಳಿ-ನ್ಯಾಮತಿ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ
ಕಾಮಗಾರಿಗಳ ಅಭಿವೃದ್ಧಿ ಕೆಲಸಗಳಿಗೆ ರೂ. 80 ಕೋಟಿ
ಹಣವನ್ನು ಕೊರೊನಾ ಸಂಕಷ್ಟದಲ್ಲಿಯೂ ತರಲಾಗಿದೆ.
ಇದರಿಂದ ಶಾಸಕ ರೇಣುಕಾಚಾರ್ಯ ಅವರ ಸಾಮಾಜಿಕ ಕಳಕಳಿ
ದೊಡ್ಡಮಟ್ಟದಲ್ಲಿರುವುದು ತಿಳಿದುಬರುತ್ತದೆ ಎಂದು
ಹೇಳಿದರು.
ಪರಿಶಿಷ್ಟ ಜಾತಿಯ ಜನಾಂಗದ ಕಲ್ಯಾಣಕ್ಕಾಗಿ ಹಣ: ಪರಿಶಿಷ್ಟ ಜಾತಿಯ
ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವ ಸಲುವಾಗಿ ಎರಡು
ವಸತಿ ಶಾಲೆಗಳು ಸುಮಾರು ರೂ. 36 ಕೋಟಿ ವೆಚ್ಚದಲ್ಲಿ
ನಿರ್ಮಾಣವಾಗಲಿದೆ. ಮತ್ತು 5 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ
ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ಎಸ್.ಸಿ ಎಸ್.ಟಿ
ಕಾಲೊನಿಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣ
ಮಾಡಲಾಗುತ್ತಿದ್ದು, ಒಟ್ಟು 80 ಕೋಟಿಯಲ್ಲಿ ಸುಮಾರು 50
ಕೋಟಿಯಷ್ಟು ಹಣವನ್ನು ಪರಿಶಿಷ್ಟ ಜಾತಿಯ ಜನಾಂಗದ
ಕಲ್ಯಾಣಕ್ಕಾಗಿ ಇವತ್ತು ಶಾಸಕರು ಹಣ ತಂದಿರುವುದು ಅತ್ಯಂತ
ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ ಎಂದು ತಿಳಿಸಿದರು.
ಕ್ಲಿಷ್ಟ ಪರಿಸ್ಥಿತಿಯಲ್ಲಿ ಕೂಡ ಅಭಿವೃದ್ಧಿಗೆ ಅನುದಾನ: ಸರ್ಕಾರ
ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಈ ನಾಲ್ಕು ವರ್ಷದ
ಅವಧಿಯಲ್ಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು
ಎನ್ನುವ ಸಿಎಂ ಅವರಿಗೆÀ ಕನಸಿತ್ತು. ಒಂದು ಕಡೆ ಬರ,
ಇನ್ನೊಂದು ಕಡೆ ಪ್ರವಾಹ ಜೊತೆಗೆ ಕೊರೊನಾ ಅವರಿಸಿತ್ತು.
ಇಂತಹ ಸಂದರ್ಭದಲ್ಲಿಯೂ ಕೂಡ ಸಿಎಂ ಅವರು ತಾವು
ಕಂಡಂತಹ ಕನಸು ನನಸು ಮಾಡುತ್ತಿದ್ದಾರೆ. ಕ್ಲಿಷ್ಟ
ಪರಿಸ್ಥಿತಿಯಲ್ಲಿ ಕೂಡ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದಾರೆ
ಎಂದು ಪ್ರಶಂಸಿಸಿದರು.
ಕೊರೊನಾ ವೇಳೆ ಇಡೀ ಪ್ರಪಂಚಕ್ಕೆ ಆರ್ಥಿಕ ಸಂಕಷ್ಟ
ಒದಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು
ಅತ್ಯಂತ ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ
ಎಂದರು. ನೇರೆ ದೇಶವಾದ ಚೀನಾ ನಿತ್ಯ ತನ್ನ ಕ್ಯಾತೆಯನ್ನು
ತೊರಿಸುತ್ತಿದೆ. ಇತಂಹ ಪರಿಸ್ಥಿತಿಯಲ್ಲಿ ದೇಶವನ್ನು
ಸುಭದ್ರವಾಗಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ
ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ನಮ್ಮ ದೇಶದ
ಆಡಳಿತವನ್ನು ಬೇರೆ ದೇಶಗಳು ನೋಡುವಂತೆ
ಮಾಡಿದ್ದಾರೆ ಎಂದು ಬಣ್ಣಿಸಿದರು.
ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ
ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ,
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ
ಇಲಾಖೆಯ ಸಚಿವರಾದ ಡಾ.ಅಶ್ವಥ್ ನಾರಾಯಣ ಮಾತನಾಡಿ, ಯಾವ
ಕ್ಷೇತ್ರದಲ್ಲಿಯು ಯಾವ ಶಾಸಕರು ಕೆಲಸ ಮಾಡದ
ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಇರಲಿ, ಇಲ್ಲದಿರಲಿ
ಕ್ಷೇತ್ರಕ್ಕೆ ಬೇಕಾದ ಎಲ್ಲ ಕಾಮಗಾರಿ ಹಾಗೂ ಕೆಲಸಗಳನ್ನು
ಸರ್ಕಾರದಿಂದ ಪಡೆದುಕೊಂಡು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ
ಮಾಡಿಸುತ್ತಿರುವ ವ್ಯಕ್ತಿಯೆಂದರೆ ಅದು ಶಾಸಕ
ರೇಣಕಾಚಾರ್ಯ ಅವರು ಎಂದು ಹೇಳಿದರೆ ತಪ್ಪಾಗದು
ಎಂದರು.
ಹೊನ್ನಾಳಿ ಕ್ಷೇತ್ರದ ಜನರು ಅದೃಷ್ಟವಂತರು.
ರೇಣುಕಾಚಾರ್ಯ ಅವರು ಜನರ ಧ್ವನಿಯಾಗಿ, ಜನಪ್ರತಿನಿಧಿ
ಸ್ಥಾನದದೊಂದಿಗೆ ಜನರ ಕೆಲಸ ಮಾಡುವ ಮೂಲಕ
ಇತರರಿಗೂ ಪ್ರೇರಕವಾಗಿರುವುದು ಹೆಮ್ಮೆಯ ವಿಷಯ.
ಜನರು ಕೊಟ್ಟಂತಹ ಅವಕಾಶದಲ್ಲಿ ಉತ್ತಮವಾಗಿ ಕರ್ತವ್ಯ
ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘೀಸಿದರು.
ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ಕೊಡುಗೆ
ದೊಡ್ಡದು: ದಾವಣಗೆರೆ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ
ಹೆಸರು ಪಡೆದಿದೆ. ಉನ್ನತ ಶಿಕ್ಷಣ ಸಚಿವನಾಗಿ ಸಿಎಂ
ಯಡಿಯೂರಪ್ಪನವರ ನಾಯಕತ್ವದಲ್ಲಿ ಶಿಕ್ಷಣ
ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆ ತರಲಾಗಿದೆ. 1968
ಹಾಗೂ 1986 ರಲ್ಲಿ ಈ ಹಿಂದೆ ಶಿಕ್ಷಣ ನೀತಿ ತರಲಾಗಿತ್ತು. ಅದರಂತೆ
ಇದೀಗ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು
ತರಲಾಗಿದೆ. ಇದರ ಶ್ರೇಯ ಪ್ರಧಾನ ಮಂತ್ರಿ ಅವರಿಗೆ
ಸಲ್ಲುತ್ತದೆ. ಈ ಶಿಕ್ಷಣ ನೀತಿಗೆ ಕಾರ್ಯ ರೂಪ ಕೊಟ್ಟವರು
ರಾಜ್ಯದ ಡಾ.ಕಸ್ತೂರಿ ರಂಗನ್ ಅವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ
ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಲು ರಾಜ್ಯವು
ಕಾರಣವಾಗಿದ್ದು, ನಮ್ಮ ಮೇಲೆ ತುಂಬಾ ಜವಾಬ್ದಾರಿ ಇದೆ ಎಂದು
ಹೇಳಿದರು.
ಮಾದರಿಯಾಗಿ ಶಿಕ್ಷಣ ನೀತಿ ಅನುಷ್ಠಾನ: ರಾಷ್ಟ್ರೀಯ ಶಿಕ್ಷಣ
ನೀತಿಯನ್ನು ಕಾರ್ಯರೂಪಕ್ಕೆ ತರಲು ನೀತಿ ರೂಪಿಸಿದ್ದು,
ಕಾರ್ಯರೂಪಕ್ಕೆ ತರುವ ದೊಡ್ಡ ಜವಾಬ್ದಾರಿ ನಮ್ಮ ರಾಜ್ಯದ
ಮೇಲಿದೆ. ದೇಶದ ಎಲ್ಲ ರಾಜ್ಯದವರು ನಮ್ಮ ರಾಜ್ಯದ ಕಡೆ
ನೋಡುತ್ತಿದ್ದಾರೆ. ಈ ಮೂಲಕ ಮಾದರಿಯಾಗಿ ಶಿಕ್ಷಣ
ನೀತಿಯನ್ನು ಅನುಷ್ಠಾನಕ್ಕೆ ತರಬೇಕಿದೆ. ಸಮಾಜದಲ್ಲಿ ಎಲ್ಲ
ಕ್ಷೇತ್ರದಲ್ಲಿನ ವೃತ್ತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕವಾಗಿದೆ.
ರಾಜ್ಯದ ಪ್ರತಿಯೊಬ್ಬ ಯುವಕರಿಗೂ ಉತ್ತಮ ಗುಣಮಟ್ಟದ
ಶಿಕ್ಷಣ ನೀಡಬೇಕಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದೊಂದು
ದೊಡ್ಡ ಪರ್ಯಾಯವಾಗಲಿದೆ ಎಂದರು.
ನ್ಯಾಮತಿ ಪದವಿ ಕಾಲೇಜಿಗೆ ಡಿಜಿಟಲ್ ಲರ್ನಿಂಗ್ ಮ್ಯಾನೇಜ್ಮೆಂಟ್ ಶಿಕ್ಷಣ
ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಕಾಲೇಜು ಹಾಗೂ
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಜಿಟಲ್ ಶಿಕ್ಷಣ ವ್ಯವಸ್ಥೆ
ಮಾಡಲಾಗುತ್ತಿದೆ. ಪ್ರತಿಯೊಂದು ವಿದ್ಯಾರ್ಥಿಗಳಿಗೂ
ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನ ಮಾಡಲಾಗುತ್ತಿದೆ
ಎಂದರು.
ಐಟಿಐ ಕಾಲೇಜು ಅಭಿವೃದ್ಧಿಗೆ 5 ಸಾವಿರ ಕೋಟಿ: ಐಟಿಐ ಕೋರ್ಸ್‍ಗೆ 150
ಕಾಲೇಜು ಆಯ್ಕೆ ಮಾಡಿದ್ದು, ಒದೊಂದು ಕಾಲೇಜಿಗೆ 30 ರಿಂದ 33
ಕೋಟಿ ಖರ್ಚು ಮಾಡಲಾಗುತ್ತಿದ್ದು, ಒಟ್ಟು 5 ಸಾವಿರ ಕೋಟಿ
ಕೇವಲ ಐಟಿಐ ಕಾಲೇಜು ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ.
ಜೊತೆಗೆ ಡಿಪ್ಲೋಮಾ ಕಾಲೇಜಿಗೆ ಬಹಳಷ್ಟು ವಿದ್ಯಾರ್ಥಿಗಳು
ಸೇರಬಯುಸುತ್ತಾರೆ. ಪಾಲಿಟೆಕ್ನಿಕ್‍ಗೆ ಸೇರ ಬಯಸುವ
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಇವತ್ತು ಏನಾದರೂ
ಉತ್ತಮವಾದ ಉದ್ಯೋಗ ಅವಕಾಶವಿದೆ ಎಂದರೆ ಅದು
ಪಾಲಿಟೆಕ್ನಿಕ್ ಕಾಲೇಜಿನಿಂದ. ಈ ಹಿನ್ನೆಲೆಯಲ್ಲಿ ಪಾಲಿಟೆಕ್ನಿಕ್
ಕಾಲೇಜಿಗಾಗಿ ಬಹಳಷ್ಟು ಸುಧಾರಣೆ ತರಲಾಗುತ್ತಿದೆ. ಸಿಲ್‍ಬಸ್
ಸರಳ ಮಾಡಲಾಗುತ್ತಿದೆ. ವಿಶ್ವವ್ಯಾಪ್ತಿಯಲ್ಲಿ ಅಭಿವೃದ್ಧಿ
ಹೊಂದುವಂತಹ ಸಿಲಬಸ್ ತರಲಾಗುತ್ತಿದ್ದು, ನೂರರಷ್ಟು
ಉದ್ಯೋಗಾವಕಾಶ ಸಿಗುವಂತೆ ಮಾಡಲಾಗುತ್ತಿದೆ. ಒಂದು
ಪದವಿಯಲ್ಲಿ ವಿವಿಧೆತೆ ಕೊಟ್ಟು ವಿದ್ಯಾರ್ಥಿಗಳಿಗೆ ಉದ್ಯೋಗ
ಪಡೆಯಲಿಕ್ಕೆ ಬೇಕಾದಂತಹ ಅವಶ್ಯಕತೆ ಇರುವಂತಹ
ತರಬೇತಿ ನೀಡಲಾಗುತ್ತಿದೆ ಎಂದರು.
ಅವಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ:
ಎಂ.ಪಿ.ರೇಣುಕಾಚಾರ್ಯ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಹಾಗೂ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಸಾಂಕೇತಿಕವಾಗಿ
ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದೆ. ರೂ. 69 ಕೋಟಿ
ವೆಚ್ಚದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ
ಲೋಕಾರ್ಪಣೆ ಮಾಡಲಾಗಿದೆ ಎಂದರು.
ಅವಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಂಸದರು ನಾವು
ಬದ್ಧರಾಗಿದ್ದೇವೆ. ವಸತಿಶಾಲೆ, ರಸ್ತೆಗಳು, ಹಾಸ್ಟೆಲ್‍ಗಳು,
ಎಪಿಎಂಸಿ, ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಅನೇಕ
ಕಾರ್ಯಕ್ರಮ ಉದ್ಘಾಟನಾ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ
ಸಹಕಾರ ಸಚಿವರಾದ ಸೋಮಣ್ಣ ಅವರು ಬರಬೇಕಿತ್ತು.
ಮೈಸೂರು ದಸರಾ ಹಿನ್ನೆಲೆಯಲ್ಲಿ ಬರಲಾಗಿಲ್ಲ ಎಂದು
ತಿಳಿಸಿದರು.
ಎಪಿಎಂಸಿಗೆ ಪೂರಕವಾಗಿ ಅನೇಕ ಯೋಜನೆ ಮಂಜೂರು
ಮಾಡಲಾಗುವುದು. ಜೊತೆಗೆ ಹೊನ್ನಾಳಿ-ನ್ಯಾಮತಿ ರಸ್ತೆ
ಮಧ್ಯದಲ್ಲಿ ದ್ವೀಪ ಅಳವಡಿಸಲು ಕಾರ್ಯಕ್ರಮದಲ್ಲಿ
ಕಾರಜೋಳ ಅವರಿಗೆ ವಿನಂತಿ ಮಾಡಲಾಗಿದೆ ಎಂದ ಅವರು,
ಉನ್ನತ ಶಿಕ್ಷಣ ಸಚಿವರು ಕೌಶಲ ಅಭಿವೃದ್ಧಿ ನಿಗಮದಿಂದ
ಯುವಕರಿಗೆ ಕೆಲಸ ನೀಡಲು ಅನೇಕ ಕೋರ್ಸ್ ನೀಡುತ್ತೇವೆ
ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಇದೊಂದು ವಿಶೇಷ
ಕಾರ್ಯಕ್ರಮವಾಗಿದೆ. ಬಹಳ ಅದ್ದೂರಿಯಾಗಿ ಮಾಡಬೇಕು
ಎಂದು ಹಮ್ಮಿಕೊಂಡಿದ್ದು, ಮಳೆಯ ಕಾರಣ
ಸಾಧ್ಯವಾಗಿಲ್ಲ. ರೇಣುಕಾಚಾರ್ಯ ಅವರು ಜಿಲ್ಲೆಯಲ್ಲಿ
ಮಾತ್ರವಲ್ಲ ರಾಜ್ಯದಲ್ಲಿ ಹೊನ್ನಾಳಿ ತಾಲೂಕನ್ನು ನಂಬರ್ ಒನ್
ಮಾಡಬೇಕು ಎನ್ನುವ ಅಸೆ ಇಟ್ಟುಕೊಂಡಿದ್ದಾರೆ. ಅದನ್ನು ಮಾಡಿ
ತೋರಿಸುತ್ತಾರೆ ಎನ್ನುವ ವಿಶ್ವಾಸವಿದ್ದು, ಯಾವುದೇ
ವಿಷಯದಲ್ಲಿ ಜಗ್ಗದೆ ಬಗ್ಗದೆ ಕೆಲಸ ಮಾಡುವ ಶಾಸಕರು
ಇವರಾಗಿದ್ದಾರೆ ಎಂದು ಹೊಗಳಿದರು.
ಜಿಲಾ ್ಲಉಸ್ತುವಾರಿ ಸಚಿವರು ಸಿಕ್ಕಿರುವುದು ನಮ್ಮ
ಪುಣ್ಯ: ಉಪಮುಖ್ಯಮಂತ್ರಿಗಳಾಗಿ ಗೋವಿಂದ ಎಂ.ಕಾರಜೋಳ
ಹಾಗೂ ಡಾ.ಅಶ್ವಥ್ ನಾರಾಯಣ್ ಅವರು ರಾಜ್ಯದ ಅಭಿವೃದ್ಧಿಗಾಗಿ
ಹಗಲಿರುಳು ಶ್ರಮಿಸುವ ಮೂಲಕ ಉತ್ತಮ ಕೆಲಸ
ಮಾಡುತ್ತಿದ್ದಾರೆ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಸವರಾಜ್
ಅವರು ಜಿಲ್ಲೆಗೆ 25 ಬಾರಿ ಬಂದು ಹೋಗಿದ್ದಾರೆ. ಕೊರೊನ
ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಡವರ
ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಇಂತಹ ಕೆಲಸ ಮಾಡುವ ಸಚಿವರು
ಸಿಕ್ಕಿರುವುದು ನಮ್ಮ ಪುಣ್ಯ ಎಂದರು.
ಪ್ರಧಾನಮಂತ್ರಿಗಳು ಪ್ರತಿಯೊಬ್ಬರಿಗೂ ಗ್ಯಾಸ್ ಸಿಲಿಂಡರ್,
ಅಯುμÁ್ಮನ್ ಕಾರ್ಡ್, ಡಿಜಿಟಲ್ ಇಂಡಿಯಾ ಸೇರಿದಂತೆ ಹಲವು ಯೋಜನೆ
ಕೊಟ್ಟಿದ್ದಾರೆ. 2023ಕ್ಕೆ ರೈತರ ಆದಾಯ ದ್ವಿಗುಣ
ಮಾಡಬೇಕು, ಪ್ರತಿಯೊಂದು ಮನೆಗೆ ನಲ್ಲಿಯ ಮೂಲಕ
ನೀರು ನೀಡಬೇಕು, ಪ್ರತಿಯೊಬ್ಬರಿಗೂ ಸೂರು
ಒದಗಿಸಬೇಕು ಎನ್ನುವ ಮಹತ್ತರವಾದ ಆಕಾಂಕ್ಷೆ
ಹೊಂದಿದ್ದಾರೆ ಎಂದರು.
ಕಿಸಾನ್ ಸಮ್ಮಾನ ಯೋಜನೆಯಿಂದ ಹಿಡಿದು ಬಡವರ ಅರೋಗ್ಯ
ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಆರ್ಥಿಕ
ಸಂಕಷ್ಟದಲ್ಲೂ ಕೂಡ ಪಿಎಂ ಮೋದಿ ಅವರು ಕೆಲಸ
ಮಾಡುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಸಿಎಂ
ಯಡಿಯೂರಪ್ಪನವರು ಸಹ ಆರ್ಥಿಕ ಸಂಕಷ್ಟ ಇದ್ದರೂ
ಬಡವರ, ದಲಿತರ, ಶೋಷಿತ ವರ್ಗದವರಿಗೂ 5 ಕೆಜಿ ಅಕ್ಕಿ ಹಾಗೂ
ಕೇಂದ್ರದಿಂದ 5 ಕೆಜಿ ಅಕ್ಕಿ ಹಾಗೂ 1 ಕೆಜಿ ಬೆಳೆ ನೀಡಿದ್ದಾರೆ. ಈÀ
ಮೂಲಕ ಅವರ ಜೀವನಕ್ಕೆ ಧಕ್ಕೆ ಬಾರದಂತೆ ಹಾಗೂ ಹಸಿವಿನಿಂದ
ಇರಬಾರದು ಎನ್ನುವ ದೃಷ್ಟಿಯಿಂದ ಕರ್ತವ್ಯ
ನಿರ್ವಹಿಸಲಾಗುತ್ತಿದೆ ಎಂದರು.
ಒಳ್ಳೆಯ ಕೆಲಸಗಳಿಗೆ ಒತ್ತು: ಇದರ ಮಧ್ಯೆಯೇ
ಹೊನ್ನಾಳಿ ಪಟ್ಟಣಕ್ಕೆ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಾಗಿದೆ.
ಸಿಎಂ ಅವರು ಇಂತಹ ಕಷ್ಟಕಾಲದ ಸಂದರ್ಭದಲ್ಲಿ ಎಲ್ಲಾ
ತಾಲೂಕಿನಲ್ಲಿ ಅಭಿವೃದ್ಧಿಗಾಗಿ ಹಣ ಕೊಡುತ್ತಿದ್ದಾರೆ. ರಾಜ್ಯದ
ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಕೆಲಸ
ಮಾಡುತ್ತಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ
ದೇಶಕ್ಕೆ ಪ್ರಧಾನಿ ಮೋದಿ ಹಾಗೂ ರಾಜ್ಯಕ್ಕೆ ಯಡಿಯೂರಪ್ಪ
ಅವರನ್ನು ಆಯ್ಕೆ ಮಾಡಲು ಸಹಕರಿಸೋಣ. ಬಿಜಿಪಿ ಪಕ್ಷದ
ಕೆಲಸಗಳು ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿದೆ. ಇಂತಹ
ಕೆಲಸಗಳನ್ನು ಸ್ಮರಿಸಿಕೊಂಡು ಒಳ್ಳೆಯ ಕೆಲಸಗಳಿಗೆ
ಒತ್ತು ಕೊಡೋಣ ಎಂದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ,
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಜಿಲ್ಲಾ ಪಂಚಾಯತ್
ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ
ಗಂಗಾಧರನಾಯ್ಕ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ
ಅಧ್ಯಕ್ಷ ವೀರಶೇಖರಪ್ಪ, ಹೊನ್ನಾಳಿ ತಾ.ಪಂ ಅಧ್ಯಕ್ಷ
ರಂಗಪ್ಪ, ನ್ಯಾಮತಿ ತಾ.ಪಂ ಅಧ್ಯಕ್ಷ ರವಿಕುಮಾರ್, ಹೊನ್ನಾಳಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುರೇಶ್,
ಸಾಮಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶಪ್ಪ,
ಸುರೇಂದ್ರನಾಯ್ಕ್, ಉಮಾ ರಮೇಶ್, ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ
ಸಿಇಓ ಪದ್ಮಾ ಬಸವಂತಪ್ಪ, ಜಿ.ಪಂ, ತಾ.ಪಂ ಹಾಗೂ ಎಪಿಎಂಸಿ ಸದಸ್ಯರು
ಸೇರಿದಂತೆ ಮತ್ತಿತರರು ಹಾಜರಿದ್ದರು.