ದಾವಣಗೆರೆ ಸೆ.14
ಮಲೇಬೆನ್ನೂರು ಸಮುದಾಯ ಅರೋಗ್ಯ ಕೇಂದ್ರ,
ಹೊನ್ನಾಳಿಯ ತಾಲ್ಲೂಕು ಅರೋಗ್ಯ ಕೇಂದ್ರ,
ಮಾದನಬಾವಿಯ ಕೋವಿಡ್ ಕೇರ್ ಸೆಂಟರ್ ಮತ್ತು ಚನ್ನಗಿರಿಯ
ತಾಲ್ಲೂಕು ಅರೋಗ್ಯ ಕೇಂದ್ರ ಹಾಗೂ ಕಾಕನೂರು
ಕೋವಿಡ್ ಕೇರ್ ಸೆಂಟರ್ಗಳಿಗೆ ಸೋಮವಾರ ಡಿಎಚ್ಓ ಅವರೊಂದಿಗೆ
ಸಿಇಓ ಪದ್ಮಾ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸದರಿ ಕೇಂದ್ರಗಳಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕೋವಿಡ್
ರೋಗಿಗಳಿಗೆ ನಿಗದಿತ ಚಿಕಿತ್ಸೆ ಹಾಗೂ ಶುಚಿ ಮತ್ತು
ರುಚಿಯಾದ ಬಿಸಿ ಬಿಸಿ ಆಹಾರವನ್ನು ವಿತರಿಸಲು ಕೋವಿಡ್ ಕೇರ್
ಸೆಂಟರ್ ಕೇಂದ್ರದ ಸಿಬ್ಬಂದಿಗಳಿಗೆ ತಿಳಿಸಿದರು.
ಪ್ರತಿದಿನ ನಿಗದಿಪಡಿಸಲಾದ ಗಂಟಲು ದ್ರವ ಪರೀಕ್ಷೆಗಳನ್ನು
ಮಾಡಲು ಸೂಕ್ತ ಕ್ರಮ ವಹಿಸುವಂತೆ ಟಿಎಚ್ಓಗಳಿಗೆ ಹಾಗೂ
ಸ್ವ್ಯಾಬ್ ಕಲೆಕ್ಷನ್ ಟೀಮ್ಗಳಿಗೆ ಸಹಕಾರ ನೀಡಲು ತಾಲ್ಲೂಕು
ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ
ಸೂಚಿಸಲಾಯಿತು.
(ಫೋಟೊ ಇದೆ)
ಕಪ್ಪು ಚುಕ್ಕೆ ಪ್ರದೇಶದಲ್ಲಿ ಕಸ
ಹಾಕುತ್ತಿದ್ದು: ಪಾಲಿಕೆವತಿಯಿಂದ ದಂಡ
ದಾವಣಗೆರೆ ಸೆ.14 (ಕರ್ನಾಟಕ ವಾರ್ತೆ)-
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ನಂ-34ರಲ್ಲಿಯ
ಹದಡಿ ರಸ್ತೆ ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್ನ
ಪೌಂಪೌಡ್ ಪಕ್ಕದಲ್ಲಿಯ ಕಪ್ಪು ಚುಕ್ಕೆ ಪ್ರದೇಶದಲ್ಲಿ
ಸಾರ್ವಜನಿಕರು ಮನೆಯ ಕಸ ತಂದು ಹಾಕುತ್ತಿರುವ ಬಗ್ಗೆ
ರಸ್ತೆಯಲ್ಲಿ ಓಡಾಡುವ ಜನರು ಹಾಗೂ ಸುತ್ತಮುತ್ತಲಿನ
ಸಾರ್ವಜನಿಕರು ಪಾಲಿಕೆಗೆ ಸಾಕಷ್ಟು ಬಾರಿ ದೂರಿರುತ್ತಾರೆ.
ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ವಾಹನಗಳಲ್ಲಿ ಕಸ
ಹಾಕಲು/ಸುರಿಯಲು ಬಂದ ಒರ್ವ ಸಾರ್ವಜನಿಕರಿಗೆ
ಮಹಾನಗರಪಾಲಿಕೆಯ ಸಿಬ್ಬಂದಿಗಳು ರೂ.2000/-ದಂಡ
ವಿಧಿಸಿರುತ್ತಾರೆ. ಕಾರಣ ಪ್ರತಿನಿತ್ಯ ಮನೆಯ ಹತ್ತಿರ ಬರುವ
ಮನೆ-ಮನೆ ಕಸ ಸಂಗ್ರಹಣೆ ವಾಹನಗಳಿಗೆ ಕಸ ನೀಡಿ
ನಗರದ ಸ್ವಚ್ಚತೆಗೆ ಸಹಕರಿಸಬೇಕೆಂದು
ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.