ದಾವಣಗೆರೆ ಸೆ.15
ರಾಜ್ಯ ಚುನಾವಣ ಆಯೋಗ ಕರ್ನಾಟಕ ಕೋವಿಡ್-19 ಹಿನ್ನೆಲೆಯಲ್ಲಿ
ಸ್ಥಳಿಯ ಸಂಸ್ಥೆಗಳ ಸಾರ್ವತ್ರಿಕ ಉಪಚುನಾವಣೆ ನಡೆಸಲು
ಅನುಸರಿಸಬೇಕಾದ ಪ್ರಾಮಾಣಿತ ಕಾರ್ಯ ನಿರ್ವಹಣಾ ಪದ್ದತ್ತಿ
(ಎಸ್‍ಓಪಿ) ಮಾರ್ಗಸೂಚಿಗಳನ್ನು ರಚನೆ ಮಾಡಲಾಗಿದೆ.
ಮುಂಬಲಿರುವ ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು
ಕೋವಿಡ್-19 ಹಿನ್ನೆಲೆಯಲ್ಲಿ ನಡೆಸಬೇಕಾಗಿರುತ್ತದೆ ಕೇಂದ್ರ
ಗೃಹ ಮಂತ್ರಾಲಯ ಮತ್ತು ಆರ್ಯೋಗ್ಯ ಕುಟುಂಬ
ಕಲ್ಯಾಣಇಲಾಖೆಯ ಕೋವಿಡ್-19 ನಿಯಂತ್ರಣಕ್ಕಾಗಿ ಕಾಲಕಾಲಕ್ಕೆ
ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ .
ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ
ನಿಟ್ಟಿನಲ್ಲಿ ಅನುಸರಿಸಬೇಕಾದ ಪದ್ದತ್ತಿಗಳ ಬಗ್ಗೆ ರಾಜ್ಯದ
ಆರ್ಯೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ
ನಿಪುಣರೊಂದಿಗೆ ವಿಸ್ತ್ರುತವಾಗಿ ಆಯೋಗದಲ್ಲಿ
ಚರ್ಚಿಸಲಾಗಿರುತ್ತದೆ.
ಅವರ ಸಲಹೆಗಳನ್ನು ಪರಿಗಣಿಸಿ ರಾಜ್ಯ ಚುನಾವಣಾ ಆಯೋಗವು
ಚುನಾವಣೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ
ಕ್ರಮಗಳನ್ನು ಅನುಸರಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ
ಅಭ್ಯರ್ಥಿಗಳು ಗರಿಷ್ಟ 5 ಜನ ಬೆಂಬಲಿಗರೊಂದಿಗೆ ಸಾಮಾಜಿಕ
ಅಂತರ ಕಾಯ್ದುಕೊಂಡು ಪ್ರಚಾರ ಮಾಡಬಹುದಾಗಿರುತ್ತದೆ
ಕೋವಿಡ್ ಸೋಂಕಿತ ವ್ಯಕ್ತಿಗಳು ಮತ ಚಲಾಯಿಸಲು
ಹಕ್ಕುಳವರಾಗಿದ್ದು ಇವರಿಗೆ ಅಂಚೆ ಮತ ಪತ್ರಗಳ ಮೂಲಕ
ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಚುನಾವಣಾ ಕಾರ್ಯದಲ್ಲಿ ನಿರತರಾಗುವ ಎಲ್ಲಾ ಅಧಿಕಾರಿ
ಸಿಬ್ಬಂದಿಗಳು ಅವಶ್ಯಕ ಸಾಮಾಗ್ರಿಗಳಾದ ಫೇಸ್‍ಮಾಸ್ಕ್,
ಸ್ಯಾನಿಟೈಸರ್, ಥರ್ಮಲ್‍ಸ್ಕ್ಯಾನರ್, ಇತ್ಯಾದಿಗಳನ್ನು
ಉಪಯೋಗಿಸಿಕೊಂಡು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ
ಚುನಾವಣೆ ನಡೆಸಲು ಅವಕಾಶ ಕಲ್ಪಿಸಲಾಗಿರುತ್ತದೆ ಈ ಬಗ್ಗೆ
ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ
ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಚುನಾವಣಾ
ಆಯೋಗದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.