ದಾವಣಗೆರೆ ಶಾಖೆಯ ಡಿವಿಜನಲ್‌ ಮ್ಯಾನೇಜರ್‌ ಆದ ತಿಪ್ಪೇಸ್ವಾಮಿ ಅವರು ಗ್ರಾಹಕರಿಗೆ ವಾಹನ ಸಾಲ, ಗೃಹ ಸಾಲ ಮತ್ತು ಕೃಷಿ ಸಾಲಗಳ ಬಗ್ಗೆ ಗ್ರಾಹಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಅವರು ಹರಿಹರದ ಕೆನರಾ ಬ್ಯಾಂಕ್‌ನಲ್ಲಿ ಏರ್ಪಡಿಸಿದ್ದ ತ್ವರಿತ ಸಾಲಗಳ ಮೇಳ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಪ್ರಬಂಧಕರಾದ ಶ್ರೀಮತಿ ಭಾರತಿಯವರು ಈ ಸಂದರ್ಭದಲ್ಲಿ ಗ್ರಾಹಕರ ಬಗ್ಗೆ ಕುರಿತು ಮಾತನಾಡಿದರು.
ಗ್ರಾಹಕರಿಗೆ ಶಿಕ್ಷಣ ಸಾಲ, ವಾಹನ ಸಾಲ, ಮಾರ್ಟ್‌ಗೇಜ್‌ ಸಾಲ, ಸಾಲ, ಕೃಷಿ ಸಾಲ, ಒಡಿ ಸಾಲ, ಚಿನ್ನದ ಸಾಲ, ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ಮಂಜೂರಾತಿ ಪತ್ರವನ್ನು ಸ್ಥಳದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹನಗವಾಡಿ ಶಾಖೆಯ ಮ್ಯಾನೇಜರ್‌ ಕುಶಾಲ್‌, ಹರಿಹರದ ಡಿಎಸ್‌ಎ ಆರ್‌.ಎಂ. ಅಲಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *