ದಾವಣಗೆರೆ ಸೆ.16
        2020-21 ನೇ ಸಾಲಿನಲ್ಲಿ ನಾವಿನ್ಯತೆ, ತಾರ್ಕಿಕ ಸಾಧನೆಗಳು,
ಕ್ರೀಡೆ, ಕಲೆ, ಸಾಂಸ್ಕøತಿಕ ಹಾಗೂ ಸಂಗೀತ ಕ್ಷೇತ್ರದಲ್ಲಿ
ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ
ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, 05-18
ವರ್ಷದೊಳಗಿನ ಮಕ್ಕಳನ್ನು ಈ ಪ್ರಶಸ್ತಿಗೆ ಆಯ್ಕೆ

ಮಾಡಲಾಗುವುದು. .1.12.2002ರ ಹಾಗೂ ನಂತರ ಹುಟ್ಟಿದ
ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಹಾಗೂ ಪ್ರತಿ
ಕ್ಷೇತ್ರಕ್ಕೆ ಇಬ್ಬರಂತೆ ಒಟ್ಟು 8 ಮಕ್ಕಳನ್ನು ಆಯ್ಕೆ ಮಾಡಿ
ರೂ.10 ಸಾವಿರ ಹಾಗೂ ಪ್ರಶಸ್ತಿ ಪತ್ರವನ್ನು
ನೀಡಲಾಗುವುದು.
ಆಯ್ಕೆಯಾಗುವಂತವರು ಅಪ್ರತಿಮ ಪ್ರತಿಭೆ
ಉಳ್ಳವರಾಗಿದ್ದು,ಅವರು ಸಾಧಿಸಿದ ಪ್ರತಿಭೆಯ ಬಗ್ಗೆ ವ್ಥತ್ತ
ಪತ್ರಿಕೆಗಳಲ್ಲಿ ವರದಿಯಾಗಿರಬೇಕು ಹಾಗೂ ಸಂಬಂಧಪಟ್ಟ
ಕ್ಷೇತ್ರದ ತಜ್ಞರಿಂದ ಪ್ರಮಾಣಿಕರಿಸಿರಬೇಕು ಹಾಗೂ
ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ
ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
ಅರ್ಜಿ ನಮೂನೆಯನ್ನು ಉಪ ನಿರ್ದೇಶಕರು ,
ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ
ಪಡೆದು ಅ.10 ರೊಳಗೆ ಉಪನಿರ್ದೇಶಕರು ಮಹಿಳಾ ಮತ್ತು
ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ಕಚೇರಿ ಸರ್ಕಾರಿಬಾಲಕರ
ಬಾಲಮಂದಿರ ಕಟ್ಟಡ, ಎಂ.ಸಿ.ಸಿ ಬಿ ಬ್ಲಾಕ್ ಕುವೆಂಪು ನಗರ
ದಾವಣಗೆರೆ ಇವರಿಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ
ದೂರವಾಣಿ ಸಂಖ್ಯೆ: 08192-264056 ಸಂರ್ಪಕಿಸಬಹುದೆಂದು
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *