ದಾವಣಗೆರೆ ಸೆ.18
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ರಾಜ್ಯದ
ಬೆಂಗಳೂರು, ಮೈಸೂರು, ಮಡಿಕೇರಿ, ಮೂಡಬಿದ್ರೆ, ಶಿವಮೊಗ್ಗ,
ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಈ ಸ್ಥಳಗಳಲ್ಲಿ ಕರ್ನಾಟಕ
ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ
ಸಂಸ್ಥೆಗಳನ್ನು ನಡೆಸುತ್ತಿದೆ. ಈ ತರಬೇತಿ ಸಂಸ್ಥೆಗಳ ಮೂಲಕ
ಸಹಕಾರ ಸಂಘ ಸಂಸ್ಥೆ/ ಸಹಕಾರ ಇಲಾಖೆ / ಸಹಕಾರ
ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ
ಸಿಬ್ಬಂದಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ 6 ತಿಂಗಳು /180 ದಿನಗಳ
ಅವಧಿಯ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್
ತರಬೇತಿಯನ್ನು 2020 ರ ಸೆಪ್ಟೆಂಬರ್ ಮಾಹೆಯಲ್ಲಿ
ಪ್ರಾರಂಭಿಸಲಾಗುತ್ತಿದ್ದು ಈ ತರಬೇತಿಯನ್ನು ಪಡೆಯಲಿಚ್ಚಿಸುವ
ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿಯನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಸಹಕಾರ
ಸಂಘ / ಸಹಕಾರ ಇಲಾಖೆ / ಸಹಕಾರ ಲೆಕ್ಕಪರಿಶೋಧನಾ
ಇಲಾಖೆಯಲ್ಲಿ ವೇತನ ಪಡೆಯುವ ನೌಕರರಾಗಿರಬೇಕು. ಖಾಸಗಿ
ಅಭ್ಯರ್ಥಿಗಳಿಗೆ ನಿಯಮಿತವಾಗಿ ಅವಕಾಶವನ್ನು ಕಲ್ಪಿಸಲಾಗಿದೆ. 16 ವರ್ಷ
ವಯೋಮಾನದ ಮೇಲ್ಪಟ್ಟಿರಬೇಕು. ಪ.ಜಾತಿ/ ಪ.ಪಂ
ಅಭ್ಯರ್ಥಿಗಳಿಗೆ ಶೇ.18 ರಷ್ಟು ಸ್ಥಾನಗಳನ್ನು ತರಬೇತಿಗಾಗಿ
ಮೀಸಲಿರಿಸಲಾಗಿರುತ್ತದೆ. ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ
ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಹಕಾರ ಸಂಘ
ಸಂಸ್ಥೆಗಳಲ್ಲಿ ಕನಿಷ್ಠ ಒಂದು ವರ್ಷ ಕಾಲವಾದರೂ ಸೇವೆ
ಸಲ್ಲಿಸುತ್ತಿರುವವರಾಗಿರಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ
ಅನುತ್ತೀರ್ಣರಾಗಿ, ಸಹಕಾರ ಸಂಘಗಳಲ್ಲಿ ಒಂದು ವರ್ಷಕ್ಕಿಂತ
ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಸಹ ತರಬೇತಿ
ಪಡೆಯಲು ಅರ್ಹರಾಗಿರುತ್ತಾರೆ. ಈ ತರಬೇತಿಯಲ್ಲಿ ಸಂಘ /
ಸಂಸ್ಥೆಯಿಂದ ಬರುವ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 400/- ಗಳ
ಶಿಷ್ಯವೇತನವನ್ನು ನೀಡಲಾಗುವುದು.
ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ
ಅಭ್ಯರ್ಥಿಗಳಿಗೆ 6 ತಿಂಗಳು /180 ದಿನಗಳ ವಿಶೇಷ “ಡಿಪ್ಲೊಮಾ ಇನ್
ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್” ತರಬೇತಿಯನ್ನು ಸಹ
ನೀಡಲಾಗುವುದು. ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಪಟ್ಟಿಯನ್ನು
ಆಯಾ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯಿಂದ
ತರಿಸಿಕೊಳ್ಳಲಾಗುವುದು ಮತ್ತು ಈ ವರ್ಗದ ಅಭ್ಯರ್ಥಿಗಳು ಆಯಾ

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರವರ ಮೂಲಕ ಅಥವಾ
ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಸಹಕಾರ ಕೇಂದ್ರ
ಬ್ಯಾಂಕ್ ಇವರ ಮೂಲಕ ಅರ್ಜಿಗಳನ್ನು 2020 ರ ಸೆಪ್ಟೆಂಬರ್
ಮಾಹೆರೊಳಗಾಗಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ
ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 16 ರಿಂದ 30
ವರ್ಷ ವಯೋಮಾನದವಾರಾಗಿರಬೇಕು. ಈ ಅಭ್ಯರ್ಥಿಗಳಿಗೆ
ಮಾಹೆಯಾನ ರೂ. 500/- ಶಿಷ್ಯವೇತನವನ್ನು ನೀಡಲಾಗುವುದು.
ತರಬೇತಿ ಅಧಿವೇಶನವು 2020 ರ ಸೆಪ್ಟೆಂಬರ್ ಮಾಹೆಯಲ್ಲಿ
ಪ್ರಾರಂಭವಾಗಲಿರುತ್ತದೆ. ಡಿ.ಸಿ.ಎಂ ತರಬೇತಿಯ ಅರ್ಜಿ ಫಾರಂ
ಮತ್ತು ವಿವರಣಾ ಪುಸ್ತಕವನ್ನು ದಾವಣಗೆರೆ ಜಿಲ್ಲಾ ಸಹಕಾರ
ಯೂನಿಯನ್ ನಿಯಮಿತ., ಜನತಾ ಬಜಾರ್ ಆವರಣ, ದಾವಣಗೆರೆ ಈ
ಸಂಸ್ಥೆಯಿಂದ ಪಡೆಯಬಹುದು. ಅರ್ಜಿ ಮತ್ತು ವಿವರಣಾ ಪುಸ್ತಕದ
ಶುಲ್ಕ ರೂ. 100/- ಗಳನ್ನು ನಗದಾಗಿ ಪಾವತಿಸಿ ತರಬೇತಿ ಸಂಸ್ಥೆಯಲ್ಲಿ
ಪಡೆಯಬಹುದು. ಅಂಚೆ ಮೂಲಕ ಪಡೆಯಲು ಇಚ್ಚಿಸುವವರು ರೂ.
125/- ಗಳ ಡಿ.ಡಿ. ಮೂಲಕ ಪಾವತಿಸಿ ಪಡೆಯಬಹುದಾಗಿದೆ. 2020 ರ
ಸೆಪ್ಟೆಂಬರ್ ರೊಳಗಾಗಿ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ
ಆಯಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸಬೇಕೆಂದು
ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *