ದಾವಣಗೆರೆ ಸೆ.18
ರೈತರನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯಿಂದ
ರೈತರೇ ತಮ್ಮ ಬೆಳೆಯ ಸಮೀಕ್ಷಾ ವರದಿಯನ್ನು ದಾಖಲಿಸಲು
2020-21ನೇ ಸಾಲಿನ ಬೆಳೆ ಸಮೀಕ್ಷೆ ಆ್ಯಪ್‍ನ್ನು ಬಿಡುಗಡೆ
ಮಾಡಲಾಗಿತ್ತು. ಅದರ ಮೂಲಕ ರೈತರು, ಖಾಸಗಿ ನಿವಾಸಿಗಳು ಬೆಳೆ
ಸಮೀಕ್ಷೆಯನ್ನು ಕೈಗೊಳ್ಳುತ್ತಿದ್ದಾರೆ. ಬೆಳೆ ಸಮೀಕ್ಷೆ
ಪೂರ್ಣಗೊಳಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿರುತ್ತದೆ.
ಸೆ.15 ರಂದು ಬೆಳೆ ದರ್ಶಕ್ ಆ್ಯಪ್‍ನ್ನು ಬಿಡುಗಡೆಗೊಳಿಸಲಾಗಿದ್ದು,
ರೈತರು 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಮ್ಮ
ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ರೈತರು
ಮತ್ತು ಖಾಸಗಿ ನಿವಾಸಿಗಳು ಅಪ್ ಲೋಡ್ ಮಾಡಿರುವ ಮಾಹಿತಿಯನ್ನು
ರೈತರು ಸ್ವತಃ ಆ್ಯಪ್‍ನಲ್ಲಿ ವೀಕ್ಷಿಸಬಹುದಾಗಿದೆ.
ಬೆಳೆ ದರ್ಶಕ್ ಆ್ಯಪ್‍ನ ವೈಶಿಷ್ಟಗಳು : ನಿಮ್ಮ ಜಮೀನಿನಲ್ಲಿ ಬೆಳೆ
ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು
ವಿಸ್ತೀರ್ಣದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ ಸಮಯದಲ್ಲಿ
ನಿಮ್ಮ ಜಮೀನಿನಲ್ಲಿ ತೆಗೆಯಲಾದ ಜಿ.ಪಿ.ಎಸ್.ಆಧಾರಿತ ಛಾಯಾ
ಚಿತ್ರಗಳನ್ನು ವೀಕ್ಷಿಸಬಹುದು. ನಿಮ್ಮ ಜಮೀನಿನ ಬೆಳೆ ಸಮೀಕ್ಷೆ
ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ
ಪಡೆಯಬಹುದು.
ನೀವು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು
ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಅಂಗೀಕರಿಸಿದ್ದಾರೋ, ಇಲ್ಲವೋ
ಎಂದು ಷರಾ ಕಾಲಂನಲ್ಲಿ ತಿಳಿಯಬಹುದು. ಬೆಳೆ ಸಮೀಕ್ಷೆ ವಿವರ
ತಪ್ಪಾಗಿ ದಾಖಲಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ಮೇಲ್ವಿಚಾರಣೆ
ಮಾಡುವ ಅಧಿಕಾರಿಗಳು ನಿಮ್ಮ ಆಕ್ಷೇಪಣೆ ಕುರಿತು ಏನು ಕ್ರಮ
ಕೈಗೊಂಡಿದ್ದಾರೆ ಎಂದು ತಿಳಿಯಬಹುದು.
ಈ ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆನಷ್ಟ ಪರಿಹಾರ,
ಬೆಂಬಲ ಬೆಲೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ
ಬಳಸಲಾಗುತ್ತದೆ. ಬೆಳೆ ಸಮೀಕ್ಷೆ ಕುರಿತಾದ ನಿಮ್ಮ
ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ 15 ಅಂತಿಮ ದಿನ
ಆಗಿರುತ್ತದೆ. ರೈತಬಾಂಧವರಿಗೆ ಇದು ಒಂದು ಸದವಕಾಶವಾಗಿದ್ದು,
ಬೆಳೆ ದರ್ಶಕ್ 2020-21 ಆ್ಯಪ್‍ನ್ನು ಬಳಸಿಕೊಳ್ಳಬಹುದಾಗಿದೆ. ಆ್ಯಪ್‍ನ್ನು
ಡೌನ್‍ಲೋಡ್ ಮಾಡಿಕೊಳ್ಳಲು. ಗೂಗಲ್ ಪ್ಲೇ ಸ್ಟೋರ್‍ನಲ್ಲಿ
ದೊರೆಯುವ ಬೆಳೆ ದರ್ಶಕ್ ಕರ್ನಾಟಕ ಆ್ಯಪ್ 2020-21 ಡೌನ್ ಲೋಡ್
ಮಾಡಿಕೊಳ್ಳಬಹುದು. ಹಾಗೂ ಈ ಕೆಳಗಿನ ಲಿಂಕ್ ಬಳಸಿ ಡೌನ್ ಲೋಡ್
ಮಾಡಿಕೊಳ್ಳಬಹುದು. hಣಣಠಿs://ಠಿಟಚಿಥಿ.googಟe.ಛಿom/sಣoಡಿe/ಚಿಠಿಠಿs/ಜeಣಚಿiಟs?iಜ=ಛಿom.ಛಿಡಿo
ಠಿ.oಜಿಜಿಛಿsಡಿeoಡಿಣsಞhಚಿಡಿiಜಿ
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ /
ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕಂದಾಯ ಇಲಾಖೆ,
ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಅಧಿಕಾರಿಗಳನ್ನು
ಸಂಪರ್ಕಿಸಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ
ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.