ದಾವಣಗೆರೆ ಸೆ.19
ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಿ, ಕೃಷಿ
ಚಟುವಟಿಕೆಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸಿ ಸಕಾಲದಲ್ಲಿ
ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಕೃಷಿಯಲ್ಲಿ
ಯಾಂತ್ರೀಕರಣವನ್ನು ಅಳವಡಿಸಿಕೊಳ್ಳಲು ರೈತರನ್ನು
ಪ್ರೊತ್ಸಾಹಿಸಲು “ಕೃಷಿ ಯಾಂತ್ರೀಕರಣ ಯೋಜನೆಯಡಿ” ಕೃಷಿ
ಯಂತ್ರೋಪಕರಣಗಳಿಗೆ ಸಹಾಯಧನ ನೀಡಲು ಸಾಮಾನ್ಯ
ವರ್ಗದವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಸಾಮಾನ್ಯ ವರ್ಗದ ರೈತರಿಗೆ ಮಾತ್ರ ಸಹಾಯಧನ
ಲಭ್ಯವಿದ್ದು, ಉಳುಮೆಯಿಂದ ಕೊಯ್ಲುವರೆಗೆ
ಉಪಯುಕ್ತವಿರುವ ವಿವಿಧ ಮಾದರಿ ಭೂಮಿ ಸಿದ್ದತೆ, ಬಿತ್ತನೆ
ಉಪಕರಣಗಳು, ಅಂತರ ಬೇಸಾಯ ಉಪಕರಣಗಳು,
ರೋಟೋವೇಟರ್‍ಗಳು ಎಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಬೆಳೆ
ಕಟಾವು, ಒಕ್ಕರಣೆ ಯಂತ್ರಗಳು, ತ್ಯಾಜ್ಯ ವಸ್ತುಗಳ ನಿರ್ವಹಣಾ
ಉಪಕರಣಗಳು ಲಭ್ಯವಿದ್ದು, ರೈತರು ಪಹಣಿ, ಆಧಾರ್‍ಕಾರ್ಡ್,
ಫೋಟೋ, ಟ್ರಾಕ್ಟರ್ ಆರ್.ಸಿ. ಬುಕ್, ಬ್ಯಾಂಕ್‍ಪಾಸ್ ಬುಕ್‍ಗಳ
ಪ್ರತಿಗಳನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ನೀಡಿ
ಸೌಲಭ್ಯ ಪಡೆಯಬಹುದೆಂದು ಸಹಾಯಕ ಕೃಷಿ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *