ದಾವಣಗೆರೆ ಸೆ.21
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2020-21ನೇ ಸಾಲಿಗೆ ಮೈಸೂರಿನ ಅಂಧs ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಅಂಧ ಮಕ್ಕಳ ವಿಶೇಷ ಶಿಕ್ಷಣದ D.Ed. Spl. Edu (VI) ಹಾಗೂ ಶ್ರವಣದೋಷವುಳ್ಳ ಮಕ್ಕಳ ವಿಶೇಷ ಶಿಕ್ಷಣದ D.Ed.SE (HI)ತರಬೇತಿ ನಡೆಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ತರಬೇತಿಗಳಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಶೇ.50 ರಷ್ಟು ಅಂಕಗಳೊಂದಿಗೆ 10+2 (ಪಿ.ಯು.ಸಿ) ವಿದ್ಯಾರ್ಹತೆಯನ್ನು ಹೊಂದಿರಬೇಕು. ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ ತೆಗೆದುಕೂಂಡ ಅಭ್ಯರ್ಥಿಗಳು ಸಹ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಸಾಮಾನ್ಯ ಅಭ್ಯರ್ಥಿಗಳೂ ಸಹ ತರಬೇತಿ ಪಡೆಯಬಹುದಾಗಿದೆ.
ಈ ತರಬೇತಿಗೆ ಸಂಬಂಧಿಸಿದ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ವೆಬ್‍ಸೈಟ್ https://rciamas.nic.in/AIOAT2020/indexadm2020.htmlನಲ್ಲಿ ಪ್ರಕಟಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್ ತಾಣದಲ್ಲಿ ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಪಡೆಯಬಹುದಾಗಿದೆ.
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ. ಹೆಚ್ಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ಪುಲಿಕೇಶಿ ರಸ್ತೆ, ತಿಲಕನಗರ, ಮೈಸೂರು. ದೂ.ಸಂ 08212-491600 ಹಾಗೂ ಇ-ಮೇಲ್ ವಿಳಾಸ: hkhelenkeller91@gmail.com, gttchh.mys@gmail.com ಸಂಪರ್ಕಿಸಬಹುದೆಂದುಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.