ದಾವಣಗೆರೆ ಸೆ.21
2020-21ನೇ ಸಾಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹರಿಹರ ಇಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವಿನ ಯೋಜನೆಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಮೂಲಕ ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದ್ದು, ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೋಮ, ಬಿ.ಇ ಪಾಸ್ ಆಗಿರುವ 16 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು 4 ತಿಂಗಳ ಮತ್ತು 12 ತಿಂಗಳ ಈ ಕೆಳಕಂಡ ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ ನಡೆಸಲಾಗುವುದು. ತರಬೇತಿ ಅವಧಿಗೆ ಶಿಷ್ಯವೇತನ ನೀಡಲಾಗುವುದು.
ತರಬೇತಿಗಳಾದ ಸಿಎನ್‍ಸಿ ಪ್ರೊಗ್ರಾಮರ್, ಕನ್ವೆನ್ಷನಲ್ ಟರ್ನಿಂಗ್ ಮಷೀನ್ ಆಪರೇಟರ್, ಕನ್ವೆನ್ಷನಲ್ ಮಿಲ್ಲಿಂಗ್ ಮಷೀನ್ ಆಪರೇಟರ್, ಕನ್ವೆನ್ಷನಲ್ ಸರ್ಫೇಸ್ ಗ್ರೈಡಿಂಗ್ ಆಪರೇಟರ್, ಡಿಸೈನರ್-ಮೆಕ್ಯಾನಿಕಲ್, ಪ್ರೊಡಕ್ಷನ್ ಇಂಜಿನಿಯರ್ ಹಾಗೂ 12 ತಿಂಗಳ ತರಬೇತಿ ಟೂಲ್ ರೂಂ ಮಷಿನಿಸ್ಟ್.
ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ಅರ್ಜಿಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಜಿ.ಟಿ.ಟಿ.ಸಿ 22 ಸಿ & ಡಿ , ಕೆ.ಐ.ಎ.ಡಿ.ಬಿ, ಇಂಡಸ್ಟ್ರಿಯಲ್ ಏರಿಯಾ ಹರ್ಲಾಪುರ, ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಹರಿಹರ, ದೂರವಾಣಿ ಸಂಖ್ಯೆ: 08192-243937, 719600676, 8711913947, 8884488202 ಸಂರ್ಪಕಿಸಬಹುದೆಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *