ದಾವಣಗೆರೆ ಸೆ.21
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ದಾವಣಗೆರೆ ಇವರಿಗೆ ಸರ್ಕಾರಿ ಆದೇಶದ ಪ್ರಕಾರ ನಿಗದಿತ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಮಾಸಿಕ ಬಾಡಿಗೆ ಆಧಾರದ ಮೇಲೆ ಹಳದಿ ಬೋರ್ಡ್ ಪರವಾನಗಿ ಮತ್ತು ಅಗತ್ಯವಿರುವ ಎಲ್ಲ ಸೂಕ್ತ ದಾಖಲಾತಿಗಳನ್ನು ಹೊಂದಿರುವ ಒಂದು ವಾಹನದ ಸೇವೆಯನ್ನು ಒಂದು ವರ್ಷದ ಅವಧಿಗೆ ಒದಗಿಸಲು ವಾಹನದ ದರ ಪಟ್ಟಿಯನ್ನು ಕರೆಯಲಾಗಿದೆ.
ಆಸಕ್ತಿಯುಳ್ಳ ಪ್ರವಾಸಿ ಏಜೆಂಟರು ವಾಹನ ಮಾಲೀಕರು ಈ ಕಚೇರಿಯಿಂದ ಟೆಂಡರ್ ಫಾರಂಗಳನ್ನು ಸೆ.18 ರಿಂದ ಸೆ.25 ರೊಳಗೆ ಪಡೆದು, ಸೆ.28 ರಂದು ಅಪರಾಹ್ನ 4 ಗಂಟೆಯೊಳಗಾಗಿ ಭರ್ತಿ ಮಾಡಿದ ಟೆಂಡರ್ ಫಾರಂ ಮತ್ತು ವಾಹನದ ಸೂಕ್ತ ದಾಖಲಾತಿಗಳಿರುವ ಮೊಹರು ಮಾಡಿದ ಲಕೋಟೆಗಳನ್ನು ಈ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಮೊದಲನೆಯ ಮಹಡಿ, ಕೊಠಡಿ ಸಂಖ್ಯೆ-36, ಹರಿಹರ ರಸ್ತೆ, ದಾವಣಗೆರೆ ದೂ.ಸಂ: 08192-236488 ಸಂಪರ್ಕಿಸಬಹುದು. ಸೂಕ್ತ ದಾಖಲಾತಿಗಳಿಲ್ಲದ ಟೆಂಡರ್ ಫಾರಂಗಳನ್ನು ಟೆಂಡರ್ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲವೆಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವೈ.ಎಂ.ರಾಜೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.