ದಾವಣಗೆರೆ ಸೆ.22
ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯು ಸೆಪ್ಟೆಂಬರ್ 27
ರ ಭಾನುವಾರದಂದು ದಾವಣಗೆರೆ ನಗರದ 11 ಉಪ ಕೇಂದ್ರಗಳಲ್ಲಿ
ನಡೆಯಲಿದೆ.
ಈಗಾಗಲೇ ಕೆ-ಸೆಟ್ ಅಂತರ್ಜಾಲದಲ್ಲಿ ಅಭ್ಯರ್ಥಿಗಳ
ಸೂಚನೆಗಳನ್ನು ಮತ್ತು ಅಭ್ಯರ್ಥಿಗಳ ಪರೀಕ್ಷಾ
ಕೇಂದ್ರವನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ
ಪತ್ರವನ್ನು ಕೆ-ಸೆಟ್ ಅಂತರ್ಜಾಲ hಣಣಠಿ://ಞseಣ.uಟಿi-mಥಿsoಡಿe.ಚಿಛಿ.iಟಿ ಇಲ್ಲಿ
ಡೌನ್ಲೋಡ್ ಮಾಡಿಕೊಳ್ಳಬಹುದು. ಭಾವಚಿತ್ರವಿರುವ ಮೂಲ
ಗುರುತಿನ ಚೀಟಿ ()ಯನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು
ಹೋಗತಕ್ಕದ್ದು. ಯಾವುದೇ ಸಂದರ್ಭದಲ್ಲಿ ಅಭ್ಯರ್ಥಿಯು
ಪ್ರವೇಶ ಪತ್ರವಿಲ್ಲದೆ ಬಂದರೆ ಅಂತಹ ಅಭ್ಯರ್ಥಿಗಳಿಗೆ ಪರೀಕ್ಷಾ
ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.
ಪರೀಕ್ಷಾ ಉಪ ಕೇಂದ್ರಗಳ ವಿವರ: ಎಸ್.ಬಿ.ಸಿ ಫಸ್ಟ್ ಗ್ರೇಡ್ ಕಾಲೇಜ್
ಫಾರ್ ವುಮೆನ್ (ಅಥಣಿ ಕಾಲೇಜು), ಬಿ.ಎಸ್.ಚನ್ನಬಸಪ್ಪ ಫಸ್ಟ್ ಗ್ರೇಡ್
ಕಾಲೇಜ್, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ(ಬಿಐeಟಿ),
ಬಾಪೂಜಿ ಪಾಲಿಟೆಕ್ನಿಕ್ ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ
ಕಾಲೇಜ್(ಜಿ.ಎಫ್.ಜಿ.ಸಿ), ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು,
ಎ.ವಿ.ಕಮಲಮ್ಮ ಕಾಲೇಜ್ ಫಾರ್ ವುಮೆನ್, ಎಂ.ಎಸ್.ಬಿ ಕಲಾ ಮತ್ತು
ವಾಣಿಜ್ಯ ಕಾಲೇಜು, ಜಿ.ಎಂ.ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಿ.ಎಂ.ಎಸ್ ಅಕಾಡೆಮಿ
ಪ್ರಥಮ ದರ್ಜೆ ಕಾಲೇಜು, ದವನ್-ನೂತನ್ ಅಲೆಯನ್ಸ್ (ಡಿಎನ್ಎ),
ನೂತನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್.
ಹೆಚ್ಚಿನ ಮಾಹಿತಿಗಾಗಿ hಣಣಠಿ://ಞseಣ.uಟಿi-mಥಿsoಡಿe.ಚಿಛಿ.iಟಿ ssಸಂಪರ್ಕಿಸಬಹುದು.
ಅಭ್ಯರ್ಥಿಗಳು ಪರೀಕ್ಷೆಯ ದಿನದಂದು ಪ್ರವೇಶ ಪತ್ರದೊಂದಿಗೆ
ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 8 ರೊಳಗೆ ಹಾಜರಾಗಬೇಕು. ಸಾಮಾಜಿಕ
ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು
ಕಡ್ಡಾಯವಾಗಿದ್ದು ಪ್ರತ್ಯೇಕ ನೀರಿನ ಬಾಟಲ್ ತರತಕ್ಕದ್ದು.
ಮೊಬೈಲ್ ಮತ್ತು ಇನ್ನಿತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್
ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು
ನಿಷೇಧಿಸಲಾಗಿದೆ ಎಂದು ದಾವಣಗೆರೆ ವಿವಿ ಯ ಕೆ-ಸೆಟ್ ನೋಡಲ್ ಅಧಿಕಾರಿ
ಪ್ರೊ.ಜೆ.ಕೆ.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.