ದಾವಣಗೆರೆ ಸೆ.23
2020-21 ನೇ ಸಾಲಿಗೆ ಐ.ಎ.ಎಸ್. ಪರೀಕ್ಷೆ ಬರೆಯುವ ಬ್ರಾಹ್ಮಣ
ಅಭ್ಯರ್ಥಿಗಳಿಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ
ವತಿಯಿಂದ ಉಚಿತ ಆನ್‍ಲೈನ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು,
ಜಿಲ್ಲೆಯ ಬ್ರಾಹ್ಮಣ ಯುವ ಸಮೂಹವು ಇದರ ಸದುಪಯೋಗ
ಪಡೆದುಕೊಳ್ಳುವಂತೆ ಕೋರಲಾಗಿದೆ.
ಮಂಡಳಿಯ ವತಿಯಿಂದ ಈಗಾಗಲೇ ಅನೇಕ ಯೋಜನೆಗಳನ್ನು
ಕೈಗೊಳ್ಳಲಾಗಿದೆ. ಇದೀಗ ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿ
ಯು.ಪಿ.ಎಸ್.ಸಿ. ನಡೆಸುವ 2021 ನೇ ಸಾಲಿನ ನಾಗರೀಕ ಸೇವೆಗಳ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇಚ್ಛಿಸುವ ರಾಜ್ಯದ
ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳಿಗಾಗಿ ರಾಷ್ಟ್ರದ ಪ್ರತಿಷ್ಠಿತ
ತರಬೇತಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಚಿತ ಆನ್‍ಲೈನ್
ತರಬೇತಿಯನ್ನು ನೀಡಲು ಮಂಡಳಿಯು ನಿರ್ಧರಿಸಿದೆ.
ಈ ಉಚಿತ ಆನ್‍ಲೈನ್ ತರಬೇತಿ ಪಡೆಯಲು ಇಚ್ಛಿಸುವ ಅರ್ಹ
ಅಭ್ಯರ್ಥಿಗಳು ಸೆ.30 ರೊಳಗಾಗಿ ವೆಬ್‍ಸೈಟ್-
ಛಿoಚಿಛಿh4iಚಿs.ಞsbಜb@ಞಚಿಡಿಟಿಚಿಣಚಿಞಚಿ.gov.iಟಿ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದ್ದು,
ಬ್ರಾಹ್ಮಣ ಯುವ ಸಮೂಹವು ಇದರ ಸದುಪಯೋಗ
ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ
ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಹಾಗೂ
ನಿರ್ದೇಶಕ ಪಿ.ಸಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.