ದಾವಣಗೆರೆ ಸೆ.23
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿಗೆ
“ಧನಶ್ರೀ” ಯೋಜನೆಯಡಿ ಹೆಚ್.ಐ.ವಿ. ಸೋಂಕಿತ ಮಹಿಳೆಯರು
ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು
ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ರೂ.25,000/- ಸಾಲ ಹಾಗು ರೂ.25,000/-
ಸಹಾಯಧನ ಸೇರಿ ಒಟ್ಟು ಘಟಕವೆಚ್ಚ ರೂ.50,000/-ಗಳನ್ನು
ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವವರ
ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು. ಅರ್ಜಿದಾರಳು
ಹೆಚ್.ಐ.ವಿ. ಸೋಂಕು ಇರುವ ಸಂಬಂಧ ಐ.ಸಿ.ಟಿ.ಸಿ/ಪಿ.ಪಿ.ಟಿ.ಸಿ.ಟಿ. ಕೇಂದ್ರಗಳಿಂದ
ಪಡೆದ ವೈದ್ಯಕೀಯ ದೃಢೀಕರಣ ಪತ್ರ ಸಲ್ಲಿಸುವುದು. ಸಾಲ
ಪಡೆಯಲು ಉದ್ದೇಶಿತ ಆದಾಯೋತ್ಪನ್ನ ಚಟುವಟಿಕೆಯ ಯೋಜನಾ
ವರದಿ ಸಲ್ಲಿಸುವುದು. ಅರ್ಜಿದಾರಳು ರಾಷ್ಟ್ರೀಕೃತ ಬ್ಯಾಂಕ್
ಖಾತೆಯನ್ನು ಹೊಂದಿದ್ದು, ಬ್ಯಾಂಕ್ ಖಾತೆಯೊಂದಿಗೆ ಅರ್ಜಿದಾರರ ಆಧಾರ್
ಸೀಡಿಂಗ್ ಆಗಿರಬೇಕು. ಖಾತೆ ಪುಸ್ತಕದ ನಕಲು ಪ್ರತಿ, ಬ್ಯಾಂಕಿನ
ಹೆಸರು, ಐ.ಎಫ್.ಎಸ್.ಸಿ. ಕೋಡ್ ಹಾಗು ಆಧಾರ್ ಕಾರ್ಡ್‍ನ ದಾಖಲೆ
ಸಲ್ಲಿಸುವುದು.
ಅರ್ಜಿದಾರಳು ಯಾವುದೇ ಬ್ಯಾಂಕ್/ ಆರ್ಥಿಕ ಸಂಸ್ಥೆಗಳಲ್ಲಿ
ಸುಸ್ತಿದಾರರಾಗಿರಬಾರದು ಎನ್ನುವುದು ಕಡ್ಡಾಯವಾಗಿರುತ್ತದೆ.
ಅರ್ಜಿದಾರಳು ಖಾತೆ ಹೊಂದಿರುವ ಬ್ಯಾಂಕ್‍ನಲ್ಲಿ ಸಾಲ ಪಡೆದಿಲ್ಲ ಎಂಬ ಬಗ್ಗೆ
ದೃಢೀಕರಣ ಪತ್ರ ಸಲ್ಲಿಸುವುದು. ಬಿ.ಪಿ.ಎಲ್. ಪಡಿತರ ಚೀಟಿ
ಹೊಂದಿರಬೇಕು. ಅರ್ಜಿದಾರಳು ಕರ್ನಾಟಕ ರಾಜ್ಯದ ಖಾಯಂ
ನಿವಾಸಿಗಳಾಗಿರಬೇಕು. ಕುಟುಂಬದಲ್ಲಿ ಹೆಚ್.ಐ.ವಿ. ಸೋಂಕಿತ ಒಬ್ಬ ಮಹಿಳೆಗೆ
ಮಾತ್ರ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ನಿಗದಿತ ಅರ್ಜಿಗಳನ್ನು ಸಂಜೀವಿನಿ ನೆಟ್‍ವರ್ಕ್ ದಾವಣಗೆರೆ, 3ನೇ
ಮುಖ್ಯ ರಸ್ತೆ, 2ನೇ ಕ್ರಾಸ್, ಎಂ.ಸಿ.ಸಿ. ‘ಬಿ’ ಬ್ಲಾಕ್, ದಾವಣಗೆರೆ ಇವರಿಂದ
ಪಡೆದು ಎಲ್ಲಾ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು
ಅಕ್ಟೋಬರ್ 08 ರೊಳಗೆ ಸಂಸ್ಥೆಯ ಕಚೇರಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕರ ಸರ್ಕಾರಿ ಬಾಲಮಂದಿರ ಕಟ್ಟಡದ
ಹಿಂಭಾಗ, ಕುವೆಂಪುನಗರ, ಎಂ.ಸಿ.ಸಿ. ಬಿ. ಬ್ಲಾಕ್, ದಾವಣಗೆರೆ, ದೂರವಾಣಿ
ಸಂಖ್ಯೆ: ದೂರವಾಣಿ: 08192-296268 ನ್ನು ಸಂಪರ್ಕಿಸಬಹುದೆಂದು
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ
ಕೆ.ಹೆಚ್.ವಿಜಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.