ಶಿವಮೊಗ್ಗ ಜಿಲ್ಲೆ:- ದಿನಾಂಕ 22.09.2020 ರಂದು ಬೆಳಿಗ್ಗೆ 09.00 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಣ್ಣೂರು ಗ್ರಾಮದ ಸರ್ವೇ ನಂಬರ್ 26 ರ ಸರ್ಕಾರಿ ಜಮೀನಿನ ಬಗರ್ ಹುಕ್ಕುಂ ಸಾಗುವಳಿ ಭೂಮಿಯ ಶುಂಠಿ ಮತ್ತು ಅದರ ಸುತ್ತಮುತ್ತಲಿನ ಸ್ಥಳದಲ್ಲಿ ಅಕ್ರಮವಾಗಿ ಕಣ್ಣೂರು ಗ್ರಾಮದ ಗಂಗಾಧರಪ್ಪ ಬಿನ್ ಈಶ್ವರಪ್ಪ, ಪರಶುರಾಮಪ್ಪ ಬಿನ್ ಈಶ್ವರಪ್ಪ ಹಾಗೂ ಹುಚ್ಚರಾಯಪ್ಪ ಬಿನ್ ಈಶ್ವರಪ್ಪ ಅವರು ನಾಲ್ಕರಿಂದ ಆರು ಅಡಿ ಎತ್ತರವಿರುವ ಹೂವು ಕಾಯಿಗಳಿಂದ ಕೂಡಿದ್ದ ಫಲಭರಿತ ಘಾಟು ವಾಸನೆಯುಳ್ಳ ಗಾಂಜಾ ಗಿಡಗಳನ್ನು ಬೆಳೆದಿದ್ದು ಇವುಗಳನ್ನು ಬೇರು ಸಮೇತ ಕಿತ್ತು ವಶಕ್ಕೆ ಪಡೆಯಲಾಗಿದೆ. ಇವುಗಳ ಅಂದಾಜು ಮೌಲ್ಯ 5,50,000/- ರೂಪಾಯಿಗಳಾಗಿರುತ್ತವೆ. ದಾಳಿ ಕಾರ್ಯವನ್ನು ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಕ್ಯಾಪ್ಟನ್ ಅಜಿತ್ ಕುಮಾರ್ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಅವರ ನೇತೃತ್ವದಲ್ಲಿ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಹನುಮಂತಪ್ಪ ಹಾಗೂ ಅಬಕಾರಿ ಉಪನಿರೀಕ್ಷಕ ಜಾನ್ ಪಿ ಜೆ ಮತ್ತು ಸೊರಬ ವಲಯದ ಅಬಕಾರಿ ನಿರೀಕ್ಷಕ ಅಣ್ಣಪ್ಪ ಮತ್ತು ಸಿಬ್ಬಂದಿಯವರಾದ ಚಂದ್ರಪ್ಪ, ರಾಜಮ್ಮ,ರವೀಂದ್ರ ಪಾಟೀಲ್, ಗುರುಮೂರ್ತಿ, ಮುದಾಸಿರ್ ಹಾಗೂ ಸೊರಬ ಸಾಗರ ಮತ್ತು ಶಿವಮೊಗ್ಗ ವಲಯಗಳ ಒಟ್ಟು 30 ಅಧಿಕಾರಿ ಹಾಗೂ ಸಿಬ್ಬಂದಿಗಳು ವಾಹನ ಚಾಲಕರು ಭಾಗವಹಿಸಿದ್ದರು. ಹನುಮಂತಪ್ಪ ಡಿಎನ್ ರವರು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿದ್ದು ಹಾಗೂ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಇಲಾಖೆಯ ಪ್ರಕಟಣೆ.

Leave a Reply

Your email address will not be published. Required fields are marked *