ದಾವಣಗೆರೆ ಸೆ.24
2020-21ನೇ ಸಾಲಿನಲ್ಲಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ
ನಾಗರಿಕರ ಸಬಲೀಕರಣ ಇಲಾಖೆಯಿಂದ ವಿದ್ಯಾರ್ಥಿವೇತನ, ಸಾಧನ
ಸಲಕರಣೆ, ಶುಲ್ಕ ಮರುಪಾವತಿ, ವಿವಾಹಿತ ಅಂಧ ಮಹಿಳೆಗೆ
ಜನಿಸುವ ಮಕ್ಕಳಿಗೆ ಶಿಶು ಪಾಲನಾಭತ್ಯೆ, ವಿವಾಹ ಪ್ರೋತ್ಸಾಹಧನ,
ನಿರಾಮಯ ಆರೋಗ್ಯ ವಿಮೆ ಯೋಜನೆಗಳಿಗೆ ಅರ್ಹ
ವಿಕಲಚೇತನರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.
ಯೋಜನೆಗಳಡಿ ಪ್ರಯೋಜನವನ್ನು ಪಡೆಯಲು
ವಿಕಲಚೇತನರು ಕಡ್ಡಾಯವಾಗಿ ರಾಷ್ಟ್ರೀಕೃತ
ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿ ಆಧಾರ ಕಾರ್ಡ್ ಲಿಂಕ್
ಮಾಡಿಸಿರುವ ಉಳಿತಾಯ ಖಾತೆ ಪುಸ್ತಕದ ಪ್ರತಿ ಹಾಗೂ
ಅಂಗವಿಕಲರ ಗುರುತಿನ ಕಾರ್ಡ್ ಜೆರಾಕ್ಸ್ (ಯು.ಡಿ.ಐ.ಡಿ. ಕಾಡ್),
ಇತ್ತೀಚಿನ ಜಾತಿ &ಚಿmಠಿ; ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ್ ಹಾಗೂ
ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ
ನಮೂನೆಗಳನ್ನು ಕಚೇರಿಯಿಂದ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ &ಚಿmಠಿ; ಮಾಹಿತಿ
ಸಲಹಾ ಕೇಂದ್ರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ
ಸಬಲೀಕರಣ ಅಧಿಕಾರಿಗಳ ಕಚೇರಿ, ಶಂಕರಲೀಲಾ ಗ್ಯಾಸ್ ಏಜೆನ್ಸಿ
ಹತ್ತಿರ, ಎಂ.ಸಿ.ಸಿ. ‘ಬಿ’ ಬ್ಲಾಕ್, ದಾವಣಗೆರೆ. ದೂ.ಸಂ 08192-263939 ನ್ನು
ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಮತ್ತು ಹಿರಿಯ
ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್.ಶಶಿಧರ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.