ದಾವಣಗೆರೆ. ಸೆ.25
ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ
ಆಡಳಿತ ನ್ಯಾಯಧೀಕರಣದಲ್ಲಿ ತರಬೇತಿ ಭತ್ಯೆ ನೀಡಲು ಅರ್ಜಿ
ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸುವ ಅವಧಿಯನ್ನು ಸೆ. 30 ರವರೆಗೆ
ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದುಳಿದ ವರ್ಗ ಪ್ರವರ್ಗ-1, 2(ಎ)
ಮತ್ತು 3ಬಿ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯವು
ರೂ 2.5 ಲಕ್ಷ ಮೀರರಿರರಬಾರದು. ಪ್ರವರ್ಗ-1 ಕ್ಕೆ ಸೇರಿದ
ಅಭ್ಯರ್ಥಿಗಳು ಗರಿಷ್ಟ ವಯೋಮಿತಿ ಅರ್ಜಿ ಸಲ್ಲಿಸುವ ಕೊನೆಯ
ದಿನಾಂಕಕ್ಕೆ 40 ವರ್ಷಗಳು, ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ 38
ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ನಿರುದ್ಯೋಗಿಗಳಾಗಿರಬೇಕು. ಯಾವುದೇ ಇಲಾಖೆಯಲ್ಲಿ ತರಬೇತಿ
ಭತ್ಯೆ ಪಡೆಯುತ್ತಿರಬಾರದು.
ತರಬೇತಿಯು ನಾಲ್ಕು ವರ್ಷಗಳ ಅವಧಿಯದ್ದಾಗಿದ್ದು ಮಾಸಿಕ
ದಿನಚರಿಯನ್ನಾಧರಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ (
ಪರಿಷ್ಕøತ ಆದೇಶದನ್ವಯ) ಶಿಷ್ಯ ವೇತನ ನೀಡಲಾಗುವುದು. ಅರ್ಜಿ
ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕಾನೂನು ಪದವಿ ಪರೀಕ್ಷೆಯಲ್ಲಿ
ತೆರ್ಗಡೆಯಾಗಿ 2 ವರ್ಷಗಳ ಅವಧಿಯೊಳಗಿರುವ ಅಭ್ಯರ್ಥಿಗಳು
ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ತರಬೇತಿಗೆ ಜಿಲ್ಲೆಯ ಹಿಂದುಳಿದ ವರ್ಗಗಳ 10
ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಗಳು ತಮ್ಮ ಹೆಸರನ್ನು ಜಿಲ್ಲೆಯ ಬಾರ್ ಕೌನ್ಸಿಲ್‍ನಲ್ಲಿ
ನೊಂದಾಯಿಸಿರಬೇಕು. ಅಗತ್ಯ ದಾಖಲಾತಿಗಳನ್ನು ಸೆ.3 ರೊಳಗೆ ಜಿಲ್ಲಾ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ 46, ಎರಡನೇ
ಮಹಡಿ, ಜಿಲ್ಲಾಡಳಿತ ಭವನ, ಕರೂರು ರಸ್ತೆ, ದಾವಣಗೆರೆ ಇಲ್ಲಿಗೆ
ಸಲ್ಲಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯನ್ನು
ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ
ಜಿಲ್ಲಾ ಅಧಿಕಾರಿ ಎಸ್.ಆರ್.ಗಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.