ದಾವಣಗೆರೆ ಸೆ. 25
ಆಶ್ರಯ ಯೋಜನೆಯಡಿ ಯಾವುದೇ ನಿವೇಶನ ಮತ್ತು
ಮನೆಗಳ ವಿತರಣೆಗೆ ಸಂಬಂಧಪಟ್ಟಂತೆ ಅರ್ಜಿಗಳನ್ನು
ವಿತರಿಸಿರುವುದಿಲ.್ಲ ನಗರದಲ್ಲಿ ಕೆಲವು ವ್ಯಕ್ತಿಗಳು ನಕಲಿ
ಅರ್ಜಿಗಳನ್ನು ಪಾಲಿಕೆಯ ಗಮನಕ್ಕೆ ತರದೇ ಸಾರ್ವಜನಿಕರಿಗೆ
ವಿತರಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ಹಣ ಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಜನರನ್ನು
ವಂಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆಶ್ರಯ ಯೋಜನೆಯಡಿ
ಯಾವುದೇ ನಿವೇಶನವನ್ನು ನೀಡುವುದಿದ್ದರೆ ಮುಂಚಿತವಾಗಿ
ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಮೇಯರ್
ಅಜಯ್ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.