ದಾವಣಗೆರೆ ಸೆ.26.

ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುತ್ತಿದ್ದ ಪ.ಜಾತಿ. ಪ.ಪಂಗಡದ ಕುಂದುಕೊರತೆ ಸಭೆಯನ್ನು ಉಪವಿಭಾಗ ಮಟ್ಟದಲ್ಲಿ ನಡೆಸಲಾಗುವುದು ಎಂದು ಎಸ್.ಪಿ ಹನುಮಂತರಾಯ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಇಂದು ಏರ್ಪಡಿಸಲಾಗಿದ್ದ ಸಭೆಯಲ್ಲಿ ವಿವಿಧ ತಾಲೂಕುಗಳು ಹಲವು ಮುಖಂಡರು ನಾವುಗಳು ತಾಲೂಕುಗಳಿಂದ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಬರುವುದು ಕಷ್ಟವಾಗುತ್ತದೆ ಹಾಗೂ ಅತಿಹೆಚ್ಚು ಜನ ಸೇರುವುದರಿಂದ ನಮ್ಮ ಸಮಸ್ಯೆಗಳು ಬಗ್ಗೆ ವಿಸೃತ್ತವಾಗಿ ಚರ್ಚಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಎಸ್.ಪಿಯವರು ಉಪವಿಭಾಗ ಮಟ್ಟದಲ್ಲಿ ಸಭೆ ನಡೆಸುವುದರಿಂದ ನಿಮ್ಮ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಹಾಗೂ 13 ಇ.ಆರ್.ಎಸ್‍ಎಸ್ ವಾಹನಗಳು ತೊಂದರೆಯಲ್ಲಿರುವವರಿಗೆ ತಕ್ಷಣ ಸ್ಪಂದನೆ ನೀಡಲಿದ್ದು ರಾಜ್ಯದಲ್ಲಿ ಈ ಯೋಜನೆಯನ್ನು 3 ಜಿಲ್ಲೆಗಳ ಪೈಲೆಟ್ ಯೋಜನೆಯಾಗಿ ಜಾರಿಗೆ ತರಲಾಗುತ್ತಿದೆ ಬಾಗಲಕೋಟೆ, ಹಾವೇರಿ, ಹಾಗೂ ದಾವಣಗೆರೆ ಜಿಲ್ಲೆಗಳು ಈ ಯೋಜನೆಯಲ್ಲಿ ಆಯ್ಕೆಯಾಗಿದ್ದು ಔಟ್ ಪೋಸ್ಟ್‍ಗಳ ಬೇಡಿಕೆಗೂ ಸ್ಪಂದನೆ ದೊರೆಯಲಿದೆ ಎಂದರು.

ಸಾರ್ವಜನಿಕರು ಹಾಗೂ ದಲಿತ ಮುಖಂಡರ ಸಹಭಾಗಿತ್ವದಲ್ಲಿ ಅನಧಿಕೃತ ಮದ್ಯದಂಗಡಿಗಳ ತೆರವಿಗೆ ನಾವು ಕ್ರಮ ವಹಿಸುತ್ತೇವೆ ಅಕ್ರಮ ಗೋ ಸಾಗಾಟದ ಬಗ್ಗೆ ನಮಗೆ ದೂರು ಬಂದಿತ್ತು ನಮ್ಮ ಸಿಬ್ಬಂದಿಗಳು ಎಸ್‍ಆರ್‍ವಿ ಕ್ಯಾಂಪ್‍ನಲ್ಲಿ ಕಾರ್ಯಚರಣೆ ನಡೆಸಿ 77 ಗೋವುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದರು.

ಪ್ರಾರಂಭದಲ್ಲಿ ಮಾತನಾಡಿದ ಸೋಮ್ಲಾಪುರದ ಹನುಮಂತಪ್ಪ , ಕೆಟಿಜೆ ನಗರದಲ್ಲಿ ಪ್ರತಿನಿತ್ಯ ಜನಜಂಗುಳಿಯಿಂದ ಕೂಡಿರುವ ಪ್ರದೇಶವಾಗಿದ್ದು ಇಲ್ಲಿ ಆನೇಕ ದೊಂಬಿ, ವ್ಯಾಜ್ಯಗಳು ನಡೆಯುತ್ತಿದೆ ಕೆಟಿಜೆ ನಗರದಲ್ಲಿ ಒಂದು ಪೊಲೀಸ್ ಉಪಠಾಣೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ದಲಿತ ಸಮಿತಿ ಅಧ್ಯಕ್ಷ ದುಗಪ್ಪ ಮಾತನಾಡಿ, ಅಂಬೇಡ್ಕರ್ ಭವನಕ್ಕೆ ಹಣ ಮಂಜೂರಾಗಿ 15 ವóರ್ಷವಾಯಿತು ನಾವು ಎಷ್ಟೇ ಮನವಿ ಮಾಡಿದರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಯಾರು ಅಧಿಕಾರಿಗಳು ಮುಂದಾಗುತ್ತಿಲ್ಲ.

ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಪ್ರತಿನಿತ್ಯ ವಿದ್ಯಾರ್ಥಿಗಳು ಓಡಾಡಲು ಪರದಾಡುತ್ತಿದ್ದಾರೆ ಅಲ್ಲಿಗೆ ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.

ಮಂಜಪ್ಪ ಕೆಂಚಿಕೋಪ್ಪ ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳು ಹೊನ್ನಾಳಿ ತಾಲೂಕಿನ ಯಾವ ಗ್ರಾಮಗಳಿಗು ಭೇಟಿ ನೀಡಿಲ್ಲ ಮತ್ತು ಅನಧಿಕೃತವಾಗಿ ಮಧ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದಾರೆ ಕೆಂಚಿಕೊಪ್ಪ ಗ್ರಾಮದಲ್ಲಿ ಮಧ್ಯ ಸೇವನೆಯಿಂದ 3 ಯುವಕರು ಮರಣ ಹೊಂದಿದ್ದು ಅವರ ಸಂಸಾರ ಬೀದಿಗೆ ಬಂದಿದೆ.

ಈ ಬಗ್ಗೆ ಅಬಕಾರಿ ಇಲಾಖೆಯವರಿಗೆ ದೂರು ನೀಡಿದರೆ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಎಸ್ಪಿಯವರಿಗೆ ಕೊರತೆಗಳ ಬಗ್ಗೆ ವಿವರಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್ ಬಸವಂತಪ್ಪ ಮಾತನಾಡಿ, ನಗರದ ಪ್ರತಿಷ್ಟಿತ ಬಡಾವಣೆಗಳಲ್ಲಿ

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಮಾತನಾಡಿ, ಸ್ವತಂತ್ರ ಬಂದು 74 ವರ್ಷಗಳು ಕಳೆದರು ನಮ್ಮ ಪಜಾತಿ ಮತ್ತು ಪ.ಪಂಗಡದ ಕುಂದು ಕೊರತೆಗಳು ಇನ್ನು ಕೊರತೆಗಳಾಗಿ ಉಳಿದಿದೆ ಇದು ನಮ್ಮ ದೇಶದ ಅತಿ ದೊಡ್ಡ ದುರಂತ.

ಕೊಳಚೆ ಪ್ರದೇಶಗಳು, ಹಳ್ಳಿಗಳಲ್ಲಿ ಬೀದಿ ಬೀದಿಯಲ್ಲಿ ಯುವಕರು ಹೆಂಡದ ಬಾಟಲಿಗಳನ್ನು ಹಿಡಿದುಕೊಳ್ಳುತ್ತಿದ್ದಾರೆ ಅಬಕಾರಿ ಇಲಾಖೆಯವರು ಇದರ ಬಗ್ಗೆ ಯಾವ ಕ್ರಮ ಜರುಗಿಸಿದ್ದಿರಿ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದರು.

ಜಿಲ್ಲೆಯಲ್ಲಿ 500 ರಿಂದ 600 ಕ್ರಷರ್ ಮಾಲೀಕರಿದ್ದಾರೆ ಇದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರು ಎಷ್ಟಿದ್ದಾರೆ ಕಳೆದ 5 ವರ್ಷಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಶೇ 50 ರಷ್ಟು ಎಸ್ಸಿ ಮತ್ತು ಎಸ್‍ಟಿ ಅಂಗನವಾಡಿ ಕಾರ್ಯಕರ್ತೆಯರನ್ನು ತೆಗೆದುಕೊಳ್ಳಬೇಕು ನೀವು ನೇಮಿಸಿಕೊಂಡಿದ್ದಿರಾ ಅದರ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ವಿಶ್ವದಲ್ಲಿಯೇ ಬಾಬ್ ಸಾಹೇಬ್ ಅಂಬೇಡ್ಕರ್‍ರವರು ಹೆಸರುವಾಸಿಯಾಗಿದ್ದಾರೆ ಆ ಮಹಾನಾಯಕನ ಜೀವನ ಚರಿತ್ರೆಯ ಬಗ್ಗೆ ಜಿ ವಾಹಿನಿಯಲ್ಲಿ ಧಾರವಾಹಿ ಪ್ರಸಾರವಾಗುತ್ತಿದೆ ಆ ವೇಳೆಯಲ್ಲಿ ವಿದ್ವುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಈ ಬಗ್ಗೆ ಕೆಇಬಿ ಅಧಿಕಾರಿಗಳು ಕ್ರಮವಹಿಸಬೇಕು ಇಲ್ಲವಾದಲ್ಲಿ ನಾವು ಧರಣಿ ಕೂರುತ್ತಿವಿ ಎಂದು ಎಚ್ಚರಿಸಿದರು.

ಹೆಗ್ಗೆರೆ ರಂಗಪ್ಪ ಮಾತನಾಡಿ, ನಗರದಲ್ಲಿ ಕೆಲವು ಸಂಘಟನೆಯವರು ಅಂಬೇಡ್ಕರ್ ಪ್ರತಿಮೆಗೆ ಕೋಮುವಾದದ ಬಟ್ಟೆಯನ್ನು ತೊಡಿಸುತ್ತಿದ್ದಾರೆ ಮತ್ತು ಹರಿಹರದಲ್ಲಿರುವ ಪ್ರೋ ಬಿ. ಕೃಷ್ಣಪ್ಪ ಮೈತ್ರಿವನದ ಪಕ್ಕದಲ್ಲಿ ಒಂದು ಬಾರ್ ಇದೆ ಅದನ್ನು ದಯಮಾಡಿ ತೆರವು ಮಾಡಬೇಕು ಹಾಗೂ ಹರಿಹರದ ನಗರಸಭೆ ವೃತ್ತಕ್ಕೆ ಪ್ರೋ ಬಿ. ಕೃಷ್ಣಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕು. ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ತಿಪ್ಪೆ ಖರಾಬಿನಲ್ಲಿ ಕೊರಚ ಸಮುದಾಯದವರು ಗುಡಿಸಲು ಹಾಕಿಕೊಂಡಿದ್ದು ಅಲ್ಲಿರುವ ಪಿಡಿಓ ಅಂಬೇಡ್ಕರ್ ನಾಮಫಲಕವನ್ನು ಕಿತ್ತುಹಾಕಿ ಜಾಗ ಖಾಲಿ ಮಾಡಿಸಿದ್ದಾರೆ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಎಸ್ಪಿಯವರಿಗೆ ಮನವಿ ಮಾಡಿದರು.

ಹೂವಿನಮಡು ಅಂಜಿನಪ್ಪ ಮಾತನಾಡಿ, ಸ್ಮಾರ್ಟ್‍ಸಿಟಿ ಯೋಜನೇಯ ಅಡಿಯಲ್ಲಿ ಎಸ್ಸಿ ಮತ್ತು ಎಸ್ಟಿ ಕಾಲೋನಿಗಳಿಗೆ ಯಾವುದೇ ಯೋಜನೆಗಳ ಕಾಮಗಾರಿ ನಡೆಯುತ್ತಿಲ್ಲ ಅಂಬೇಡ್ಕರ್ ಭವನಕ್ಕೆ ಸರ್ಕಾರ 3 ಕೋಟಿ ಮಂಜೂರು ಮಾಡಿದೆ ಭವನ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ.

ಸಮಾಜ ಕಲ್ಯಾಣ ಇಲಾಖೆಯು ನಮ್ಮ ಮನೆಯಂತೆ ಅಲ್ಲಿರುವ ಅಧಿಕಾರಿಗಳು ನಮ್ಮ ನೋವುಗಳಿಗೆ ನ್ಯಾಯ ಒದಗಿಸಬೇಕು ಆದರೇ ನಾವು ಯಾವ ದೂರುಗಳನ್ನು ಸಮಾಜಕಲ್ಯಾಣ ಅಧಿಕಾರಿಗಳಿಗೆ ದೂರು ನೀಡಿದರು ಆ ದೂರುಗಳ ಬಗ್ಗೆ ಯಾವುದೇ ಕ್ರಮ ಕೈಗ್ಗೊಳುತ್ತಿಲ್ಲ ಬರಿ ಸಬೂಬು ಹೇಳುತ್ತಾರೆ ನಮ್ಮ ಸಮಸ್ಯೆಗಳನ್ನು ಕಲ್ಯಾಣಾಧಿಕಾರಿಗಳಿಗೆ ಹೇಳದೆ ಮತ್ತೆ ಯಾರ ಹತ್ತಿರ ಹೇಳಬೇಕು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್, ಜಿ.ಪಂ ಮುಖ್ಯ ಕಾರ್ಯದರ್ಶಿ ಆನಂದ್, ಆರ್‍ಟಿಓ ಅಧಿಕಾರಿ ಶ್ರೀಧರ್ ಮಲ್ನಾಡ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿಜಯ್‍ಕುಮಾರ್. ಎಸ್ಸಿ ಮತ್ತು ಎಸ್‍ಟಿ ಸಮಾಜದ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *