ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪ್ರವಾಸಿ ಮಂದಿರದಲ್ಲಿ ಇಂದು ದಿನಾಂಕ:-28-09-2020 ರ ಸೋಮವಾರ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿರುವ ಎಪಿಎಂಸಿ ಕಾಯ್ದೆ ವಿದ್ಯುತ್ ಡಿಜಿಟಲೀಕರಣ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿ ಕ್ರಮದಿಂದ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೆ ಸರಿಯಬೇಕು. ಅನುಷ್ಠಾನ ಅನಿವಾರ್ಯವಾಗಿ ಸದುದ್ದೇಶ ವಾಗಿದ್ದರೆ, ಸಾರ್ವಜನಿಕ ವಿಕೃತ ಚರ್ಚೆಯಾಗಿ ಅನುಷ್ಠಾನದ ಸಾಧಕ ಬಾಧಕಗಳ ನಿವಾರಣೆ ಮಾಡಬೇಕು ಅವೈಜ್ಞಾನಿಕ ಅನುಷ್ಠಾನವನ್ನು ತಾಲ್ಲೂಕು ರೈತ ಸಂಘ ವಿರೋಧಿಸುತ್ತದೆ. ಅನ್ನದಾತನ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ಹೇಗೆ ನೀಡಬೇಕು ಎಂಬುವುದರ ಬಗ್ಗೆ ಬೆಳಕು ಚೆಲ್ಲುವ ಖ್ಯಾತ ಕೃಷಿ ತಜ್ಞರಾದ ಡಾ| ಸ್ವಾಮಿ ನಾಥನ್ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಹಾಗೂ ತಾಲ್ಲೂಕಿನ ಬೆಳಗುತ್ತಿ ಹಾಗೂ ಕಸಬಾ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು ಅನುಷ್ಠಾನ ಗೊಳಿಸಬೇಕು ಹಾಗೂ ತಾಲ್ಲೂಕಿನಲ್ಲಿ ಪೋಡಿ ಮುಕ್ತ ಗ್ರಾಮದ ಕಾರ್ಯಕ್ರಮವು ಸಮಗ್ರವಾಗಿ ಅನುಷ್ಠಾನವಾಗಿಲ್ಲ. ಇದನ್ನು ಆದಷ್ಟು ಬೇಗನೆ ಸರಿಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹೊನ್ನಾಳಿ ತಾಲೂಕಿನ ಅಧ್ಯಕ್ಷರಾದ ಜಗದೀಶ್ ಹೆಚ್ ಕಡದಕಟ್ಟೆಯವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ನಂತರ ಮಾತನಾಡಿದ ಅವರು ಹೊನ್ನಾಳಿ ತಾಲೂಕಿನ ದಲಿತ ಸಂಘಟನೆಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣರವರು) ಸಹ ಸಂಘಟನೆ ಬೆಂಬಲ ಘೋಸಿದ್ದಾರೆ ಮತ್ತು ಕಾರ್ಮಿಕ ಸಂಘಟನೆಗಳು, ವರ್ತಕರು, ಆಟೋ ಚಾಲಕ ಸಂಘ ಇನ್ನೂ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ತಾಲೂಕಿನ ಎಲ್ಲಾ ರೈತರು ಬಂದುಗಳು ಈ ಹೋರಾಟಕ್ಕೆ ಬೆಂಬಲ ಕೊಡಬೇಕೆಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಜನರಿಗೆ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ರೈತ ಸಂಘದ ಅಧ್ಯಕ್ಷರು ಜಗದೀಶ್, ಪ್ರದಾನ ಕಾರ್ಯದರ್ಶಿ ಜಿ ವೀರಪ್ಪ, ನರಸಿಂಹಪ್ಪ, ಜಿ.ಎಸ್ ಕಾರ್ಯದರ್ಶಿ, ದಲಿತ ಸಂಘಟನೆಯ ಮುಖಂಡರುಗಳಾದ ತಮ್ಮಣ್ಣ, ಕೊಡತಾಳ್ ರುದ್ರೇಶ್,ಮಂಜಣ್ಣ ಮಾರಿಕೊಪ್ಪ, ಕರಿಬಸಪ್ಪ, ವಿನಯ್, ದರ್ಶನ್ ಬಳ್ಳೇಶ್ವರ, ಇನ್ನೂ ಮುಂತಾದ ರೈತ ಮುಖಂಡರು ಭಾಗಿಯಾಗಿದ್ದಾರು.