ದಾವಣಗೆರೆ. ಸೆ.28
ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ
ಸಂಸ್ಥೆಯಿಂದ ಬಾಪೂಜಿ ಇಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ,
ದಾವಣಗೆರೆ ಇಲ್ಲಿ ಆಯೋಜಿಸಲಾಗಿರುವ ಆರು ದಿನಗಳ
ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಸೆ.25
ರಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶೃತ್ ಡಿ. ಶಾಸ್ತ್ರಿ ಉದ್ಘಾಟಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ಇವರ
ಪ್ರಾಯೋಜಕತ್ವದಲ್ಲಿ ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ
ಸೃಜನೆ ಯೋಜನೆಯಡಿ ಸಾಲ ಮಂಜೂರಾತಿಯಾದ ದಾವಣಗೆರೆ,
ಚಿತ್ರದುರ್ಗ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳ
ಫಲಾನುಭವಿಗಳಿಗೆ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಅವರು
ಮಾತನಾಡಿ, &quoಣ;ಕೋವಿಡ್-19ರ ಕ್ಲಿಷ್ಠಕರ ಪರಿಸ್ಥಿಯಲ್ಲೂ
ಉದ್ಯಮದಾರರಬೇಕೆಂಬ ಹಂಬಲದಿಂದ ತರಬೇತಿ ಪಡೆಯಲು
ಆಗಮಿಸಿರುವ ಎಲ್ಲಾ ಶಿಬಿರಾರ್ಥಿಗಳನ್ನು ಅಭಿನಂದಿಸಿದರು ಹಾಗೂ
ಉದ್ಯಮದಾರರಾಗುವ ಹಂತದಲ್ಲಿ ಎದುರಿಸಬೇಕಾದ ಪ್ರಮುಖ
ವಿಚಾರಗಳ ಬಗ್ಗೆ ತಿಳಿಸಿ ಸಲಹೆಗಳನ್ನು ನೀಡಿದರು ಮತ್ತು ದೇಶ
ಆರ್ಥಿಕವಾಗಿ ಸದೃಢವಾಗಲು ನಾವೇ ಉದ್ಯೋಗವನ್ನು ಸೃಷ್ಠಿಸುವ

ಕಾರ್ಯಕ್ಕೆ ಮುಂದಾಗಬೇಕೆಂದು ಶಿಬಿರಾರ್ಥಿಗಳನ್ನು
ಪ್ರೋತ್ಸಾಹಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ
ನಿರ್ದೇಶಕ ಮಂಜುನಾಥ ಸ್ವಾಮಿ ಬಿ. ಕೆ. ಮಾತನಾಡಿ, ಸಿ.ಎಮ್.ಇ.ಜಿ.ಪಿ
ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ
ಉದ್ಯಮಶೀಲತಾಭಿವೃದ್ಧಿ ತರಬೇತಿಯು ಮೂರನೇ ಹಂತವಾಗಿದ್ದು, ಈ
ಹಂತದಲ್ಲಿ ಶಿಬಿರಾರ್ಥಿಗಳಿಗೆ ಉದ್ಯಮದ ಯಶಸ್ವೀ ನಿರ್ವಹಣೆಗೆ
ಪೂರಕವಾಗುವ ವಿಷಯಗಳಾದ ಸಾಧನಾ-ಪ್ರೇರಣಾ ತರಬೇತಿ,
ಹಣಕಾಸು/ಮಾರುಕಟ್ಟೆ/ಸಿಬ್ಬಂದಿ ನಿರ್ವಹಣೆ, ಸರ್ಕಾರದ ವಿವಿಧ
ಯೋಜನೆಗಳು, ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ
ನೀಡಲಾಗುವದು ಎಂದು ತಿಳಿಸಿದರು.
ಶಿಬಿರಾರ್ಥಿಗಳು ಉದ್ಯಮಲ್ಲಿ ಯಶಸ್ವಿಯಾಗಲು
ಅಳವಡಿಸಿಕೊಳ್ಳಬೇಕಾದ ಗುಣಲಕ್ಷಣಗಳು ಹಾಗೂ ಉದ್ಯಮವನ್ನು
ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರೂ ಉತ್ತಮ ಶ್ರದ್ಧೆ ಹಾಗೂ ಕಠಿಣ
ಪರಿಶ್ರಮದಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು ವಿವಿಧ
ಯಶಸ್ವೀ ಉದ್ಯಮದಾರರ ಉದಾಹರಣೆಗಳನ್ನು ನೀಡುವ ಮೂಲಕ
ಶಿಬಿರಾರ್ಥಿಗಳಿಗೆ ಉದ್ಯಮವನ್ನು ಪ್ರಾರಂಭಿಸಲು ಹಾಗೂ ಅಭಿವೃದ್ಧಿ
ಹೊಂದಲು ಸ್ಪೂರ್ತಿ ನೀಡಿದರು.
ಕಾರ್ಯಕ್ರಮವು ಶಿಬಿರಾರ್ಥಿ ಮೌನೇಶ್ ಬಡಿಗೇರ್ ಪ್ರಾರ್ಥಿಸಿದರು.
ದಾವಣಗೆರೆ ಜಿಲ್ಲೆಯ ಸಿಡಾಕ್ ತರಬೇತಿದಾರರಾದ ವಸಂತಕುಮಾರ
ಕೆ.ಬಿ. ಸ್ವಾಗತಿಸಿದರು. ತರಬೇತುದಾರ ಬಸವರಾಜ ಜಿ. ಬಿ. ವಂದಿಸಿದರು.
ಹಾಗೂ ತರುಬೇತುದಾರರಾದ ಕುಮಾರಿ ಸವಿತ ನಿರೂಪಣೆ ಮಾಡಿದರು
ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *