ದಾವಣಗೆರೆ. ಸೆ.28
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಹರಿಹರ ಇಲ್ಲಿ
2020-21 ನೇ ಸಾಲಿಗೆ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು
ಜೀವನೋಪಾಯ ಇಲಾಖೆ ಅಡಿಯಲ್ಲಿ ತಂತ್ರಜ್ಞಾನ ತರಬೇತಿಗಳ
ಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆ
ಮತ್ತು ಗಿರಿಜನ ಉಪಯೋಜನೆ ಮೂಲಕ ಉಚಿತವಾಗಿ ಕೆಳಕಂಡ
ತರಬೇತಿಗಳನ್ನು ನೀಡಲಾಗುವುದು.
ಎಸ್.ಎಸ್.ಎಲ್.ಸಿ, ಐ.ಟಿ.ಐ, ಡಿಪ್ಲೋಮ, ಬಿ.ಇ ಪಾಸ್ ಆಗಿರುವ 16 ರಿಂದ 45
ವರ್ಷದೊಳಗಿನ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗಾಗಿ
ಉದ್ಯೋಗಾವಕಾಶ ಕಲ್ಪಿಸಲು ಈ ತರಬೇತಿ ನೀಡಲಾಗುವುದು.
ತರಬೇತಿ ಅವಧಿಗೆ ಶಿಷ್ಯವೇತನ ನೀಡಲಾಗುವುದು.
4 ತಿಂಗಳ ಅವಧಿಯ ತರಬೇತಿಗಳಾದ ಸಿಎನ್ಸಿ ಪ್ರೊಗ್ರಾಮರ್,
ಕನ್ವೆನ್ಷನಲ್ ಟರ್ನಿಂಗ್ ಮಷೀನ್ ಆಪರೇಟರ್, ಕನ್ವೆನ್ಷನಲ್ ಮಿಲ್ಲಿಂಗ್
ಮಷೀನ್ ಆಪರೇಟರ್, ಕನ್ವೆನ್ಷನಲ್ ಸರ್ಫೇಸ್ ಗ್ರೈಡಿಂಗ್ ಆಪರೇಟರ್,
ಡಿಸೈನರ್-ಮೆಕ್ಯಾನಿಕಲ್, ಪ್ರೊಡಕ್ಷನ್ ಇಂಜಿನಿಯರ್,
ಯೂನಿಗ್ರಾಫಿಕ್ಸ್(ಯುಜಿ) ಹಾಗೂ 12 ತಿಂಗಳ ಅವಧಿಯ ತರಬೇತಿ
ಟೂಲ್ ರೂಂ ಮಷಿನಿಸ್ಟ್.
ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ
ಮಾರ್ಗದರ್ಶನ ನೀಡಲಾಗುವುದು. ಅರ್ಜಿಗಳು ಹಾಗೂ ಹೆಚ್ಚಿನ
ಮಾಹಿತಿಗಾಗಿ ಪ್ರಾಂಶುಪಾಲರು ಜಿ.ಟಿ.ಟಿ.ಸಿ 22 ಸಿ &ಚಿmಠಿ; ಡಿ , ಕೆ.ಐ.ಎ.ಡಿ.ಬಿ, ಇಂಡಸ್ಟ್ರಿಯಲ್
ಏರಿಯಾ ಹರ್ಲಾಪುರ, ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಹರಿಹರ, ದೂರವಾಣಿ
ಸಂಖ್ಯೆ: 08192-243937, 7019600676, 8711913947, 8884488202
ಸಂರ್ಪಕಿಸಬಹುದೆಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ
ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.