ದಾವಣಗೆರೆ ಸೆ.28
ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕ
ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದ
ಕೆಳಕಂಡ ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ
ಮಂಜೂರು ಮಾಡಲು ನಿಯಮಾನುಸಾರ ನಿಗದಿತ ನಮೂನೆ-ಎ ನಲ್ಲಿ
ಅರ್ಜಿಗಳನ್ನು ಕರೆಯಲಾಗಿದೆ.
ಜಗಳೂರು ತಾಲ್ಲೂಕಿನ ಹೊಸಕೆರೆ ನ್ಯಾಯಬೆಲೆ ಅಂಗಡಿಗೆ
ಅಂತ್ಯೋದಯ-106, ಬಿಪಿಎಲ್-348, ಎಪಿಎಲ್-01 ಒಟ್ಟು 455. ಬ್ಯಾಂಕ್ ಠೇವಣಿÉ
ಮೊತ್ತ ರೂ.50,000 ನಿಗದಿಮಾಡಲಾಗಿದೆ. ಹಾಗೂ ಚನ್ನಗಿರಿ ತಾಲ್ಲೂಕಿನ
ಯಕ್ಕೆಗೊಂದಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಅಂತ್ಯೋದಯ-
25, ಬಿಪಿಎಲ್-297, ಎಪಿಎಲ್-02 ಒಟ್ಟು 324. ಬ್ಯಾಂಕ್ ಠೇವಣಿ ಮೊತ್ತ ರೂ.50,000
ನಿಗದಿಮಾಡಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತ
ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30
ದಿವಸಗಳೊಳಗಾಗಿ ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು
ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ದಾವಣಗೆರೆ ಇವರಿಗೆ
ಸಲ್ಲಿಸಬೇಕಿದೆ.
ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡುವಾಗ
ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ
(ನಿಯಂತ್ರಣ) (ತಿದ್ದುಪಡಿ) ಆದೇಶ 2018 ರಲ್ಲಿ ತಿಳಿಸಿರುವಂತೆ
ಆದ್ಯತೆಗಳನ್ನು ಪರಿಗಣಿಸಲಾಗುವುದು. ರಾಜ್ಯ ಸರ್ಕಾರಿ ಸ್ವಾಮ್ಯದ
ನಿಗಮಗಳು, ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು, ಮತ್ತು
ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಘಗಳು ಹಾಗೂ
ಇತರರು(ವಿಕಲ ಚೇತನರರು, ತೃತೀಯ ಲಿಂಗಿಗಳು) ಸರ್ಕಾರದ
ನಿಯಾಮಾನುಸಾರ ಅರ್ಜಿ ಸಲ್ಲಿಸಬಹುದಾಗಿದೆ. ಸಹಕಾರ ಸಂಘಗಳು
ಕನಿಷ್ಠ 3 ವರ್ಷದ ಹಿಂದೆ ನೊಂದಾಯಿತವಾಗಿರತಕ್ಕದ್ದು ಮತ್ತು
ಮೂರು ವರ್ಷಗಳ ನಿರಂತರ ಚಟುವಟಿಕೆಯಲ್ಲಿದ್ದು, ಎರಡು
ವರ್ಷಗಳಿಂದ ಕನಿಷ್ಠ ಎರಡು ಲಕ್ಷ ರೂಪಾಯಿಗಳ ಮೊತ್ತದ
ಬ್ಯಾಂಕ್ ಬ್ಯಾಲೆನ್ಸ್ ಹೊಂದಿರತಕ್ಕದ್ದು.
ಈ ಮೇಲ್ಕಂಡ ಆದ್ಯತೆ ಹೊರತುಪಡಿಸಿ ಖಾಸಗಿ ವ್ಯಕ್ತಿಗಳಿಗೆ ಅರ್ಜಿ
ಸಲ್ಲಿಸಲು ಅವಕಾಶವಿರುವುದಿಲ್ಲವೆಂದು ದಾವಣಗೆರೆಯ ಆಹಾರ,
ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ
ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.