ದಾವಣಗೆರೆ. ಸೆ.28
ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್
ಬ್ಯಾಂಕ್ (ಐಪಿಪಿಬಿ) ವ್ಯವಸ್ಥೆಯು ಡಿಜಿಟಲ್ ಆನ್ಲೈನ್ ಸೌಲಭ್ಯಗಳನ್ನು ಮನೆ
ಮನೆಗೆ ತಲುಪಿಸಲು ಮುಂದಾಗಿದ್ದು, ಸೆ.29 ರಂದು ಐಪಿಪಿಬಿ ಮಹಾ ಲಾಗಿನ್
ಶೆಡ್ಯುಲ್ ಹಮ್ಮಿಕೊಳ್ಳಲಾಗಿದೆ.
ಇತರ ಬ್ಯಾಂಕ್ ಖಾತೆಗಳಿಂದ ತಮ್ಮ ಹಣ ಶುಲ್ಕವಿಲ್ಲದೇ ಎಇಪಿಎಸ್ ಮೂಲಕ
ಬಿಡಿಸಿಕೊಳ್ಳುವುದರ ಜೊತೆಗೆ ಖಾತೆಗಳಿಂದ ಹಣ ವರ್ಗಾವಣೆ, ನೆಫ್ಟ್
ಮೊಬೈಲ್ ರೀಚಾರ್ಜ್, ಡಿಜಿಟಲ್ ರೀಚಾರ್ಜ್ ಹಾಗೂ ಆನ್ಲೈನ್ ಮೂಲಕ ಅಂಚೆ
ಕಚೇರಿಯ ಆರ್.ಡಿ, ಪಿ.ಪಿ.ಎಫ್ ಸುಕನ್ಯಾ ಸಮೃದ್ದಿ ಖಾತೆಗಳಿಗೆ ಹಣ ಜಮೆ
ಮಾಡಬಹುದಾಗಿದ್ದು ಮುಂತಾದ ಸೌಲಭ್ಯಗಳಿವೆ.
ವಿಧವಾ ವೇತನ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ,
ವಿಕಲಚೇತನ, ಸರ್ಕಾರದ ಸ್ಕಾಲರ್ಶಿಪ್, ಕಿಸಾನ್ ಸಮ್ಮಾನ್, ಗ್ಯಾಸ್ ಸಬ್ಸಿಡಿ ಹೀಗೆ
ಸರ್ಕಾರದ ಹಲವು ಯೋಜನೆಗಳ ಪ್ರಯೋಜನವನ್ನು
ಪಡೆಯಲು ಈ ಖಾತೆಯನ್ನು ಬಳಸಬಹುದು.
ಖಾತೆ ಮಾಡಿಸುವ ವಿಧಾನ : ಐಪಿಪಿಬಿ ಖಾತೆ ಮಾಡಿಸಲು ಸಾರ್ವಜನಿಕರು ತಮ್ಮ
ಆಧಾರ್ ಸಂಖ್ಯೆ, ಮೊಬೈಲ್ ಹಾಗೂ ರೂ.100 ಗಳೊಂದಿಗೆ ಸಮೀಪದ
ಯಾವುದೇ ಅಂಚೆ ಕಚೇರಿ ಅಥವಾ ಪೋಸ್ಟ್ಮ್ಯಾನನ್ನು
ಭೇಟಿಯಾಗಬಹುದು ಹಾಗೂ ಯಾವುದೇ ಅರ್ಜಿಯನ್ನು ತುಂಬುವ
ಅಗತ್ಯವಿರುವುದಿಲ್ಲ.
ಚಿತ್ರದುರ್ಗ ವಿಭಾಗದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ
ಸಾರ್ವಜನಿಕರು ಸೆಪ್ಟೆಂಬರ್ 29 ರಂದು ವಿಶೇಷವಾಗಿ ಈ ಸೌಲಭ್ಯವನ್ನು
ಪಡೆದುಕೊಳ್ಳಬಹುದೆಂದು ಚಿತ್ರದುರ್ಗ ವಿಭಾಗದ ಅಂಚೆ
ಅಧೀಕ್ಷಕ ಓ.ವಿರೂಪಾಕ್ಷಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.