ದಾವಣಗೆರೆ ಅ.09
ಹಿಂಗಾರು ಹಂಗಾಮು ಪ್ರಾರಂಭಗೊಂಡಿದ್ದು , ರೈತರು
ಹಿಂಗಾರು ಬೆಳೆ ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ.
ಮುಖ್ಯವಾಗಿ ಹಿಂಗಾರಿ ಜೋಳ, ಕಡಲೆ, ಕುಸುಬೆ, ಗೋಧಿ ಬೆಳೆ
ಬಿತ್ತನೆ ಕೈಗೊಳ್ಳುವ ರೈತಬಾಂಧವರು ಈ ಕೆಳಕಂಡ
ತಾಂತ್ರಿಕತೆಗಳನ್ನು ಅನುಸರಿಸಲು ಕೋರಿದೆ.
ಬೀಜೋಪಚಾರ: ಮಣ್ಣಿನಿಂದ ಹಾಗೂ ಬೀಜದಿಂದ ಹರಡುವ
ರೋಗಗಳನ್ನು ತಡೆಗಟ್ಟಲು ಹಾಗೂ ಸಸಿಗಳ ಪ್ರಥಮ
ಹಂತದಲ್ಲಿ ಬೇರು ಕೊಳೆ ರೋಗಗಳನ್ನು ತಡೆಗಟ್ಟಲು
ಬೀಜೋಪಚಾರ ಕ್ರಮಗಳನ್ನು ಅನುಸರಿಸುವುದು
ಸೂಕ್ತ. ಕಡಲೆ, ಗೋಧಿ, ಕುಸುಮೆಯಲ್ಲಿ 4 ಗ್ರಾಂ.
ಟ್ರೈಕೊಡರ್ಮಾ ಪ್ರತಿ ಕೆ.ಜಿ. ಬೀಜಕ್ಕೆ ಅಥವಾ 2 ಗ್ರಾಂ.
ಕಾರ್ಬನ್ಡೈಜಿಂ ಪ್ರತಿ ಕೆ.ಜಿ. ಬೀಜಕ್ಕೆ ಬೆರೆಸಿ ಬಿತ್ತನೆ
ಕೈಗೊಳ್ಳುವುದು. ಹಿಂಗಾರಿ ಜೋಳದಲ್ಲಿ 2 ಗ್ರಾಂ.
ಗಂಧಕವನ್ನು ಪ್ರತಿ ಕೆ.ಜಿ ಬೀಜಕ್ಕೆ ಬೀಜೋಪಚಾರÀ ಮಾಡಿ
ಬಿತ್ತನೆ ಕೈಗೊಳ್ಳುವುದು.
ದ್ವಿದಳ ಧಾನ್ಯವಾದ ಕಡಲೆ ಬಿತ್ತನೆ ಬೀಜಕ್ಕÉ 150
ಗ್ರಾಂರೈಜೋಬಿಯಂ, ಉಳಿದ ಬೆಳೆಗಳಿಗೆ 150 ಗ್ರಾಂ
ಅಜಟೋಬ್ಯಾಕಟರ್ ಜೈವಿಕ ಗೊಬ್ಬರಗಳನ್ನು ಲೇಪಿಸಿ ಬಿತ್ತನೆ
ಕೈಗೊಳ್ಳುವುದರಿಂದ, ವಾತಾವರಣದಲ್ಲಿರುವ ಸಾರಜನಕ
ಸ್ಥಿರೀಕರಣಗೊಂಡು, ಮಣ್ಣಿನ ಫಲವತ್ತತೆ
ಸುಧಾರಣೆಯಾಗುತ್ತದೆ. ಸಾವಯವ/ನೈಸರ್ಗಿಕ ಕೃಷಿ
ಅನುಸರಿಸುತ್ತಿರುವ ಕೃಷಿಕರು ಬೀಜಾಮೃತ
ತಯಾರಿಸಿಕೊಂಡು ಬೀಜೋಪಚಾರ ಮಾಡಬಹುದು
ಬೀಜಾಮೃತ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು: 20
ಲೀ. ನೀರು, 5 ಕೆ.ಜಿ. ದೇಸಿ ಹಸುವಿನ ಸಗಣಿ, 5 ಲೀಟರ್ ದೇಸಿ ಹಸುವಿನ
ಗಂಜಲ, 50 ಗ್ರಾಂ ಸುಣ್ಣ, ಒಂದುಬೊಗಸೆ ಜಮೀನಿನ ಫಲವತ್ತಾದ
ಮಣ್ಣು.
ಬೀಜಾಮೃತ ತಯಾರಿಸುವ ವಿಧಾನ: ಬಿತ್ತನೆ ಹಿಂದಿನ ದಿನ
ತೆಳುವಾದ ಹತ್ತಿ ಬಟ್ಟೆಯಲ್ಲಿ 5 ಕೆ. ಜಿ. ಸಗಣಿಯನ್ನು ಕಟ್ಟಿ,
20 ಲೀ. ನೀರಿರುವ ಪ್ಲಾಸ್ಟಿಕ್ ಬಕೆಟ್ / ಡ್ರಮ್ನಲ್ಲಿ ತೂಗುಬಿಡಿ. ಒಂದು
ಲೀ. ನೀರಿನಲ್ಲಿ 50 ಗ್ರಾಂ ಸುಣ್ಣವನ್ನು ಪ್ರತ್ಯೇಕವಾಗಿ ಬೆರೆಸಿ
ತಿಳಿಯಾಗಲು ಬಿಡಿ. ಬಿತ್ತನೆ ಮಾಡುವ ದಿನ ಇಳಿಬಿಟ್ಟಿರುವ ಸಗಣಿ
ಗಂಟನ್ನು ಚೆನ್ನಾಗಿ ಕಲಕಿಸಿ, ಐದಾರು ಬಾರಿ ಹಿಂಡಿ ತೆಗೆಯಿರಿ. ಸುಣ್ಣದ ತಿಳಿ,
ಗಂಜಲ ಹಾಗೂ ಮಣ್ಣನ್ನು ಸಗಣಿ ತಿಳಿಗೆ ಹಾಕಿ ಚೆನ್ನಾಗಿ ಕಲೆಸಿ.
ನಂತರ ಬೀಜಗಳನ್ನು ಒಂದು ನಿಮಿಷ ಮಾತ್ರ
ಬೀಜಾಮೃತದಲ್ಲಿ ಮುಳುಗಿಸಿ ತೆಗೆಯಿರಿ, ನೆರಳಿನಲ್ಲಿ ಒಣಗಿಸಿ ತೇವ
ಆರಿದ ನಂತರ ಬಿತ್ತನೆ ಮಾಡಿ. ಎಂದು ಜಂಟಿ ಕೃಷಿ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.