ದಾವಣಗೆರೆ ಅ,10 ದಾವಣಗೆರೆತಾಲ್ಲೂಕು ಲೋಕಿಕೆರೆ ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಹಲವು
ಮನೆಗಳಿಗೆ ನೀರು ನುಗ್ಗಿದ್ದು ಆ ಮನೆಗಳನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೀಕ್ಷಿಸಿದರು
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಗಿಡ ಗಂಟಿಗಳಿಂದ ತುಂಬಿಕೊಂಡಿರುವ ಚರಂಡಿ ಹಾಗೂ
ಕಲ್ವರ್ಟ್ ಗಳನ್ನು ತಕ್ಷಣ ಸ್ವಚ್ಛಗೊಳಿಸುವಂತೆ ಸೂಚಿಸಿದರು ಹಾಗೂ ಜಲಾವೃತವಾಗಿರುವ ಭತ್ತದ ಗದ್ದೆಗಳನ್ನು ವೀಕ್ಷಿಸಿದರು
ತಹಶೀಲ್ದಾರ್ ಗಿರೀಶ್ ಪಿ.ಆರ್.ಇ.ಡಿ.ಎಂಜನಿಯರ್ ಪರಮೇಶ್ ಇತರೆ ಅಧಿಕಾರಿಗಳಿದ್ದರು.
