ಜ್ಞಾನೇಂದ್ರಿಯಗಳಲ್ಲಿ ಕಣ್ಣು ಕೂಡಾ ಒಂದು. ಬಣ್ಣ, ವಸ್ತು, ಗಾತ್ರ, ಸೌಂದರ್ಯ ಎಲ್ಲವನ್ನೂ ಗುರುತಿಸುವ ಕಣ್ಣು ಪ್ರತಿಯೊಬ್ಬರ ಪ್ರಮುಖ ಅಂಗ. ದೃಷ್ಟಿ ಕಳೆದುಕೊಂಡರೆ ಇಡೀ ಪ್ರಪಂಚವೇ ಕತ್ತಲಿನ ಅನುಭವ. ಅಂಧತ್ವ ಅನ್ನುವುದು ಹುಟ್ಟಿನಿಂದಲೇ ಬಂದಿರಬಹುದು ಅಥವಾ ಇನ್ಯಾವುದೋ ಕಾರಣದಿಂದ ದೃಷ್ಟಿ ಹೀನರಾಗಬಹುದು, ದೃಷ್ಟಿಗೆ ಸಂಬಂಧಿಸಿದ ಕಾಯಿಲೆಗೆ ಒಳಗಾಗಬಹುದು. ಕಣ್ಣು ಸೂಕ್ಷ್ಮ ಅಂಗ ಆಗಿರುವುದರಿಂದ ಕಣ್ಣಿನ ಬಗ್ಗೆ ಕೇರ್ ತೆಗೆದುಕೊಳ್ಳಲೇಬೇಕು. ಆಧುನಿಕ ವೈದ್ಯಕೀಯ ವಿಧಾನಗಳಿಂದಾಗಿ ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದುಕೊಂಡು ಅಂಧತ್ವವನ್ನು ನಿವಾರಿಸಿಕೊಳ್ಳಬಹುದು.
ಅಂಧತ್ವ, ದೃಷ್ಟಿ ಗೋಚರ ದುರ್ಬಲತೆ ಮತ್ತು ಪರಿಹಾರದ ಕುರಿತು ಜಾಗತಿಕವಾಗಿ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ. ದೃಷ್ಟಿ ದೋಷ ನಿವಾರಿಸುವಲ್ಲಿ ಹಲವಾರು ಆಧುನಿಕ ತಂತ್ರಜ್ಞಾನಗಳು ಬಂದಿದ್ದರೂ ಅವುಗಳ ಅರಿವು ಎಲ್ಲರಿಗೂ ಇಲ್ಲ. ಈ ಕುರಿತು ಜಾಗೃತಿ ಮೂಡಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹಲವಾರು ಅಂತರರಾಷ್ಟ್ರಿಯ ಸಂಸ್ಥೆಗಳು ವಿಷನ್ 2020-ದೃಷ್ಟಿಯ ಹಕ್ಕು ಎಂಬ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ. ಇಂದು ವಿಶ್ವದಾದ್ಯಂತ ಅಂಧತ್ವ ಮತ್ತು ದೃಷ್ಟಿ ದೋಷವನ್ನು ತಡೆಯುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಅಂತರಾಷ್ಟ್ರೀಯ ಕುರುಡು ತಡೆಗಟ್ಟುವಿಕೆ ಸಂಸ್ಥೆ ವಿಶ್ವ ದೃಷ್ಟಿ ದಿನವನ್ನು ಆಚರಿಸುತ್ತದೆ. ಅಲ್ಲದೇ ಅನೇಕ ಎನ್ಜಿಒಗಳು, ಅಸೋಸಿಯೇಷನ್ಗಳು, ಸಮುದಾಯಗಳು, ಆರೋಗ್ಯ ಸಂಸ್ಥೆಗಳು, ಲಯನ್ಸ್ ಕ್ಲಬ್, ಆಸ್ಪತ್ರೆಗಳು ಕಣ್ಣಿನ ಪರೀಕ್ಷೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.
ದೀರ್ಘಕಾಲದ ಕುರುಡುತನಕ್ಕೆ ವಯಸ್ಸು ಕೂಡಾ ಒಂದು ಪ್ರಮುಖ ಕಾರಣ. ವಯಸ್ಸಾದಂತೆಲ್ಲಾ ದೃಷ್ಟಿಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ವಯಸ್ಕರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಅಂಧತ್ವದ ಸಮಸ್ಯೆಯಿರುವವರ ಸಂಖ್ಯೆ ಹೆಚ್ಚುತ್ತಿದೆ. 45ಮಿಲಿಯನ್ ಅಂಧತ್ವ ಹೊಂದಿದ ಜನಸಂಖ್ಯೆಯಲ್ಲಿ ಶೇ. 80ರಷ್ಟು ಜನ 50 ವರ್ಷ ದಾಟಿದವರು. ಅದರಲ್ಲಿ ಶೇ. 90ರಷ್ಟು ಜನರು ಕಡಿಮೆ ಆದಾಯ ಹೊಂದಿರುವವರು. ಹಾಗಾಗಿ ಕಣ್ಣಿಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಹಿಂಜರಿಯುತ್ತಾರೆ. ಕಣ್ಣಿನ ಸಮಸ್ಯೆಗಳು ಹಾಗೂ ವಯಸ್ಸಿಗೆ ಸಂಬಂಧಿಸಿದ ಗ್ಲಾಕೋಮ, ಕ್ಯಾಟರ್ಯಾಕ್ಟ್ ನ್ನು ಕಡಿಮೆ ವೆಚ್ಚದಲ್ಲಿ ಗುಣಪಡಿಸಿಕೊಳ್ಳಬಹುದು. ಆರಂಭದಲ್ಲಿಯೇ ಸಮಸ್ಯೆ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಅಂಧತ್ವವನ್ನು ಹೋಗಲಾಡಿಸಬಹುದು.
ಕಣ್ಣಿಗೆ ಸಬಂಧಿಸಿದ ಹಲವು ಕಾಯಿಲೆಗಳಲ್ಲಿ ಶೇ.80ರಷ್ಟನ್ನು ತಡೆಗಟ್ಟಬಹುದು. ಮುಖ್ಯವಾಗಿ ವಕ್ರೀಕಾರಕ ದೋಷ, ಕಣ್ಣಿನ ನವೆ, ಬಾಲ್ಯಕುರುಡುತನ, ದೃಷ್ಟಿ ದೋಷ, ಗ್ಲಾಕೋಮಾ, ಮಧುಮೇಹ ರೆಟಿನೋಪತಿ, ವಯಸ್ಸಿಗೆ ಸಬಂಧಿಸಿದ ಅಂಧತ್ವಗಳನ್ನು ತಡೆಗಟ್ಟುವುದು ವಿಷನ್ 2020’ಯ ಗುರಿಗಳು.
* ದೃಷ್ಟಿ ದೋಷ ಮತ್ತು ಕುರುಡುತನದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು. ಕಣ್ಣಿನ ಸಮಸ್ಯೆ ಕುರಿತು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಸ್ಥೆಗಳೊಂದಿಗೆ ಸಹಕರಿಸುವುದು. ಸೂಕ್ತ
* ವಿಶ್ವದೃಷ್ಟಿ ದಿನದ ಅಂಗವಾಗಿ ಕೆಲವೆಡೆ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರ ಹೊರತಾಗಿ ಪೋಸ್ಟರ್ಗಳನ್ನು ಅಂಟಿಸುವುದು, ಬುಕ್ಲೆಟ್ಗಳನ್ನು ಹಂಚುವುದರ ಮೂಲಕ ಅರಿವು ಮೂಡಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ
ವಿಶ್ವದಾದ್ಯಂತ 285 ಮಿಲಿಯನ್ ಜನ ದೃಷ್ಟಿ ಸಮಸ್ಯೆಯುಳ್ಳವರಿದ್ದಾರೆ. ಅದರಲ್ಲಿ 39ಮಿಲಿಯನ್ ಜನರು ಕುರುಡರು, 246 ಮಿಲಿಯನ್ ಜನರು ಕಡಿಮೆ ದೃಷ್ಟಿವುಳ್ಳವರು. ಶೇ. 80ರಷ್ಟು ಕಾಯಿಲೆಯನ್ನು ತಡೆಗಟ್ಟಬಹುದು. ಕಣ್ಣಿನ ಸಮಸ್ಯೆಯುಳ್ಳ ಶೇ. 90ರಷ್ಟು ಜನರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿದ್ದಾರೆ. ವಿಶ್ವದ ಒಟ್ಟು ಜನಸಂಖ್ಯೆಯ ಶೇ.20ರಷ್ಟು ಜನ 50 ವರ್ಷ ದಾಟಿದವರಾಗಿದ್ದು, ಅದರಲ್ಲಿ ಶೇ.65 ಮಂದಿ ದೃಷ್ಟಿ ದೋಷ ಮತ್ತು ಶೇ.82ರಷ್ಟು ಜನ ಕುರುಡುತನದ ಸಮಸ್ಯೆ ಇರುವವರು
15 ವರ್ಷದ ಮಕ್ಕಳಲ್ಲಿ 19ಮಿಲಿಯನ್ ಮಕ್ಕಳು ದೃಷ್ಟಿಹೀನರಾಗಿರುತ್ತಾರೆ. ಅದರಲ್ಲಿ 12ಮಿಲಿಯನ್ ಮಕ್ಕಳು ವಕ್ರೀಕಾರಕ ದೋಷಗಳಿಂದ. ಕಣ್ಣಿನ ಈ ಸಮಸ್ಯೆಯನ್ನು ಸರಿಪಡಿಸಬಹುದು. 1.4 ಮಿಲಿಯನ್ ಮಾರ್ಪಡಿಸಲಾಗದಂತಹ ಕುರುಡುತನಕ್ಕೆ ಒಳಗಾಗಿದ್ದಾರೆ.
ವಯಸ್ಸಾದ ಮೇಲೆ ದೃಷ್ಟಿ ಸಮಸ್ಯೆ ಉಂಟಾಗುತ್ತದೆ ಅನ್ನುವ ನಂಬಿಕೆಯಿಂದ ಹೊರಬನ್ನಿ. ತಾಯಿಯ ಗರ್ಭದಲ್ಲಿರುವಾಗಲೇ ಮಗುವಿಗೆ ಸಮಸ್ಯೆ ಉಂಟಾಗಬಹುದು. ಹೆರಿಗೆ ಸಮಯದಲ್ಲಿ ಏನಾದರೂ ಸೋಂಕು ಮಗುವಿಗೆ ತಗುಲಬಹುದು. ಅನಂತರ ಎದೆ ಹಾಲು ಕುಡಿಯುವುದನ್ನು ನಿಲ್ಲಿಸಿ ಅನ್ಯ ಆಹಾರ ನಿಡುವ ಸಂದರ್ಭದಲ್ಲಿ ವಿಟಮಿನ್ ಎ ಕೊರತೆ ಉಂಟಾಗಿ ಮಗುವಿನಲ್ಲಿ ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಕಣ್ಣಿನ ಪರೀಕ್ಷೆ ವಯಸ್ಸಾದ ಮೇಲೆ ಅನ್ನುವ ನಿರ್ಲಕ್ಷ್ಯ ಬಿಟ್ಟು ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ರೋಗದ ಹೊರತಾಗಿ ಕಣ್ಣಿಗೆ ಏಟಾದಾಗ, ಕಣ್ಣಿಗೆ ಸುಣ್ಣ ಅಥವಾ ಇತರೇ ರಾಸಾಯನಿಕ ವಸ್ತುಗಳು ಬಿದ್ದರೆ ದೃಷ್ಟಿ ಸಮಸ್ಯೆ ಉಂಟಾಗಬಹುದು. ತಕ್ಷಣ ನೀರಿನಿಂದ ತೊಳೆದುಕೊಳ್ಳಿ. ಆದರೆ ಕಲ್ಲು ಅಥವಾ ಕಬ್ಬಿಣದ ಚೂರು ಕಣ್ಣಿನ ಒಳಕ್ಕೆ ಹೋದರೆ ಉಜ್ಜಿಕೊಳ್ಳದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಕಣ್ಣಿನ ತೊಂದರೆಗೆ ವಯಸ್ಸಿನ ಭೇದವಿಲ್ಲ. ಗಾಯದ ಹೊರತುಪಡಿಸಿಯೂ ನಾನಾ ಕಾಯಿಲೆಗಳು ಯಾವುದೇ ವಯಸ್ಸಿನಲ್ಲಿ ಬರಬಹುದು. ಗಂಭೀರ ಸಮಸ್ಯೆ ಅಂದೆನಿಸದಿದ್ದರೂ ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಅದಲ್ಲದೆ ಕಣ್ಣಿನ ಆರೋಗ್ಯ ವರ್ಧಿಸುವ ಸೊಪ್ಪು, ಮೊಟ್ಟೆ, ಹಾಲು, ಕ್ಯಾರೆಟ್ ಹೆಚ್ಚು ಸೇವಿಸುವುದರಿಂದ ಇವು ನೈಸರ್ಗಿಕವಾಗಿ ಆಂಟಿ ಆಕ್ಸಿಡೆಂಟ್ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಅಕ್ಟೋಬರ್
ಎರಡನೇ ವಾರ ರಾಾಷ್ಟೀಯ ದೃಷ್ಟಿ ದಿನ ಮದು ಮೆ ಹಿ. ಕಾಯಿಲೆ ಇರುವವರಿಗೆ ಕಣ್ಣಿನ ಸಮಸ್ಯೆ ಬಹುಬೇಗ ಕಾಡುತ್ತದೆ. ಆದರೆ ಈ ಬಗ್ಗೆ ಬಹುತೇಕರಲ್ಲಿ ಅರಿವಿಲ್ಲ. ಕಣ್ಣು ಸರಿಯಾಗಿ ಕಾಣಿಸುತ್ತದೆ ಅನ್ನೋ ನಿರ್ಲಕ್ಷ್ಯ ದೃಷ್ಟಿಯನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಸಕ್ಕರೆ ಕಾಯಿಲೆ ಇರುವವರು ವರ್ಷಕ್ಕೊಮ್ಮೆಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ಒಮ್ಮೆ ಮುಗಿದು ಹೋಗುವುದಲ್ಲ. ಜೀವನಪೂರ್ತಿ ತಪಾಸಣೆಗೆ ಒಳಗಾಗಬೇಕು. ಸಮಸ್ಯೆಯಿದ್ದರೆ ಚಿಕಿತ್ಸೆ ಕೂಡ ಪಡೆಯಬೇಕು. ಹಾಗಾಗಿ ಈ ವಿಶ್ವ ದೃಷ್ಟಿ ದಿನವನ್ನು ಜನಸಾಮಾನ್ಯರಿಗೆ ಅರಿವಿನ ಕಾರ್ಯಕ್ರ ವಾಗಬೇಕು ಹಾಗೂ ಎಲ್ಲಾ ಕಣ್ಣಿನ ಆಸ್ಪತ್ರೆ ಗಳಲ್ಲಿ ದಿನಾಚಣೆಯನ್ನಾಗಿ ಆಚರಿಸುವುದರ ಜೊತೆಗೆ ತಜ್ಞ ವೈದ್ಯರ ರಿಂದ ಮಾಹಿತಿ.ಉಚಿತ ತಪಾಸಣೆ ಈ ತರಹ ಅರಿವಿನ ಕಣ್ಣಿನ ಮಹತ್ವದ ಕಾರ್ಯಕ್ರಮವಾದ ಮಾತ್ರ ಈ ದೃಷ್ಟಿ ದಿನಕ್ಕೆ ಒಂದು ಅರ್ಥ ಬರುತ್ತದೆ ಮಾದ್ಯಮ ಮಿತ್ರ .ಕರ್ನಾಟಕ ಭೂಷಣ .ಲೇಖನ ರತ್ನ.ಜಿ ಕೆ ಹೆಬ್ಬಾರ್ ಶಿಕಾರಿಪುರ.Attachments area