ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಡಳಿತ ವತಿಯಿಂದ ಇಂದು ಪಟ್ಟಣ ಪಂಚಾಯಿತಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಮಾರಂಭದ ಧ್ವಜಾರೋಹಣವನ್ನು ಮಾನ್ಯ ತಾಲೂಕು ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾರವರು ದ್ವಜಾರೋಮವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವದ ಸಂದೇಶ ಸಾರಾಂಶದ ಪ್ರತಿಯನ್ನು ಓದಿದರು.
ಅದು ಈ ಕೆಳಗಿನಂತೆ ಇದೆ.👇

ಕರ್ನಾಟಕ ರಾಜ್ಯದಲ್ಲೇ ಕಲೆ, ಸಾಹಿತ್ಯ, ಸಂಸ್ಕೃತಿ, ಶೈಕ್ಷಣಿಕ, ಕ್ರೀಡೆ, ಹಾಗೂ ವಾಣಿಜ್ಯ ನಗರ, ಎಂದು ಹೆಸರಾಗಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿಗೆ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ನಮ್ಮ ಕನ್ನಡ ನಾಡಿಗೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಸುದೀರ್ಘ ಇತಿಹಾಸವಿದೆ. ಕದಂಬ ಕಾಲದ ಹಲ್ಮಿಡಿ
ಶಾಸನವೇ ಇದಕ್ಕೆ ಜೀವಂತ ಸಾಕ್ಷಿಯಾಗಿದೆ.
ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಗೆ ಸಾಧು ಸಂತರ, ಶಿವ ಶರಣರ, ಕವಿ ಪುಂಗವರ ಸಾಹಿತಿಗಳ ಕೊಡುಗೆ ಅಪಾರವಾಗಿದ್ದು ಕನ್ನಡ ನಾಡು ಇವರ ನೆಲೆವೀಡಾಗಿದೆ.

12ನೇ ಶತಮಾನದಲ್ಲಿ ಕ್ರಾಂತಿಯೋಗಿ ಬಸವಣ್ಣ, ಅಕ್ಕಮಹಾದೇವಿ, ದಾಸ ಶ್ರೇಷ್ಠರಾದ ಪುರಂದರದಾಸರು, ಕನಕದಾಸರು,

ಹರಿದಾಸರು ಭಕ್ತಿ ಭಾವಗಳ ಗಾನ ಬೆಳೆಸಿದ ಸಾಧಕರಾಗಿದ್ದಾರೆ.

ಪಂಪ, ರನ್ನ, ಪೊನ್ನ, ನಾಗಚಂದ್ರ, ಹರಿಹರ, ಲಕ್ಷ್ಮೀಶ ಮುಂತಾದ ಕವಿಗಳು ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ.
ವಿಶ್ವಮಾನವ, ರಸ ಋಷಿ ಕುವೆಂಪು ಅವರು ಹೇಳಿರುವಂತೆ“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ
ಕನ್ನಡವಾಗಿರು” “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂದು ಹೇಳಿ ಕನ್ನಡ ಡಿಂಡಿಮ ಬಾರಿಸಿದ್ದಾರೆ.

ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದು 8 ಜ್ಞಾನಪೀಠ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡು ಇತರೆ ಭಾಷೆಗಳಿಗೆ ಮಾದರಿಯಾಗಿದೆ.

ಕಲಾ ಜಗತ್ತಿನಲ್ಲಿ ನಾಟ್ಯ ರಾಣಿ ಶಾಂತಲೆ, ಸಾಹಸದಲ್ಲಿ ವೀರ ರಾಣಿ ಚನ್ನಮ್ಮ, ಧೈರ್ಯದಲ್ಲಿ ವೀರ ವನಿತೆ ಓಬವ್ವ, ರಾಣಿ

ಅಬ್ಬಕ್ಕ ರಂತವರು ಇಂದಿಗೂ ಜನಮಾನಸದಲ್ಲಿ ಉಳಿದಿರುತ್ತಾರೆ.

ನಮ್ಮ ಕನ್ನಡ ನೆಲದಲ್ಲಿ ಜನ್ಮತಾಳಿ ವಿಶ್ವವ್ಯಾಪಿ ಮಾನವರೆನಿಸಿರುವ ಸರ್ ಎಂ ವಿಶ್ವೇಶ್ವರಯ್ಯ, ಕೆಂಗಲ್ ಹನುಮಂತಯ್ಯ, ಡಾ| ಎಸ್ ನಿಜಲಿಂಗಪ್ಪ, ಕಾರಂತ, ಬೇಂದ್ರೆ, ಮಾಸ್ತಿ, ಕುವೆಂಪು ಮುಂತಾದವರು ಮೇಲ್ಪಂಕ್ತಿಯಾಗಿ ನಿಲ್ಲುತ್ತಾರೆ.

ಇಂತಹ ಪವಿತ್ರವಾದ ಕನ್ನಡ ನಾಡು ಸ್ವಾತಂತ್ರ್ಯಾನಂತರ ನವಂಬರ್ 1, 1956 ರಲ್ಲಿ ಹಳೆ ಮೈಸೂರು ರಾಜ್ಯ ಎಂದು ಉಗಮಗೊಂಡ ಇದೇ ನವಂಬರ 1, 1973ರಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು ಇದೇ ಸಂದರ್ಭದಲ್ಲಿ ಚನ್ನವೀರಕಣವಿಯವರು “ಹೆಸರಾಯಿತು. ಕರ್ನಾಟಕ, ಉಸಿರಾಗಲಿ ಕನ್ನಡ” ಎಂದು ಹೇಳಿ ಕನ್ನಡವನ್ನು ಸಾರಸ್ವತ ಲೋಕಕ್ಕೆ

ಕೊಂಡೊಯ್ದರು. ಪ್ರಸಕ್ತ ದಿನಮಾನಗಳಲ್ಲಿ ಕನ್ನಡ ಭಾಷೆಯ ಶ್ರೇಯಸ್ಸಿಗೆ ಅಡ್ಡಿ ಉಂಟುಮಾಡುವ ಅನ್ಯ ಭಾಷೆಗಳ ಪ್ರಭಾವವಿದ್ದರೂ ಶಿಕ್ಷಣ, ಸಂಘಟನೆ, ಹೋರಾಟದಿಂದಾಗಿ ಕನ್ನಡ ಭಾಷೆಯನ್ನು ಪ್ರಬುದ್ಧಮಾನಕ್ಕೆ ತಂದು ಘನತೆಯನ್ನು ಎತ್ತಿ ಹಿಡಿದಿವೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ರಾಜ್ಯದ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು ಅದರಲ್ಲಿ ನಮ್ಮ ಜಿಲ್ಲೆಯ ಡಾ ಎಂ, ಜಿ ಈಶ್ವರಪ್ಪ ಅವರ ಸಾಧನೆಯನ್ನು ಗುರುತಿಸಿ ಆಯ್ಕೆಯಾದ ಇವರನ್ನು ಈ ಸಂದರ್ಭದಲ್ಲಿ ಆಭಿನಂದಿಸೋಣ.

ಸರ್ಕಾರವು ಖಾಸಗಿ ಉದ್ದಮೆಯ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆಧ್ಯತೆ ನೀಡುವ ಮಹತ್ವದ ವಿಧೇಯಕವನ್ನು ಸಿದ್ಧಪಡಿಸಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೊಸ ಆಶಾಕಿರಣ ಮೂಡಿದಂತಾಗಿದೆ.

ಇನ್ನು ತಾಯಿ ಕನ್ನಡಾಂಬೆ, ಭುವನೇಶ್ವರಿಯ ಕೃಪೆಯಿಂದಾಗಿ ಕರ್ನಾಟಕದಲ್ಲಿ ಕರೋನ ವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿರುವುದು ಸಂತಸಕರ ವಿಷಯವಾಗಿದೆ. ಹಾಗೇಂದು ಮೈಮರೆತರೆ ಪುನ: ವೈರಸ್ ಹೆಚ್ಚಾಗುವ ಸಾಧ್ಯತೆ ಇದ್ದು, ಈಗಾಗಲೇ ಹಲವು ದೇಶಗಳಲ್ಲಿ ಅಂದರೆ ಅಮೇರಿಕ, ನೆದರಲ್ಯಾಂಡ್, ಫ್ರಾನ್ಸ್, ಇಟಲಿ, ಇಸ್ರೇಲ್ ಸನ್, ದೇಶಗಳಲ್ಲಿ ಪುನಃ ಹೆಚ್ಚಾಗುತ್ತಿದ್ದು, ಇದನ್ನರಿತು ನಾವೆಲ್ಲರೂ ಜಾಗ್ರತರಾದ್ದಲ್ಲಿ ಕರೋನ ವೈರಸ್ ನಿಯಂತ್ರಿಸಲು ಸಾಧ್ಯ. ಕಾರಣ, ನಾವೆಲ್ಲ ಜಾಗರೂಕರಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರೊಂದಿಗೆ ವೈರಸ್ ವಿರುದ್ಧದ ಹೋರಾಟಕ್ಕೆ ಕನ್ನಡಿಗರಲ್ಲಾ ಕೈ ಜೋಡಿಸಬೇಕಾಗಿದೆ. ಆಗ ಮಾತ್ರ ಇಂತಹ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯ ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ಕೋರಿ ಹೋರಾಡೋಣ.

ಕನ್ನಡಿಗರಾದ ನಾವೆಲ್ಲರೂ ಎಳೇಳು ಜನ್ಮ ಬಂದರೂ ಇದೇ ಮಣ್ಣಲ್ಲಿ ಹುಟ್ಟಿ ಬೆಳೆಯುವ ಭಾಗ್ಯ ಕನ್ನಡಾಂಬೆ ಕರುಣಿಸಲಿ; ಕನ್ನಡ ನೆಲ, ಜಲ, ಭಾಷೆಯನ್ನು ರಕ್ಷಿಸೋಣ ಹಾಗೂ ಬೆಳೆಸೋಣ ಎನ್ನುತ್ತಾ ಕನ್ನಡವೇ ಸತ್ಯ ಕನ್ನಡವೇ ನಿತ್ಯವಾಗಲಿ ಎಂದು ಹಾರೈಸುತ್ತಾ ಮತ್ತೊಮ್ಮೆ ತಮ್ಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ದಾವಣಗೆರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದೀಪಾ ಜಗದೀಶ್, ತಾಲೂಕು ದಂಡಾಧಿಕಾರಿಗಳಾದ ತುಷಾರ್ ಬಿ ಹೊಸುರಾ, ಸರ್ಕಲ್ ಇನ್ಸ್ಪೆಕ್ಟರ್ ರಾದ ಟಿ.ವಿ ದೇವರಾಜ್, ಎಸ್.ಐ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎಸ್.ಆರ್ ವೀರಭದ್ರಯ್ಯ, BEO ಜಿ.ಇ ರಾಜೀವ್,EEO ಗಂಗಾಧರಮೂರ್ತಿ, ಇನ್ನೂ ಮುಂತಾದ ತಾಲೂಕು ಅಧಿಕಾರಿಗಳ ವರ್ಗ ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *